ನಿಮ್ಮಲ್ಲಿ ಅತಿಯಾದ ಬೊಜ್ಜಿನ ಸಮಸ್ಯೆ ಇದೆಯೇ? ಹಾಗಾದರೆ ಈ ವಿಧಾನಗಳನ್ನು ಅನುಸರಿಸಿ…

Health & Fitness ಎಲ್ಲ ನ್ಯೂಸ್

ಹೊಲ ಗದ್ದೆಗೆ ಕೆಲಸಕ್ಕೆ ಹೋಗುವ ಜನರಲ್ಲಿ ಬೊಜ್ಜಿನ ಸಮಸ್ಯೆ ಕಡಿಮೆಯಾಗಿರುತ್ತದೆ. ಊಟಕ್ಕೆ ತಕ್ಕಂತೆ ಕೆಲಸ ಅನ್ನುವ ಹಾಗೆ ಮೈ ಬಗ್ಗಿಸಿ ದುಡಿಯುರಲ್ಲಿ ಅನೇಕ ರೀತಿಯ ರೋಗಗಳು ಹಂತವರಿಂದ ದೂರ ಇರುತ್ತವೆ. ಇನ್ನು ಸಿಟಿ ಲೈಫನಲ್ಲಿ ಪ್ರತಿಯೊಬ್ಬರೂ ಬ್ಯುಸಿ ಆಗಿರುತ್ತಾರೆ. ಜಂಕ್ ಫುಡ್ ಅಥವಾ ಫಾಸ್ಟ್ ಫುಡ್ ತಿನ್ನುಅಭ್ಯಾಸ ಇದ್ದರೆ ಬೊಜ್ಜು ಕರುಗುವುದು ಅಸಾಧ್ಯ. ಯೋಗ, ವ್ಯಾಯಾಮಗಳನ್ನು ಮಾಡಿ. ಆಚೆ ಆಹಾರವನ್ನು ತಿಂದರೆ ಏನು ಪ್ರಯೋಜನ ಅಲ್ಲವೆ. ನಿಮ್ಮ ಆರೋಗ್ಯದ ಪದ್ದತಿಯ ಮೇಲೆ ದೇಹದ ಸ್ಥಿತಿ ಇರುತ್ತದೆ. ಸಾಧ್ಯವಾದಷ್ಟು ಆಹಾರದ ಪದ್ದತಿ ಯಾವಾಗಲು ಚೆನ್ನಾಗಿ ಇರಬೇಕು. ಇನ್ನ ಏನೆಲ್ಲ ಮಾಡಿದರು ಹೊಟ್ಟೆಯ ಬೊಜ್ಜು ಕರಗಿಲ್ಲ ಅನ್ನೂರು ಈ ತರಹದ ಮನೆಮದ್ದುಗಳನ್ನು ಬಳಸಿ…

* ಶುಂಠಿ*

ಎಲ್ಲರ ಮನೆಯಲ್ಲೂ ಸರ್ವೇಸಾಮನ್ಯವಾಗಿ ಶುಂಠಿಯನ್ನು ಬಳಸುತ್ತೆವೆ. ಅಡಿಗೆ, ಚಟ್ನಿ ಮಾಡಲು ಹೀಗೆ ಒಂದಲ ಒಂದಕ್ಕೆ ಶುಂಠಿಯನ್ನು ಬಳಕೆ ಮಾಡಲಾಗುತ್ತದೆ. ಆದರೆ ಬೊಜ್ಜು ಕರಗಿಸಲು ಇದು ತುಂಬಾನೇ ಸಹಕಾರಿಯಾಗುತ್ತದೆ. ಒಂದು ಗ್ಲಾಸ್ ಹಾಲಿಗೆ ಒಂದು ಸ್ಪೂನ್ ಶುಂಠಿ ಪೌಡರ್ ಅನ್ನು ಬೆರಸಿ ಕುಡಿದರೆ ಬೊಜ್ಜು ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ.

* ಗೋದಿ ಹುಲ್ಲು *

ಗೋದಿ ಹುಲ್ಲುನ್ನು ನಿತ್ಯದಲ್ಲೂ ಜ್ಯೂಸ್ ಮಾಡಿ ಕುಡಿಯವರು ಇದ್ದಾರೆ. ಇದರಲ್ಲಿ ನಾರಿನ ಅಂಶ, ಕಬ್ಬಿನಾಂಶ, ಪ್ರೊಟೀನ್ ಇರುವ ಕಾರಣ ದೇಹದಲ್ಲಿ ಬೊಜ್ಜು ಕೂಡದಂತೆ ನೋಡಿಕೊಳ್ಳುತ್ತದೆ. ನಿತ್ಯದಲ್ಲೂ ಗೋದಿ ಹುಲ್ಲಿನ ಜ್ಯೂಸ್ ಕುಡಿಯಿರಿ ಬೊಜ್ಜಿನಿಂದ ಮುಕ್ತಿ ಕಂಡುಕೊಳ್ಳಿ.

*ಗ್ರೀನ್ ಟೀ*

ಸಾಮನ್ಯವಾಗಿ ಈಗ ಎಲ್ಲರೂ ಗ್ರೀನ್ ಟೀ ಕುಡಿಯು ಅಭ್ಯಾಸ ರೂಡಿಸಿಕೊಂಡಿರ್ತಾರೆ. ನಿತ್ಯದಲ್ಲೂ ಇದನ್ನು ಉಪಯೋಗಿಸಬೇಕು ಇದರಲ್ಲಿ ಕೊಲೆಸ್ಟ್ರಲ್ ನಿಯಂತ್ರಣ ಮಾಡುವ ಶಕ್ತಿ ಇರುವ ಕಾರಣ ದಿನಕ್ಕೆ ೨ ಬಾರಿ ಗ್ರೀನ್ ಟೀ ಕುಡಿಯೋ ಅಭ್ಯಾಸ ರೂಡಿಸಿಕೊಳ್ಳಿ ಇದು ಆಂಟಿಆಕ್ಸಿಡೆಂಟ್ ಹೊಂದಿರುತ್ತದೆ. ಇದು ಬೊಜ್ಜು ಇಳಿಸುವಿಕೆಯಲ್ಲಿ ಸಹಕಾರಿಯಾಗುತ್ತದೆ.

*ಕೆಂಪು ಮೆಣಸಿನಕಾಯಿ*

ಕೆಂಪು ಮೆಣಸಿನಕಾಯಿ ಆಹಾರದಲ್ಲಿ ಬಳಸುವುದರಿಂದ ಇದು ಜೀರ್ಣ ಕ್ರಿಯೆಯನ್ನು ಚೆನ್ನಾಗಿ ಮಾಡಿಸುತ್ತದೆ.ಇಷ್ಟೇ ಅಲ್ಲದೆ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿತ್ಯ ಆಹಾರದಲ್ಲಿ ಕೆಂಪು ಮೆಣಸಿನಕಾಯಿ ಬಳಸಿ ಕ್ರಮೇಣ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ.

*ನಿಂಬೆ ಹಣ್ಣು *

ಹೃದಯದ  ಸಮಸ್ಯೆ ಇದ್ದವರು ನಿಂಬೆ ಹಣ್ಣನ್ನು ಹೆಚ್ಚಾಗಿ ಬಳಸಬೇಕು. ಪಿತ್ತ ಸಮಸ್ಯೆ ಇದ್ದವರು ಕೂಡ ಇದರ ಬಳಕೆ ಮಾಡಬಹುದು.ನಿತ್ಯದಲ್ಲೂ ನಿಂಬೆ ಹಣ್ಣಿನ್ನು ಉಪಯೋಗಿಸಿ ಬೊಜ್ಜಿನಿಂದ ಮುಕ್ತಿ ಪಡಿಯಿರಿ.

Leave a Reply

Your email address will not be published. Required fields are marked *