ಬೇವಿನ ಮರ ಅಂದ್ರೆ ಸಾಕು ಅದು ದೈವ ಭಕ್ತಿಯ ಗಿಡ ಎಂಬುದಾಗಿ ಕೆಲವರು ಹೇಳಿದರೆ, ಇನ್ನು ಕೆಲವರು ಬೇವಿನ ಮರ ಬೇಸಿಗೆಯ ದಿನಗಳಲ್ಲಿ ಹೆಚ್ಚು ತಂಪು ಹಾಗೂ ತಣ್ಣನೆಯ ಗಾಳಿ ವಾತಾವರಣವನ್ನು ನಿರ್ಮಿಸುವಂತ ಗಿಡವಾಗಿದೆ. ಇನ್ನು ಕೆಲವರು ಬೇವಿನ ಮರದ ಕಡ್ಡಿ ಹಲ್ಲು ಉಜ್ಜುವುದಕ್ಕೆ ಹೆಚ್ಚು ಉಪಯೋಗಕಾರಿ ಎಂಬುದಾಗಿ ಹೇಳುತ್ತಾರೆ. ಇದೆಲ್ಲವೂ ಕೂಡ ಸರಿಯೇ ಆದ್ರೂ ಇನ್ನು ಯಾವೆಲ್ಲ ಆರೋಗ್ಯದ ರಹಸ್ಯ ಈ ಬೇವಿನ ಗಿಡದಲ್ಲಿದೆ ಅನ್ನೋದನ್ನ ಮುಂದೆ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಶೇರ್ ಮಾಡಲು ಮರೆಯದಿರಿ.

ಪ್ರಿಯ ಓದುಗರೇ ಬೇವಿನ ಮರ ಅನಾದಿಕಾಲದಿಂದಲೂ ಕೂಡ ಅರೋಗ್ಯ ಕ್ಷೇತ್ರದಲ್ಲಿ ಉತ್ತಮ ಪ್ರಯೋಜನಕಾರಿ ಮರವಾಗಿ ಬೆಳೆದುಕೊಂಡು ಬಂದಿದೆ. ಗ್ರಾಮೀಣ ಪ್ರದೇಶದಲ್ಲಿರುವಂತ ಜನರಿಗೆ ಬೇವಿನ ಉಪಯೋಗದ ಬಗ್ಗೆ ಅತಿ ಹೆಚ್ಚಾಗಿ ತಿಳಿದಿರುತ್ತದೆ ಹಾಗಾಗಿ ಅವರುಗಳು ಇದರ ಸದುಪಯೋಗವನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಾರೆ. ಹಿಂದೂ ಧರ್ಮದಲ್ಲಿ ಬೇವಿನ ಮರವನ್ನು ಪೂಜೆ ಮಾಡಲಾಗುತ್ತದೆ ಅಷ್ಟೇ ಅಲ್ಲದೆ ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ತಿನ್ನುತ್ತಾರೆ. ಬೇವಿನ ಹೂವನ್ನು ತಿನ್ನುವುದರಿಂದ ದೇಹ ಗಟ್ಟಿಯಾಗುತ್ತದೆ. ಬೇವು ಸರ್ವರೋಗ ನಿವಾರಕ ಅನ್ನೋದನ್ನ ಹೇಳಲಾಗುತ್ತದೆ.

ಬೇವಿನ ಮರದ ಕಡ್ಡಿಯನ್ನು ಹಲ್ಲು ಉಜ್ಜಲು ಬಳಸಿದರೆ ಹಲ್ಲುಗಳ ಅರೋಗ್ಯ ಉತ್ತಮವಾಗಿರುತ್ತದೆ ಹಾಗೂ ಹಲ್ಲುಗಳು ಗಟ್ಟಿಯಾಗಿ ಬೆಳೆಯುತ್ತವೆ ಅನ್ನೋದನ್ನ ಹಿಂದಿನ ಕಾಲದಿಂದಲೂ ಕೂಡ ಹಿರಿಯರು ಹೇಳುತ್ತಲೇ ಬರುತ್ತಿದ್ದಾರೆ. ಸ್ನಾನ ಮಾಡುವ ನೀರಿನಲ್ಲಿಒಂದು ಹಿಡಿಯಷ್ಟು ಬೇವಿನ ಎಲೆಯನ್ನು ಹಾಕಿ ಸ್ನಾನ ಮಾಡಿದರೆ ಯಾವುದೇ ಚರ್ಮ ರೋಗಗಳು ಅಂಟುವುದಿಲ್ಲ. ಹಾಗೂ ದೇಹಕ್ಕೆ ಯಾವುದೇ ಬ್ಯಾಕ್ಟಿರಿಯಾಗಳು ಬರದಂತೆ ತಡೆಯುತ್ತದೆ.

ಡೆಂಗ್ಯೂ ಮಲೇರಿಯಾ ಸಮಸ್ಯೆ ಇರೋರಿಗೆ ಬೇವಿನ ಎಲೆ ಔಷಧವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ೩ ಎಲೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಹೀಗೆ ನಾನಾ ಉಪಯೋಗಗಳನ್ನು ಬೇವಿನ ಎಲೆಗಳಿಂದ ಹಾಗೂ ಬೇವಿನ ಮರದಿಂದ ಉಪಯೋಗಗಳನ್ನು ಮನುಷ್ಯ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಶೇರ್ ಮಾಡಿ ಇದರ ಉಪಯೋಗಗಳನ್ನು ತಿಳಿದುಕೊಳ್ಳಲಿ. ಹೀಗೆ ಪ್ರತಿದಿನ ಉಪಯುಕ್ತ ವಿಚಾರಗಳನ್ನು ನಮ್ಮಲ್ಲಿ ತಿಳಿದುಕೊಳ್ಳಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಧನ್ಯವಾದಗಳು

LEAVE A REPLY

Please enter your comment!
Please enter your name here