ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ….? ತಿಳಿಯಲು ಈ ಲೇಖನ ಓದಿ….!

Health & Fitness ಎಲ್ಲ ನ್ಯೂಸ್

ಖಾಲಿ ಹೊಟ್ಟೆಯಲ್ಲಿ ಎಳನೀರಿನ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ತೆಂಗಿನ ಕಾಯಿಯ ವಿವಿಧ ಉತ್ಪನ್ನಗಳನ್ನು ಆಹಾರ, ಅರೋಗ್ಯ ಹಾಗೂ ಸೌಂದರ್ಯವರ್ಧಕವಾಗಿ ತಪ್ಪದೆ ಬಳಸುತ್ತಾರೆ. ಎಳನೀರನ್ನು ಕುಡಿಯುವ ಮೂಲಕ ಆರೋಗ್ಯವೃದ್ಧಿಯಾಗುವುದನ್ನು ಶತಮಾನಗಳ ಹಿಂದೆಯೇ ನಮ್ಮ ಪೂರ್ವಜರು ಕಂಡುಕೊಂಡಿದ್ದಾರೆ.  । ಇದನ್ನೂ ಓದಿ : ಈ ಏಳು ಸಮಸ್ಯೆಗಳಿಗೆ ಇದೊಂದೇ ಮದ್ದು…. ಜೀರಿಗೆ ನೀರು…..!

ಈ ನೀರಿನಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದು ಅತಿ ಹೆಚ್ಚಿನ ಪೋಷಕಾಂಶಗಳಿರುವ ಕಾರಣ ಇದೊಂದು ಅದ್ಬುತ ಜೀವ ಜಲವಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಗಳು, ಅಮೈನೋ ಆಮ್ಲ, ಕಿಣ್ವಗಳು, ಬಿ ಕಾಂಪ್ಲೆಕ್ಸ್ ವಿಟಮಿನ್ನುಗಳು, ವಿಟಮಿನ್ ಸಿ ಹಾಗೂ ಖನಿಜಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನಿಶಿಯಂ, ಮ್ಯಾಂಗನೀಸ್ ಮೊದಲಾದವುಗಳಿವೆ.

ಈ ಎಲ್ಲಾ ಪೋಷಕಾಂಶಗಳು ದೇಹದ ರೋಗ ನೊರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಎಳನೀರಿನ ಗರಿಷ್ಠ ಪ್ರಯೋಜನವನ್ನು ಪಡೆಯಬೇಕಾದರೆ ಈ ನೀರು ಯಾವುದೇ ಕಲಬೆರಕೆಯಿಲ್ಲದೆ ನೈಸರ್ಗಿಕ ರೂಪದಲ್ಲಿರಬೇಕು. ಹಾಗಾಗಿ ತಾಜಾ ಎಳನೀರನ್ನು ಕತ್ತರಿಸಿ ನೀರು ಕುಡಿಯುವುದೇ ಅತ್ಯಂತ ಆರೋಗ್ಯಕರವಾಗಿದೆ. । ಇದನ್ನೂ ಓದಿ : ನೈಸರ್ಗಿಕವಾಗಿ ದೊರೆಯುವಂತಹ ಜೇನು ತುಪ್ಪವನ್ನು ಈ ರೀತಿಯಾಗಿ ಬಳಸಿ ನೋಡಿ…..!

ಬಾಯಾರಿಕೆ ತಣಿಸುವುದರಲ್ಲಿ ಅಪ್ರತಿಮ ಬಾಯಾರಿಕೆಯಾದಾಗ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಎಳನೀರಿಗಿಂತ ಬೇರಾವ ದ್ರವವು ಸರಿಸಾಟಿಯಾಗಲಾರದು. ಇದರಲ್ಲಿರುವ ಎಲೆಕ್ಟ್ರೋಲೈಟುಗಳು ದೇಹ ಕೆಳೆದುಕೊಂಡಿರುವ ನೀರು ಮತ್ತು ಶಕ್ತಿಯನ್ನು ಮರುತುಂಬಿಸಲು ನೆರವಾಗುತ್ತವೆ. ವಿಶೇಷವಾಗಿ ಆಮಶಂಕೆ, ವಾಂತಿ, ಅತಿ ಹೆಚ್ಚಿನ ಬೆವರುವಿಕೆ ಮೊದಲಾದ ಸಂದರ್ಭದಲ್ಲಿ ದೇಹ ಕಳೆದುಕೊಂಡಿದ್ದ ನೀರನ್ನ ಅಂಶವನ್ನು ಮರುಪಡೆಯಲು ಸಹ ಈ ನೀರೇ ಅತ್ಯುತ್ತಮವಾಗಿದೆ. ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ ಎಳೆನೀರಿನಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಮೆಗ್ನಿಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅದರಲ್ಲೂ ಅಧಿಕ ಉಪ್ಪಿನ ಅಥವಾ ಸೋಡಿಯಂ ಪ್ರಭಾವದಿಂದ ದೇಹಕ್ಕೆ ಎದುರಾಗಿರುವ ತೊಂದರೆಯನ್ನು ಸಮತೋಲನಗೊಳಿಸಲು. ನೆರವಾಗುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಇದು ಎಳನೀರಿನ ಅತ್ಯುತ್ತಮ ಗುಣವಾಗಿದೆ.

ಹೃದಯದ ಟಾನಿಕ್ ಎಳನೀರಿನಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ ಹಾಗೂ ಇದರ ನೀರಿನಲ್ಲಿ ಹೃದಯವನ್ನು ರಕ್ಷಿಸುವ ಗುಣಗಳಿವೆ. ಎಳನೀರನ್ನು ನಿಯಮಿತವಾಗಿ ಕುಡಿಯುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿ ಒಟ್ಟಾರೆ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುವ ಮುಳ್ಕ ಹೃದಯದ ಮೇಲಿನ ಬರವನ್ನು ಕಡಿಮೆ ಮಾಡಬಹುದು. । ಇದನ್ನೂ ಓದಿ : ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಎಷ್ಟು ಉಪಯೋಗಗಳಿವೆ ನಿಮಗೆ ಗೊತ್ತಾ…? ತಿಳಿಯಲು ಈ ಲೇಖನ ಓದಿ….!

Leave a Reply

Your email address will not be published. Required fields are marked *