ಬೇಸಿಗೆಯ ಬಿಸಿಲಿನಿಂದ ತಂಪಾಗಿ ಇರಬೇಕು ಅಂದರೆ? ಹಾಗಿದ್ರೆ ನಿತ್ಯವೂ ಉಪಯೋಗಿಸಿ ಸೌತೆಕಾಯಿ ಜ್ಯೂಸ್…

Health & Fitness ಎಲ್ಲ ನ್ಯೂಸ್

ಹಸಿ ತರಕಾರಿಗಳನ್ನು ತಿನ್ನಲು ಯಾವುದೇ ಕಾಲಮಾನಗಳನ್ನು ನೋಡುವ ಅನಿವಾರ್ಯತೆ ಇರುವುದಿಲ್ಲ. ದೇಹಕ್ಕೆ ಎಷ್ಟು ಬೇಕು ಅಷ್ಟು ನೀವು ಹಸಿ ಸೊಪ್ಪು ಮತ್ತು ತರಕಾರಿಗಳನ್ನು ಸೇವನೆ ಮಾಡಬಹುದು. ಆದರೆ ವಾತಾವರಣದ ಅನುಸಾರವಾಗಿ ಆಹಾರ ಸೇವನೆ ಮಾಡಿದರೆ ಆರೋಗ್ಯವಂತರಾಗಿ ಇರಬಹುದು. ಇನ್ನ ಬೇಸಿಗೆ ಬಂದರೆ ಆ ಧಗೆಯನ್ನು ತಡೆದುಕೊಳ್ಳುವುದು ಅಸಾಧ್ಯ, ನಿತ್ಯದಲ್ಲೂ  ಸ್ವಚ್ಛವಾದ ನೀರನ್ನು ಕುಡಿಯಬೇಕು. ಕಂಡಕಂಡಲ್ಲಿ ನೀರನ್ನು ಕುಡಿದರೆ ಇದರಿಂದ ಹಲವಾರು ತೊಂದರೆಗಳಿಗೆ ಗುರಿಯಾಗು ವಂತಾಗುತ್ತದೆ. ಸಾಧ್ಯವಾದಷ್ಟು ಆಚೆ ಕಡೆ ಹೋಗುವಾಗ ಬಾಟಲಗಳಲ್ಲಿ  ನೀರು ತೆಗೆದುಕೊಂಡು ಹೋಗುವುದು ಉತ್ತಮ. ಮನೆಯಲ್ಲಿ ಫ್ರಿಜ್ ಇದ್ದರೆ ಅದರಲ್ಲಿ ನೀರು ತುಂಬಿಟ್ಟುಕೊಂಡು ಕುಡಿಯುವುದು ಉತ್ತಮ. ಇನ್ನ ಬೇಸಿಗೆಯಲ್ಲಿ ಆಹಾರದ ಸೇವನೆ ತುಂಬಾನೇ ಕಡಿಮೆ ಇರುತ್ತೆ ನೀರು ಜ್ಯೂಸ್ ಐಸ್ ಕ್ರೀಂ ಇಂತಹ ತಂಪಾದ ಪಾನೀಯಗಳು ಮನಸೋತು ಬಿಡುತ್ತದೆ. ಮನೆಯಲ್ಲಿ ಗಡಿಗೆಯನ್ನು ಇರಿಸಿ ಅದರಲ್ಲಿ ನೀರು ಹಾಕಿಕೊಂಡು ಕುಡಿಯಬಹುದು ಇದರಿಂದ ಯಾವುದೇ ಹಾನಿ ನಮ್ಮ ದೇಹಕ್ಕೆ ಉಂಟಾಗುವುದಿಲ್ಲ. ಹಿಂದಿನ ಕಾಲದಲ್ಲಿ ಈ ತರಹದ ವಿಧಾನಗಳನ್ನು ಅನುಸರಿಸುತ್ತಿದ್ದರು ಇದರಿಂದ ಅವರು ಶತಾಯುಷಿಗಳಾಗಿ ಜೀವನ ನಡೆಸುತ್ತಿದ್ದರು, ಆದರೆ ಈಗಿನ ಒತ್ತಡದ ಬದುಕಿನಲ್ಲಿ ಯಾವುದು ಸಾಧ್ಯವಿಲ್ಲ. ಬೇಸಿಗೆಯಲ್ಲಿ ಸಾಧ್ಯವಾದ ಮಟ್ಟಿಗೆ ತಣ್ಣಗಿರುವ ಮಜ್ಜಿಗೆ, ತಂಪಾಗಿರುವ ನೀರು, ಮತ್ತು ಸೌತೆಕಾಯಿ ಗಳಂತಹ ನೀರಿನ ಅಂಶ ಇರುವ ತರಕಾರಿಗಳು ಸೇವನೆ ಅತ್ಯವಶ್ಯಕ.

ಇದರಿಂದ ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಇದು ನೋಡಿಕೊಳ್ಳುತ್ತದೆ ಬೇಸಿಗೆಯಲ್ಲಿ ಸೌತೆಕಾಯಿ ಅನ್ನು ಹೆಚ್ಚಾಗಿ ತಿನ್ನುವುದರಿಂದ ಬಿಸಿಲಿನ ಧಗೆಗೆ ದೇಹದಿಂದ ಸೋರಿ ಹೋಗುವ ಬೆವರನ್ನು ಕಡಿಮೆಗೊಳಿಸಬಹುದು ಇದರಲ್ಲಿ ಸಾಕಷ್ಟು ಉಪಯುಕ್ತವಾದ ಆಹಾರ ಮಾಡಿಕೊಳ್ಳಬಹುದು. ಸೌತೆಕಾಯಿಯಲ್ಲಿ ವಿಟಮಿನ್ ಕೆ, ಮ್ಯಾಗನೀಸ್, ಪೊಟ್ಯಾಶಿಯಂ, ವಿಟಮಿನ್ ಸಿ, ಮೆಗ್ನೀಷಿಯಂ, ಬಯೋಟಿನ್, ವಿಟಮಿನ್ ಬಿ, ಪಾಸ್ಪರಸ್, ಇಷ್ಟೇ ಅಲ್ಲದೆ ಬೆವರಿನ ಮೂಲಕ ನಶಿಸುವ ಖನಿಜ ಲವಣಗಳನ್ನು ನೀವು ಪಡೆಯಬಹುದು. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುವ ಕಾರಣ ಇದು ಮಲಬದ್ಧತೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗುತ್ತದೆ. ಕೆಲಸಕ್ಕೆ ಹೋಗುವವರು ಮನೆಯಲ್ಲಿ ತಿನ್ನಲು ಆಗದೇ ಇರುವವರು ಸೌತೆಕಾಯಿಯನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಕೊಂಡು ಅದಕ್ಕೆ ಟೊಮ್ಯಾಟೋ,

ಈರುಳ್ಳಿ, ಅಚ್ಚಕಾರದ ಪುಡಿ, ಉಪ್ಪು ಹಾಕಿಕೊಂಡು ಬೆರೆಸಿ ಸಲಾಡ್ ಮಾಡಿಕೊಂಡು ತಿನ್ನಬಹುದು. ಇನ್ನು ಇದರ ಜ್ಯೂಸ್ ಕುಡಿಯೋದ್ರಿಂದ ನಿಮ್ಮ  ಬೇಡದಿರುವ ತೂಕ ಇಳಿಸಲು ಕೂಡ ಇದು ತುಂಬಾ ಸಹಕಾರಿ. ಸಾಧ್ಯವಾದಷ್ಟು ಮಟ್ಟಿಗೆ ಬೆಳಗ್ಗೆ ನಸುಕಿನ ವೇಳೆಯಲ್ಲಿ ಖಾಲಿ ಹೊಟ್ಟೆಗೆ ಸೌತೆಕಾಯಿ ರಸವನ್ನು ಕುಡಿದರೆ ನಿಮ್ಮ ದೇಹಕ್ಕೆ ಆಗುವ ಲಾಭಗಳು ಅಷ್ಟಿಷ್ಟಲ್ಲ, ನಿಮಗೆ ಆರೋಗ್ಯಕರವಾದ ಜೀವನ ಬೇಕು ಎಂದಾದರೆ ಅದಕ್ಕೆ ನಿತ್ಯ ಉಪಯೋಗಿಸಿ ಸೌತೆಕಾಯಿ ಜ್ಯೂಸ್. ಇನ್ನು ಈ ಸೌತೆಕಾಯಿ ಜ್ಯೂಸ್ ಮಾಡುವ ವಿಧಾನವನ್ನು ಈ ಕೆಳಗೆ ನೋಡಿ.

**ಬೇಕಾಗಿರುವ ಸಾಮಾಗ್ರಿಗಳು**

*ಸಿಪ್ಪೆ ತೆಗೆದಿರುವ ಸೌತೆಕಾಯಿ ಒಂದು ಬಟ್ಟಲು.

* ಅರ್ಧ ಅಥವಾ ಒಂದು ಲೋಟ ನೀರು.

* ರುಚಿಗೆ ತಕ್ಕಷ್ಟು ಉಪ್ಪು.

* ಐಸ್ ಕ್ಯೂಬ್ಸ್.

*ಶುಂಠಿ

*ಪುದಿನ ಎಲೆಗಳು

*ನಿಂಬೆ ಹಣ್ಣಿನ ರಸ

** ಮಾಡುವ ವಿಧಾನ**

* ಮೊದಲಿಗೆ ಮಿಕ್ಸಿ ಜಾರಿಗೆ ಸಣ್ಣದಾಗಿ ಹೆಚ್ಚಿಟ್ಟುಕೊಂಡಿರುವ ಸೌತೆಕಾಯಿ ಹೋಳುಗಳನ್ನು ಮತ್ತು ಶುಂಠಿಯನ್ನು ಹಾಕಿಕೊಳ್ಳಬೇಕು.

* ನಂತರ ನೀರು ಬೇಕೆನಿಸಿದರೆ ಅದರ ಅಳತೆಗೆ ತಕ್ಕಂತೆ ನೀರು ಹಾಕಿಕೊಂಡು, ಪುದಿನ ಎಲೆಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.ಇಲವಾದಲ್ಲಿ ಜ್ಯೂಸ್ ರೆಡಿ ಆದ ಮೇಲೆ ಮಿಂಟ್/ ಪುದಿನ ಎಲೆಗಳನ್ನು ಹಾಕಬಹುದು.

* ಅದನ್ನು ಒಂದು ಪಾತ್ರೆಗೆ ತೆಗೆದು ಕೊಳ್ಳಬೇಕು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಅರ್ಧ ಟೀ ಸ್ಪೂನ್ ನಿಂಬೆ ರಸ       ಹಾಕಿಕೊಳ್ಳಬಹುದು ನಂತರ ಐಸ್ ಕ್ಯೂಬ್ ಹಾಕಿದರೆ ಸೌತೆಕಾಯಿ ಜ್ಯೂಸ್ ಕುಡಿಯಲು ಸಿದ್ಧ.

* ಸಕ್ಕರೆ ಅಥವಾ ಜೇನುತುಪ್ಪದೊಂದಿಗೆ ಇದನ್ನು ಸೇವಿಸಬಹುದು.

ಈ ತರಹದ ಹಲವಾರು ನೀರಿನ ಅಂಶ ಇರುವ ತರಕಾರಿಗಳು ಸೇವನೆ ಬೇಸಿಗೆಯಲ್ಲಿ ತುಂಬಾ ಮುಖ್ಯವಾಗಿರುತ್ತದೆ. ನೀರಿನ ಅಂಶ ಇರುವ ತರಕಾರಿಗಳನ್ನೂ ಹೆಚ್ಚಾಗಿ ಸೇವಿಸಿ  ಬೇಸಿಗೆಯಲ್ಲಿ ಬರುವ ರೋಗಗಳಿಂದ ದೂರವಿರಿ.

Leave a Reply

Your email address will not be published. Required fields are marked *