ನಿಮ್ಮ ಅಡುಗೆಯಲ್ಲಿ ಅರಿಶಿನ ಹೆಚ್ಚು ಬಳಸೋದು ಅಪಾಯಕಾರಿ..! ಯಾಕೆ ಅಂತೀರಾ? ಈ ಲೇಖನ ನೋಡಿ.

ಎಲ್ಲ ನ್ಯೂಸ್

ಹೌದು ಅತಿಯಾದರೆ ಅಮೃತವು ವಿಷ ಅಂತೇ ..ಅದೇ ರೀತಿಯಲ್ಲಿ ಅರಿಶಿನವು ಹೆಚ್ಚಾದ್ರೆ, ಆಗುವಂತ ಪರಿಣಾಮಗಳನ್ನು ತಿಳಿಸುತ್ತೇವೆ ನೋಡಿ .

ಕೆಲ ತಜ್ಞರು ಹೇಳುವ ಪ್ರಕಾರ ಒಂದು ದಿನಕ್ಕೆ 1 ಚಮಚಕ್ಕಿಂತ ಹೆಚ್ಚು ಅರಸಿನ ಪುಡಿ ಸೇವನೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಇದು ಹೊಟ್ಟೆ ಹಾಳು ಮಾಡುತ್ತದೆ. ಹೆಚ್ಚು ಅರಸಿನ ಪುಡಿ ಸೇವಿಸುವುದರಿಂದ ಕೆಳಹೊಟ್ಟೆ ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.

ಅರಸಿನದಲ್ಲಿರುವ ಆಕ್ಸಾಲೇಟ್ ಗಳು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು. ಈ ಆಕ್ಸಲೇಟ್ ಗಳು ಕ್ಯಾಲ್ಶಿಯಂ ಕಲ್ಲುಗಳಾಗಿ ಪರಿವರ್ತಿತವಾಗಬಹುದು.

ಅರಸಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದರಿಂದ ಜೀರ್ಣಸಂಬಂಧಿ ಸಮಸ್ಯೆಗಳುಂಟಾಗಬಹುದು. ಇದರಿಂದ ತಲೆಸುತ್ತು, ಬೇಧಿ ಸಮಸ್ಯೆ ಕಾಣಿಸಿಕೊಳ್ಳಬಹುದು.

ಅರಸಿನದಲ್ಲಿರುವ ಕೆಲವು ಅಂಶಗಳಿಂದ ಅಲರ್ಜಿ ಸಮಸ್ಯೆ ಉಂಟಾಗಬಹುದು. ಕಜ್ಜಿ, ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು.

Leave a Reply

Your email address will not be published. Required fields are marked *