ಗಂಟಲಿನ ಸಮಸ್ಯೆಗಳಿಗೆ ತೂಕ ಇನ್ನು ಮುಂತಾದ ಸಮಸ್ಯೆಗಳಿಗೆ ಆಪಲ್ ವಿನೆಗರ್ ನಲ್ಲಿದೆ ಪರಿಹಾರ..!

Health & Fitness ಎಲ್ಲ ನ್ಯೂಸ್

ಗಂಟಲಿನ ಸಮಸ್ಯೆಗೆ: ನೋಯುತ್ತಿರುವ ಗಂಟಲಿಗೆ ಈ ವಿನೆಗರ್ ಮನೆ ಔಷಧಿಯಂತೆ ಕೆಲಸ ಮಾಡುತ್ತದೆ. ಗಂಟಲು ಕಫ್, ಹಾಗೂ ಗಂಟಲಿನ ಸಮಸ್ಯೆಗೆ ಇದು ರಾಮಬಾಣವಿದ್ದಂತೆ. 1/4 ಕಪ್ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದರಲ್ಲಿ 1/4ರಷ್ಟು ಬೆಚ್ಚಗಿನ ನೀರು ಸೇರಿಸಿ ಬಾಯಿ ಮುಕ್ಕಳಿಸಬೇಕು.

ಉಸಿರುಗಟ್ಟಿಸುವ ಮೂಗು: ಮೂಗು ಉಸಿರುಗಟ್ಟುತ್ತಿದ್ದರೆ ಆಪಲ್ ವಿನೆಗರ್ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲದ್ದು.. ಕೋಲ್ಡ್ ಆಗಿದ್ದರೆ ನಿಮ್ಮ ಹತ್ತಿರ ಆಪೆಲ್ ಸೈಡರ್ ವಿನೆಗರ್‌ನ್ನು ಇಟ್ಟುಕೊಂಡಿರಬೇಕು.

ತೂಕ ಇಳಿಕೆ: ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ತೂಕ ಇಳಿಕೆ ಮಾಡಲು ಸಹಾಯಕಾರಿಯಾಗುತ್ತದೆ. ವಿನೆಗರ್‌ನಲ್ಲಿ ಆ್ಯಸ್ಟಿಕ್ ಆ್ಯಸಿಡ್ ಎಂಬ ಅಂಶವಿರುವುದರಿಂದ ಪದೇ ಪದೇ ಹಸಿವು ಆಗುವುದನ್ನು ಇದು ನಿವಾರಿಸುತ್ತದೆ. ನಿಮ್ಮ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ.

ಬಿಕ್ಕಳಿಕೆ ನಿವಾರಿಸಬಲ್ಲದು: ಬಿಕ್ಕಳಿಕೆ ಸಮಸ್ಯೆ ಎದುರಾದ್ರೆ ಆಪಲ್ ವಿನೆಗರ್ ಔಷಧಿಯಂತೆ ಚಿಕಿತ್ಸೆ ನೀಡುತ್ತದೆ. ಅಲ್ಲದೇ ಜೀರ್ಣಕ್ರಿಯೆಗೂ ಇದು ಪರಿಣಾಮ ಬೀರಬಲ್ಲದ್ದು. ಬಿಕ್ಕಳಿಕೆ ಸಮಸ್ಯೆ ನಿಮಗಿದ್ರೆ ವಿನೆಗರ್ ಸೇವಿಸುವುದು ಉತ್ತಮ.

ಹೊಟ್ಟೆ ಸಮಸ್ಯೆಗೆ: ಹೊಟ್ಟೆ ಅಪ್ಸೆಟ್ ಆಗಿದ್ದರೆ ಆಪಲ್ ವಿನೆಗರ್ ಅತ್ಯಂತ ಪರಿಣಾಮಕಾರಿ ಔಷಧಿಗಳಲ್ಲಿ ಒಂದು. ಇದರಲ್ಲಿ ಆಂಟಿಬಯೋಟಿಕ್ ಗುಣಗಳು ಇರುವುದರಿಂದ ಶೀರ್ಘದಲ್ಲೇ ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೇ ಹೊಟ್ಟೆಯಲ್ಲಿರುವ ಬ್ಯಾಕ್ಟೇರಿಯಾಗಳ ಸೋಂಕನ್ನು ಸಹ ನಿವಾರಿಸುವ ಗುಣ ಹೊಂದಿದೆ.

Leave a Reply

Your email address will not be published. Required fields are marked *