ತುಳಸಿ ಎಲೆಯನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ದೆ ದೈವ ಭಕ್ತಿಯ ಗುಣಗಳನ್ನು ತುಳಸಿ ಎಲೆ ಹೊಂದಿದೆ. ತುಳಸಿಯಲ್ಲಿ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬಹುದು. ತುಳಸಿ ಸರ್ವರಿಗೂ ಸುಲಭವಾಗಿ ಸಿಗುವಂತ ಗಿಡವಾಗಿದ್ದು ಇದನ್ನು ಪ್ರತಿಯೊಬ್ಬರೂ ಕೂಡ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಪ್ರತಿದಿನ ಮೂರೂ ತುಳಸಿ ದಳವನ್ನು ಎಲೆಯನ್ನು ಸೇವಿಸುವುದರಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನ ಮುಂದೆ ನೋಡಿ. ತುಳಸಿ ಎಲೆಯನ್ನು ಚಹಾ ತಯಾರಿಸಿ ಕುಡಿಯುವುದರಿಂದ ಹಾಗು ಹಸಿ ಎಲೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ತಲೆನೋವು ಅಜೀರ್ಣತೆ ನಿವಾರಿಸುವ ಜತೆಗೆ ಮೆದುಳನ್ನು ಚುರುಕಾಗಿ ಮಾಡುವಂತೆ ಸಹಕಾರಿ ಅನ್ನೋದನ್ನ ಆಯುರ್ವೇದಿಕ್ ತಜ್ಞರು ಹೇಳುತ್ತಾರೆ. ಪ್ರತಿದಿನ 3 ತುಳಸಿ ಎಲೆಯನ್ನು ಶುದ್ಧ ನೀರಿನಲ್ಲಿ ತೊಳೆದು ಸೇವನೆ ಮಾಡಿದರೆ ಇಡೀ ದಿನವೆಲ್ಲ ಪ್ರೆಶ್ ಮೂಡ್ ನಲ್ಲಿರುವಂತೆ ಮಾಡುತ್ತದೆ.

ತುಳಸಿ ಎಲೆ ಜ್ವರ ಮತ್ತು ಶೀತಕ್ಕೆ ಅಷ್ಟೇ ಅಲ್ಲದೆ ಹೊಟ್ಟೆಯ ಸಂಬಂಧಿ ಭಾದೆಗಳ ನಿವಾರಣೆಗೆ ಉಪಯೋಗಕಾರಿ, ಮಲೇರಿಯಾ ಅಥವಾ ಡೆಂಗ್ಯೂ ಜ್ವರದ ನಿವಾರಣೆಗೆ ತುಳಸಿ ಎಳೆಯ ರಸವನ್ನು ಕುಡಿಯುವುದರಿಂದ ಪರಿಹಾರವಿದೆ. ತುಳಸಿ ಎಲೆಯನ್ನು ಶುದ್ಧವಾದ ನೀರಿನಲ್ಲಿ ತೊಳೆದು ಅಗೆದು ತಿನ್ನುವುದರಿಂದ ಕೆಮ್ಮು ಶೀತ ನೆಗಡಿ ನಿವಾರಣೆಯಾಗುತ್ತದೆ.

ತಲೆನೋವು ಇದ್ರೆ ತುಳಸಿ ರಸವನ್ನು ಗಂಧದೊಂದಿಗೆ ಬೆರಸಿ ನೆತ್ತಿಗೆ ಹಚ್ಚಿಕೊಳ್ಳುವುದರಿಂದ ತಲೆನೋವು ನಿವಾರಣೆಯಾಗುತ್ತದೆ. ಅಜೀರ್ಣತೆ ಸಮಸ್ಯೆ ಇರುವವರು ಪ್ರತಿದಿನ ೩ ತುಳಸಿ ಎಲೆಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಅಷ್ಟೇ ಅಲ್ದೆ ಡಯಾಬಿಟಿಸ್ ಸಮಸ್ಯೆಗೆ ತುಳಸಿ ಹೆಚ್ಚು ಸಹಕಾರಿ.

ಹೀಗೆ ನಾನಾ ತರದ ಭಾದೆಗಳಿಗೆ ತುಳಸಿ ಎಲೆ ಉತ್ತಮ ಮನೆಮದ್ದಾಗಿ ಕೆಲಸ ಮಾಡುತ್ತದೆ. ನಿಮ್ಮ ಆತ್ಮೀಯರಿಗೂ ಕೂಡ ಶೇರ್ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ. https://www.youtube.com/watch?v=A7nfM9odqP0

LEAVE A REPLY

Please enter your comment!
Please enter your name here