ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸಿ ಆರೋಗ್ಯ ಹೆಚ್ಚಿಸೋಕೆ ಈ ಜ್ಯೂಸ್… ಯಾವ್ದು ಆ ಜ್ಯೂಸ್ ?

Health & Fitness ಎಲ್ಲ ನ್ಯೂಸ್

ಬೇಸಿಗೆ ಬಂತು ಅಂದ್ರೆ ಸಾಕು ಬಿಸಿಲಿನ ಅಬ್ಬರ ಜಾಸ್ತಿ, ಹಾಗೆ ಬಿಸಿಲಿನಿಂದ ಬರೋ ರೋಗಗಳು ಜಾಸ್ತಿನೇ, ಪಿತ್ತ, ಕಾಲರಾ, ಡಿಹೈಡ್ರೇಶನ್, ಹೂಟ್ಟೆ ಉಬ್ಬರ, ವಾಂತಿ, ತಲೆನೋವು, ಮತ್ತು ಪದೇ ಪದೇ ಬಾಯಾರಿಕೆ ಈ ರೀತಿಯ ಹಲವಾರು ಚಿಕ್ಕ ಪುಟ್ಟ ಸಮಸ್ಯೆಗಳನ್ನು ದೂರ ಮಾಡೋಕೆ ಈ ಒಂದು ಪುದೀನಾ ಜ್ಯೂಸ್ ಸಹಾಯಕಾರಿ ಹೇಗೆ ಮಾಡೋದು ಅಂತ ತಿಳ್ಕೊಬೇಕಾ…

ಪುದೀನಾ 1ಕಟ್ಟು

ಸಕ್ಕರೆ ಅಥವಾ ಬೆಲ್ಲ 5 ರಿಂದ 6 ಸ್ಫೂನ್

ಶುಂಠಿ 1ಇಂಚು

ಉಪ್ಪು 1ಸ್ಪೂನ್

ಜೀರಿಗೆ ಮೆಣಸಿನ ಪುಡಿ 1 ಸ್ಫೂನ್.

ಪುದೀನಾ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ, ಶುಂಠಿ ಯನ್ನು ತೊಳೆದು ಸಿಪ್ಪೆತೆಗೆದು ಹೆಚ್ಚಿಕೊಳ್ಳಿ, ಪುದೀನಾ ಮತ್ತು ಶುಂಠಿ ಎರೆಡನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬಿಕೊಳ್ಳಿ.

ಬೆಲ್ಲ ಅಥವಾ ಸಕ್ಕರೆಯನ್ನು 4 ಲೋಟ ನೀರಿಗೆ ಹಾಕಿ ಕರಗಿಸಿ ಕೊಳ್ಳಿ, ಈ ನೀರಿಗೆ ರುಬ್ಬಿದ ಪುದೀನಾ ಶುಂಠಿಯನ್ನು ಬೆರೆಸಿ ಸ್ವಲ ಸಮಯ ಹಾಗೆ ಇಡಿ.

ಪುದೀನಾ ಬೆರೆಸಿದ ನೀರನ್ನು ಶೋದಿಸಿ ಅದಕ್ಕೆ ಉಪ್ಪು , ಜೀರಿಗೆ ಮೆಣಸುಬೆರೆಸಿ.

ಪುದೀನಾ ಜ್ಯೂಸ್ ರೆಡಿ ಬೇಕಾದರೆ ಇದಕ್ಕೆ ಒಂದು ನಿಂಬೆಹಣ್ಣಿನ ರಸ ಬೆರೆಸಿ ಕೊಳ್ಳಿ.

ಪುದೀನದಲ್ಲಿ ಹೆಚ್ಚಿನ ಔಷಧೀಯ ಗುಣಗಳಿದ್ದು ಜೀರ್ಣಕ್ರಿಯೆಗೆ ಸಹಾಯಕಾರಿ, ಮತ್ತು ಒಂದು ಒಳ್ಳೆಯ ಆರೋಗ್ಯಕಾರಿ ಪಾನೀಯ ಆಗಿರುವುದರಿಂದ ಬೇಸಿಗೆಯಲ್ಲಿ ಇದರ ಸೇವನೆ ಲಾಭದಾಯಕವಾಗಿದೆ.

Leave a Reply

Your email address will not be published. Required fields are marked *