ಈ ಕಾಳುಗಳನ್ನು ತಿನ್ನೋದ್ರಿಂದ ಬರಿ ಕಾಯಿಲೆಗಳು ದೂರವಾಗುವುದಲ್ಲದೆ ದೇಹಕ್ಕೆ ಉತ್ತಮ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು. ದೇಹಕ್ಕೆ ಎನರ್ಜಿಯನ್ನು ನೀಡುತ್ತವೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಯಾಕೆ ಗಟ್ಟಿ ಹಾಗೂ ಬಲಶಾಲಿಗಳು ಆಗಿರುತ್ತಿದ್ದರು ಅಂದ್ರೆ ಇದಕ್ಕೆ ಕಾರಣ ಅವರುಗಳು ಸೇವನೆ ಮಾಡುತ್ತಿದ್ದ ಆಹಾರ ಶೈಲಿ ನೈಸರ್ಗಿಕವಾಗಿ ಶಕ್ತಿಯುತವಾಗಿರುತ್ತಿದ್ದವು.

ಮೊಳಕೆ ಕಟ್ಟಿದ ಕಾಳುಗಳನ್ನು ಹಾಗೂ ನೆನೆಸಿದ ಕಾಳುಗಳನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹಕ್ಕೆ ಪೌಷ್ಟಿಕಾಂಶ ಪಡೆದುಕೊಳ್ಳಬಹುದಾಗಿದೆ. ಇವುಗಳಲ್ಲಿ ವಿಶೇಷವಾಗಿರುವಂತ ಹುರುಳಿಕಾಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ದೊರೆಯುತ್ತದೆ, ಇದರಿಂದ ಸಾಮಾನ್ಯ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ಅಷ್ಟೇ ಅಳದೆ ದೇಹಕ್ಕೆ ಉಷ್ಣಾಂಶವನ್ನು ನೀಡುತ್ತದೆ ಹಾಗಾಗಿ ಶೀತ ನೆಗಡಿ ಸಂದರ್ಭದಲ್ಲಿ ಹುಲುಲಿ ಸಹಕಾರಿ.

ಹುರುಳಿಕಾಳನ್ನು ಮೊಳಕೆ ಕಟ್ಟಿ ಸೇವನೆ ಮಾಡುವುದರಿಂದ ಅಥವಾ ಅಡುಗೆಗಳಲ್ಲಿ ಬಳಸಿಕೊಳ್ಳುವುದರಿಂದ ದೇಹಕ್ಕೆ ಎನರ್ಜಿ ಪಡೆಯಬಹುದಾಗಿದೆ. ಶ್ವಾಸಕೋಶ ಸಂಬಂಧಿ ರೋಗಗಳಲ್ಲದೆ ಕೆಮ್ಮು ನೆಗಡಿ ಜ್ವರ ನಿವಾರಿಸಲು ಹುರುಳಿ ಸಹಕಾರಿ ಅನ್ನೋದನ್ನ ಆಯುರ್ವೇದ ಶಾಸ್ತ್ರ ಹೇಳುತ್ತದೆ. ಕಫ ಜಾಸ್ತಿ ಆದಾಗ ಶೀತದಿಂದ ಮೂಗು ಕಟ್ಟಿದಾಗ ಬೇಯಿಸಿದ ಹುರುಳಿಯ ಕಟ್ಟು ಸೇವನೆ ಮಾಡಿದರೆ ಪರಿಹಾರವಿದೆ.

ಅಷ್ಟೇ ಅಲ್ಲದೆ ಡಯಾಬಿಟಿಸ್ ರೋಗಿಗಳಿಗೆ ಹುರುಳಿಕಾಳು ಹೆಚ್ಚು ಸಹಕಾರಿಯಾಗಿದೆ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲು ಹುರುಳಿಕಾಳು ಹೆಚ್ಚು ಉಪಯೋಗಕಾರಿ. ಹುರುಳಿಯ ಮಹತ್ವಕಾರಿ ಔಷದಿ ಗುಣ ಏನು ಅಂದ್ರೆ ಕಿಡ್ನಿಯಲ್ಲಿನ ಹಾಗೂ ಮೂತ್ರಕೋಶದಲ್ಲಿನ ಕಲ್ಲು ಕರಗಿಸಲು ಕೂಡ ಹುರುಳಿ ಉಪಯೋಗಕಾರಿ. ಹೀಗೆ ಹತ್ತಾರು ಆರೋಗ್ಯದ ಗುಣಗಳನ್ನು ಹುರುಳುಕಾಳು ಹೊಂದಿದೆ ಹಾಗಾಗಿ ರೈತರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಹುರಳಿಕಾಳನ್ನು ಬಳಸಿಕೊಳ್ಳುತ್ತಾರೆ. ಹುರುಳಿಕಾಳಿನ ಆರೋಗ್ಯದ ಮಹತ್ವವನ್ನು ತಿಳಿಸಲು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

LEAVE A REPLY

Please enter your comment!
Please enter your name here