ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ ಹಾಗೂ ಎಷ್ಟೇ ಮುಂಜಾಗ್ರತೆವಹಿಸಿದರು ಸೊಳ್ಳೆಗಳ ಕಾಟ ತಪ್ಪುತ್ತಿಲ್ಲ ಅನ್ನೋರಿಗೆ ಇದು ಉಪಯೋಗಕಾರಿ. ಸೊಳ್ಳೆಗಳನ್ನು ಕಹಿ ಬೇವನ್ನು ಬಳಸಿ ಹೇಗೆ ನಿಯಂತ್ರಸಿಕೊಳ್ಳಬಹುದು ಅನ್ನೋದನ್ನ ಈ ಮಾಹಿತಿಯ ಮೂಲಕ ತಿಳಿದುಕೊಳ್ಳಿ ಹಾಗೂ ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಶೇರ್ ಮಾಡಿಕೊಳ್ಳಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.

ಆತ್ಮೀಯ ಓದುಗರೇ ಮನೆಯಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ನೂರಾರು ರೂಪಾಯಿಗಳನ್ನು ಖರ್ಚು ಮಾಡುವ ಬದಲು ನೈಸರ್ಗಿಕವಾಗಿ ಸುಲಭವಾಗಿ ಯಾವುದೇ ಖರ್ಚು ಇಲ್ಲದೆ ಸಿಗುವಂತ ಬೇವಿನ ಎಲೆಗಳನ್ನು ಬಳಸಿ ಹೇಗೆ ಸೊಳ್ಳೆಗಳ ನಿಯಂತ್ರಣ ಮಾಡಬಹುದು ಅನ್ನೋದನ್ನ ತಿಳಿದುಕೊಳ್ಳಿ. ಒಂದು ಹಿಡಿಯಷ್ಟು ಬೇವಿನ ಎಲೆಗಳನ್ನು ತಂದು ಅದನ್ನು ಮಿಕ್ಸಿಯಲ್ಲೂ ಅಥವಾ ರುಬ್ಬೊ ಕಲ್ಲಿನ ಮೂಲಕ ರುಬ್ಬಿ ಪೇಸ್ಟ್ ರೀತಿ ಮಾಡಿಕೊಳ್ಳಿ ಜಾಸ್ತಿ ನೀರು ಹಾಕದೆ ಸ್ವಲ್ಪ ಗಟ್ಟಿಯಾಗಿ ರುಬ್ಬಿ ನಂತರ ಅದನ್ನು ಒಂದು ಬೋಲ್ ನಲ್ಲಿ ಹಾಕಿಕೊಂಡು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ಒಂದು ದಿನ ಸಂಪೂಣವಾಗಿ ಒಣಗಿಸಿ.

ಒಣಗಿಸಿದ ಬೇವಿನ ಆ ಟ್ಯಾಬ್ಲೆಟ್ ಗಳನ್ನು ಯವೇ ರೀತಿ ಉರಿಸಬೇಕು ಅಂದ್ರೆ. ಮೊದಲು ಒಂದು ಚಿಕ್ಕ ತಟ್ಟೆಯಲ್ಲಿ ಒಣಗಿದ ಬೇವಿನ ಟ್ಯಾಬ್ಲೆಟ್ ಹಾಕುವ ಮುನ್ನ ೨-೩ ಕರ್ಪುರವನ್ನು ಉರಿಸಿಅದರ ಮೇಲೇನಿವು ತಯಾರಿಸಿದ ಬೇವಿನ ಟ್ಯಾಬ್ಲೆಟ್ ಅನ್ನು ಉರಿಸಿ ಇದರ ವಾಸನೆಯಿಂದ ಮನೆಯಲ್ಲಿ ಸೊಳ್ಳೆಗಳನ್ನು ಬರೋದಿಲ್ಲ ಹಾಗೆ ಮನೆಯ ಮೂಲೆ ಮೂಲೆಯಲ್ಲಿ ಇದರ ವಾಸನೆಯನ್ನು ಪಸರಿಸಿ. ಹೀಗೆ ಮಾಡಿದರೆ ಸೊಳ್ಳೆಗಳಿಂದ ದೂರ ಉಳಿಯಬಹುದು.ಅಷ್ಟೇ ಅಲ್ಲದೆ ನೀವು ಈ ರೀತಿಯ ವಿಧಾನವನ್ನು ಮಾಡಲಿಕೆ ಆಗೋದಿಲ್ಲ ಅನ್ನೋದರೆ ಮಾರುಕಟ್ಟೆಯಲ್ಲಿ ಸಿಗುವಂತ ಬೇವಿನ ಎಣ್ಣೆಯನ್ನು ತಂದು ದೀಪದಲ್ಲಿ ಹಾಕಿ ಉರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ

ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ಹೀಗೆ ಪ್ರತಿದಿನ ವಿವಿಧ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿಕೊಳ್ಳಿ ಧನ್ಯವಾದಗಳು.

LEAVE A REPLY

Please enter your comment!
Please enter your name here