ಮಕ್ಕಳಿಗೆ ತಾಯಿ ಎದೆ ಹಾಲು ತುಂಬಾನೇ ಅವಶ್ಯಕ..! ಹಾಗು ಮಕ್ಕಳಿಗೆ ಅದರಿಂದ ಸಿಗುವಂತ ಲಾಭಗಳು ಎಷ್ಟು ಗೋತ್ತಾ? ಇಲ್ಲಿದೆ ನೋಡಿ.

Health & Fitness ಎಲ್ಲ ನ್ಯೂಸ್ ಸಿನಿಮಾ

ಮಕ್ಕಳಿಗೆ ತಾಯಿ ಎದೆ ಹಾಲು ತುಂಬಾನೇ ಅವಶ್ಯಕ..! ಹಾಗು ಮಕ್ಕಳಿಗೆ ಅದರಿಂದ ಸಿಗುವಂತ ಲಾಭಗಳು ಎಷ್ಟು ಗೋತ್ತಾ? ಇಲ್ಲಿದೆ ನೋಡಿ. ಶಿಶುವಿನ ಬೆಳವಣಿಗೆ ಹೊಂದದ ಜೀವರಕ್ಷಕ ವ್ಯವಸ್ಥೆಗೆ ಪೂರಕವಾಗಬಲ್ಲ ಜೈವಿಕ ಕ್ರಿಯಾಶೀಲ ಅಂಶಗಳೂ ಎದೆ ಹಾಲಿನಲ್ಲಿದ್ದು, ಮಗುವಿಗೆ ಸೋಂಕುಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಜೊತೆಗೆ ಇವು ಜೀರ್ಣಕ್ರಿಯೆ, ದೇಹಕ್ಕೆ ಪೋಷಕಾಂಶಗಳ ಹೀರಿಕೆ ಪ್ರಕ್ರಿಯೆಯಲ್ಲಿ ಕೂಡ ನೆರವಾಗುತ್ತವೆ.ಮಗುವಿಗೆ ಜನನದ ಬಳಿಕ ಮೊದಲ 6 ತಿಂಗಳ ಕಾಲ ಅಗತ್ಯವಿರುವ ಎಲ್ಲ ಪೋಷಕಾಂಶಗಳೂ ಎದೆ ಹಾಲಿನಲ್ಲಿರುತ್ತವೆ. ಅದರಲ್ಲಿ ಕೊಬ್ಬು ಕಾರ್ಬೊಹೈಡ್ರೇಟ್‌ಗಳು, ಪ್ರೊಟೀನ್, ವಿಟಮಿನ್‌ಗಳು, ಖನಿಜಗಳು ಮತ್ತು ನೀರಿನ ಅಂಶ ಸೇರಿವೆ. ಇವು ಸುಲಭವಾಗಿ ಜೀರ್ಣವಾಗಬಲ್ಲವು ಮತ್ತು ಬಳಕೆಯಲ್ಲಿ ಪರಿಣಾಮಕಾರಿ.

ಎದೆಹಾಲು ಉಣಿಸುವ ಮುನ್ನ ತಾಯಿ ತಾಳ್ಮೆಯಿಂದಿರಬೇಕು, ಒತ್ತಡಮುಕ್ತವಾಗಿರಬೇಕು. ತಾಯಿಯ ಮಾನಸಿಕ ಸ್ಥಿತಿ ಎದೆಹಾಲು ಮಗುವಿಗೆ ಸರಾಗವಾಗಿ ಸಿಗಲು ಕಾರಣವಾಗುತ್ತದೆ. ನವಜಾತ ಶಿಶುವಿಗೆ ಪ್ರತಿ ಎರಡು, ಮೂರು ಗಂಟೆಗೊಮ್ಮೆ ಎದೆಹಾಲು ಉಣಿಸುತ್ತಿರಬೇಕು ಅಥವಾ ಮಗು ಅತ್ತಾಗಲೆಲ್ಲ ನೀಡಬೇಕು.

ತಾಯಿಯ ಎದೆಹಾಲು ಮಿಕ್ಕ ಎಲ್ಲಾ ಆಹಾರಗಳಿಗಿಂತಲೂ ಸರ್ವಶ್ರೇಷ್ಟ. ಅದರಲ್ಲಿ ವಿಟಮಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಮಗುವಿನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಬೇಕಾದ ವಿಟಮಿನ್, ಪ್ರೊಟೀನ್, ಕೊಬ್ಬಿನ ಅಂಶಗಳು ಎದೆಹಾಲಿನಲ್ಲಿರುತ್ತದೆ.

ಮಗು ಜನಿಸಿದ ತಕ್ಷಣ ತಾಯಿಯ ಎದೆಯಲ್ಲಿರುವ ಹಾಲಿನಲ್ಲಿ ಇಮ್ಯುನೋಗ್ಲೋಬಿನ್ ಐಜಿಎಯಿದ್ದು ಸಾಂಕ್ರಾಮಿಕ ಜೀವಿಗಳ ವಿರುದ್ಧ ರಕ್ಷಣಾತ್ಮಕ ಪದರವನ್ನು ಅದು ಒದಗಿಸುತ್ತದೆ. ಆ ಮೂಲಕ ಶಿಶುಗಳನ್ನು ಸಾಂಕ್ರಾಮಿಕ ರೋಗಗಳಿಂದ ತಡೆಗಟ್ಟಬಹುದು. ತಾಯಿಯ ಎದೆಹಾಲು ಮಕ್ಕಳಿಗೆ ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ನೀಡುತ್ತದೆ.

ಎದೆಹಾಲು ಕುಡಿಯುತ್ತಿರುವ ಮಕ್ಕಳು ಬೇರೆ ಮಕ್ಕಳಿಗಿಂತ ಹೆಚ್ಚು ತೂಕವನ್ನು ಹೊಂದಿರುತ್ತವೆ.ಮಗುವಿನ ಬುದ್ಧಿಶಕ್ತಿ ಮೇಲೆ ಕೂಡ ತಾಯಿಯ ಎದೆಹಾಲು ಪರಿಣಾಮ ಬೀರುತ್ತದೆ. ಎದೆಹಾಲು ಕುಡಿದು ಬೆಳೆದ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಬುದ್ದಿಶಾಲಿಗಳಾಗಿರುತ್ತಾರೆ.ತಾಯಿ ಮಗುವಿನ ಮಧ್ಯೆ ಬಾಂಧವ್ಯ ಹೆಚ್ಚಾಗಲು ಕೂಡ ಎದೆಹಾಲು ಕುಡಿಸುವುದು ಮುಖ್ಯವಾಗಿರುತ್ತದೆ. ತಾಯಿ ಮಗುವಿನ ಸ್ಪರ್ಶ, ಎದೆಯೊಳಗೆ ಬಚ್ಚಿ ಕೂರುವುದು, ನೋಟ ಮಗುವಿಗೆ ರಕ್ಷಣೆಯ ಭಾವನೆ ನೀಡುತ್ತದೆ. ಈ ಅನುಭವ ಬೇರೆಲ್ಲೂ ಸಿಗುವುದಿಲ್ಲ.

Leave a Reply

Your email address will not be published. Required fields are marked *