ನಾವುಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಒತ್ತು ಕೊಡೋದಿಲ್ಲ, ಆದ್ರೆ ಅನಾರೋಗ್ಯ ಸಮಸ್ಯೆ ಬಂದಾಗ ಆರೋಗ್ಯದ ಕಡೆ ಗಮನ ಕೊಡುತ್ತೇವೆ. ಮನುಷ್ಯನಿಗೆ ಎಷ್ಟೇ ಹಣ ಐಶ್ವರ್ಯ ಇದ್ದರು ಕೂಡ ಅರೋಗ್ಯ ಸರಿಯಾಗಿ ಇಲ್ಲದಿದ್ದರೆ ಏನು ಬಂತು ಅಲ್ವಾ? ಹಾಗಾಗಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸೋಣ. ಲವಂಗ ಅನ್ನೋದು ಒಂದು ಮಸಾಲೆ ಅಥವಾ ಅಡುಗೆ ಪದಾರ್ಥ ಅನ್ನೋದು ನಿಮಗೆ ಗೊತ್ತಿರುವ ವಿಚಾರ. ಅಷ್ಟಕ್ಕೇ ಸೀಮಿತವಾಗದ ಲವಂಗ ಆಯುರ್ವೇದಿಕ್ ಔಷಧಿ ಗುಣಗಳನ್ನು ಸಹ ಹೊಂದಿದೆ. ಲವಂಗವನ್ನು ಹಲ್ಲು ನೋವಿಗೆ ಹಾಗೂ ಹುಳುಕು ಹಲ್ಲಿನ ಸಮಸ್ಯೆಗೆ ಬಳಸಿ ಪರಿಹಾರವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ದೆ ದೇಹದ ನಾನಾ ಸಮಸ್ಯೆಗಳಿಗೆ ಲವಂಗ ಹೇಗೆ ಸಹಕಾರಿಯಾಗಿದೆ ಅನ್ನೋದನ್ನ ಈ ಮೂಲಕ ತಿಳಿಸುತ್ತೇವೆ.

ಹುಳುಕು ಹಲ್ಲಿಗೆ 2 ರಿಂದ 3 ಲವಂಗದ ಪುಡಿಯನ್ನು ಹಲ್ಲುಗಳಿಗೆ ತುಂಬಿದರೆ ಹುಳುಗಳು ನಿವಾರಣೆಯಾಗುತ್ತವೆ. ಲವಂಗದಲ್ಲಿ ಹುಳುಕು ಹಲ್ಲನ್ನು ನಿವಾರಿಸುವ ಅದ್ಬುತ ಗುಣವಿದೆ. ಸ್ನೇಹಿತರೆ ಹಲ್ಲುಗಳ ನೋವಿಗೆ ಅಷ್ಟೇ ಅಲ್ದೆ ಇನ್ನು ಅನೇಕ ಸಮಸ್ಯೆಗೆ ಈ ಲವಂಗ ರಾಮಬಾಣವಾಗಿದೆ.

ಪಿತ್ತದಿಂದ ವಾಂತಿಯಾಗುವ ಸಮಸ್ಯೆ ಕೆಲವರಿಗೆ ಬರುತ್ತದೆ ಇದಕ್ಕೆ ಲವಂಗವನ್ನು ಸೇವಿಸುವುದರಿಂದ ಪರಿಹಾರವಿದೆ ಹಾಗೂ ಅತಿ ಹೆಚ್ಚಿನ ಒತ್ತಡ ಸಮಸ್ಯೆಗೆ ಲವಂಗ ಸೇವನೆ ಒಳ್ಳೆಯದು ಅನ್ನೋದನ್ನ ಆಯುರ್ವೇದಿಕ್ ತಜ್ಞರು ಹೇಳುತ್ತಾರೆ. ಪ್ರತಿದಿನ ನಾವುಗಳು ಹಲ್ಲು ಉಜ್ಜಲು ಬಳಸುವಂತ ಟೂತ್ ಪೇಸ್ಟ್ ಗಳಲ್ಲಿ ಸಹ ಲವಂಗವನ್ನು ಬಳಸಲಾಗಿರುತ್ತದೆ ಕಾರಣ ಲವಂಗ ಹಲ್ಲುಗಳ ಆರೋಗ್ಯವನ್ನು ಉತ್ತಮಗೊಳಿಸಲು ಸಹಕಾರಿ ಆದ್ದರಿಂದ ಇದನ್ನು ಬಳಸಲಾಗಿರುತ್ತದೆ.

ಬಾಯಿ ವಾಸನೆ ಬರುತ್ತಿದ್ದರೆ ಪ್ರತಿದಿನ ಎರಡು ಲವಂಗ ಹಾಗೂ ಒಂದು ಏಲಕ್ಕಿಯನ್ನು ಜಗಿಯುವುದರಿಂದ ಬಾಯಿ ವಾಸನೆ ನಿವಾರಣೆಯಾಗುವುದು ಹೀಗೆ ಅನೇಕ ಉಪಯೋಗಗಳನ್ನು ಲವಂಗದಲ್ಲಿ ಕಾಣಬಹುದಾಗಿದೆ. ಲವಂಗದ ಉಪಯೋಗಗಳನ್ನು ನಿಮ್ಮ ಆತ್ಮೀಯರಿಗೂ ತಿಳಿಸಲು ಶೇರ್ ಮಾಡಿ. ಪ್ರತಿದಿನ ನಮ್ಮಲ್ಲಿ ಆರೋಗ್ಯದ ಸುದ್ದಿಗಳನ್ನು ತಿಳಿಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಧನ್ಯವಾದಗಳು.

LEAVE A REPLY

Please enter your comment!
Please enter your name here