ಪಪ್ಪಾಯ ಹಣ್ಣು ಎಲ್ಲರಿಗೂ ಕೂಡ ಚಿತಪರಿಚಿತವಾಗಿರುವಂತ ಹಣ್ಣಾಗಿದೆ. ಈ ಹಣ್ಣನ್ನು ಹಲವು ಹೆಸರುಗಳಿಂದ ಕರೆಯಲ್ಪಡುತ್ತಾರೆ ಪರಂಗಿಹಣ್ಣು ಪಪ್ಪಾಯ ಪಪ್ಪಾಳೆ ಹೀಗೆ ನಾನಾ ರೀತಿಯ ಹೆಸರುಗಳಿಂದ ಕರೆಯಲ್ಪಡುವಂತ ಈ ಹಣ್ಣು ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚು ಸಹಕಾರಿ. ಈ ಹಣ್ಣಿನ ಎಲೆ ಕೂಡ ಜ್ವರಕ್ಕೆ ಮದ್ದಾಗಿ ಕೆಲಸ ಮಾಡುತ್ತದೆ ಪಪ್ಪಾಯ ಎಲೆಯನ್ನು ಕಷಾಯ ರೀತಿ ಮಾಡಿ ಸೇವನೆ ಮಾಡುವುದರಿಂದ ಅತಿಯಾಗಿ ಕಾಡುವಂತ ಜ್ವರ ನಿವಾರಣೆಯಾಗುವುದು.

ಪಪ್ಪಾಯ ಸೇವನೆಯಿಂದ ಅರೋಗ್ಯ ವೃದ್ಧಿಸಿಕೊಳ್ಳಬಹುದು ಅಷ್ಟೇ ಅಲ್ದೆ ನಾವು ನಿಮಗೆ ಇಲ್ಲಿ ತಿಳಿಸುವಂತ ಪಪ್ಪಾಯ ಮನೆಮದ್ದು ನರ ದೌರ್ಬಲ್ಯ ನಿವಾರಿಸುವ ಜತೆಗೆ ದೇಹಕ್ಕೆ ಬಿಳಿ ರಕ್ತಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಪಪ್ಪಾಯ ಹಣ್ಣಿನ ಸೇವನೆ ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ. ಹಾಗೂ ಗುಪ್ತ ಸಮಸ್ಯೆ ನಿವಾರಣೆಗೆ ಪಪ್ಪಾಯ ಸೇವನೆ ಅತಿ ಉಪಯುಕ್ತ ಆದ್ರೆ ಪಪ್ಪಾಯವನ್ನು ಈ ರೀತಿಯಾಗಿ ಸೇವನೆ ಮಾಡುವುದು ಅತಿ ಉತ್ತಮ.

ಪಪ್ಪಾಯವನ್ನು ಹಾಗೆ ಏನು ಬೆರಸದೆ ತಿನ್ನುವುದರಿಂದ ದೇಹಕ್ಕೆ ಬಿಳಿ ರಕ್ತಕಣಗಳನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ದೇಹಕ್ಕೆ ಯಾವುದೇ ರೋಗಗಳು ತಗಲದಂತೆ ಪಪ್ಪಾಯ ರಕ್ಷಾ ಕವಚವಾಗಿ ಕಾಪಾಡುತ್ತದೆ. ಹಾಗೂ ಜ್ವರ ಮುಂತಾದ ಸಮಸ್ಯೆಗಳು ನಿಯಂತ್ರಿಸಲು ಪಪ್ಪಾಯ ಸೇವನೆ ಉತ್ತಮ.

ನರ ದೌಬಲ್ಯ ಸಮಸ್ಯೆಗೆ: ಪಪ್ಪಾಯವನ್ನು ಮೊದಲು ಚನ್ನಾಗಿ ತೊಳೆದುಕೊಂಡು ಮೇಲಿನ ಸಿಪ್ಪೆಯನ್ನು ತಗೆದು ಪಪ್ಪಾಯವನ್ನು ಚಿಕ್ಕದಾಗಿ ತುಂಡು ಮಾಡಿಕೊಂಡು ಒಂದು ಬೋಲ್ ನಲ್ಲಿ ಹಾಕಿ, ಅದಕ್ಕೆ ಸ್ವಲ್ಪ ಹಸುವಿನ ತುಪ್ಪ ಹಾಗೂ ಜೇನುತುಪ್ಪ ಮತ್ತು ಅದಕ್ಕೆ ಅರ್ಧ ಕಪ್ ಅಷ್ಟು ಹಾಲು ಹಾಕಿ ಇವುಗಳನ್ನು ಚನ್ನಾಗಿ ಮಿಕ್ಸ್ ಮಾಡಿ. ಮಿಕ್ಸ್ ಮಾಡಿ ಅರ್ಧ ಗಂಟೆಯವರೆಗೆ ಹಾಗೆ ಮುಚ್ಚಿಡಿ ನಂತರ ಅದು ಚನ್ನಾಗಿ ಮಿಶ್ರಣವಾಗಿರುತ್ತೆ ಅದಾದ ಮೇಲೆ ಅರ್ಧ ಗಂಟೆ ಬಿಟ್ಟು ಈ ಮನೆಮದ್ದನ್ನು ಸೇವಿಸಿ ಹೀಗೆ ಮಾಡುವುದರಿಂದ ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವ ಜತೆಗೆ ನರ ದೌಬಲ್ಯ ನಿವಾರಣೆಯಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ, ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಅಷ್ಟೇ ಅಲ್ದೆ ಪ್ರತಿದಿನ ಆರೋಗ್ಯದ ಮಾಹಿತಿಗಳನ್ನು ತಿಳಿದುಕೊಳ್ಳಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿಕೊಳ್ಳಿ ಧನ್ಯವಾದಗಳು.

LEAVE A REPLY

Please enter your comment!
Please enter your name here