ಇದೇನಪ್ಪ ಗಿಡದಲ್ಲಿ ಮೊಟ್ಟೆ ಬೆಳೆಯಲು ಸಾಧ್ಯವೇ ಅನ್ನೋ ಪ್ರಶ್ನೆ ನಿಮ್ಮಲ್ಲಿ ಸಾಮಾನ್ಯವಾಗಿ ಬಂದೆ ಬರುತ್ತದೆ ಆದ್ರೆ ಇದು ಸತ್ಯ ಎಂಬುದನ್ನು ಸಂಶೋಧಕರು ಸಾಭೀತು ಪಡಿಸಿದ್ದಾರೆ. ಬಹಳಷ್ಟು ಜನರಲ್ಲಿ ಗೊಂದಲವಿದೆ ಅದೇನು ಅಂದ್ರೆ ಮೊಟ್ಟೆ ಸಸ್ಯಾಹಾರವೋ ಮಾಂಸಾಹಾರವೋ ಅನ್ನೋದು ಹಾಗಾಗಿ ಈ ಗೊಂದಲಕ್ಕೆ ಬ್ರೇಕ್ ಬೀಳುವ ರೀತಿಯಲ್ಲಿ ಇಲ್ಲೊಂದು ಸಂಶೋಧನೆ ಯಶಸ್ವೀ ಸಾಧನೆಯನ್ನು ಮಾಡಿದೆ.

ಮೊಟ್ಟೆ ವೆಜ್ ಅಂಡ್ ನಾನ್ವೆಜ್ ಅನ್ನೋ ವಾದ ಪ್ರತಿವಾದಗಳಿಗೆ ಬ್ರೇಕ್ ಹಾಕುವ ಮೂಲಕ ಸಸ್ಯದಲ್ಲಿ ಮೊಟ್ಟೆ ಬೆಳೆದು ಡೆಲ್ಲಿಯ ವಿಜ್ಞಾನಿಗಳು ಯಶಸ್ವೀಯಾಗಿದ್ದಾರೆ. ದೆಹಲಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯ (ಐಐಟಿ) ಸಂಶೋಧಕರು ಗಿಡದಲ್ಲಿ ಮೊಟ್ಟೆಯನ್ನು ಬೆಳೆದಿದ್ದಾರೆ. ನಾನ್​ ಸಾಯ್​, ಗ್ಲುಟೆನ್​ ಮುಕ್ತವಾಗಿರುವ ಈ ಮೊಟ್ಟೆಯನ್ನು ದೆಹಲಿ ಐಐಟಿಯಲ್ಲಿ ಆಯೋಜನೆಗೊಂಡಿದ್ದ ಕೈಗಾರಿಕಾ ದಿನ-2019ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

ಈ ಮೊಟ್ಟೆಗಳು ಯಾವ ರೀತಿಯಲ್ಲಿದೆ? ಈ ಮೊಟ್ಟೆಗಳು ಕೋಳಿ ಮೊಟ್ಟೆಯ ಆಕಾರದ ಬದಲು ಕ್ಯೂಬ್​ (ಘನ) ಆಕಾರದಲ್ಲಿ ಲಭಿಸಲಿವೆ. ಇವನ್ನು ಸುಲಭವಾಗಿ ಪುಡಿ ಮಾಡಿ, ನೀರಿನಲ್ಲಿ ಬೆರೆಸಿ ಸಾಸ್​ಪಾನ್​ನಲ್ಲಿ ಹಾಕಿ ಆಮ್ಲೆಟ್​ ಮಾಡಿಕೊಂಡು ತಿನ್ನಬಹುದಾಗಿದೆ ಇದಕ್ಕೂ ಕೋಳಿ ಮೊಟ್ಟೆಗಳಿಂದ ತಯಾರಿಸುವ ಆಮ್ಲೆಟ್​ನಷ್ಟೇ ವೆಚ್ಚವಾಗಲಿದೆಯಂತೆ ದೆಹಲಿ ಐಐಟಿಯ ಗ್ರಾಮೀಣಾಭಿವೃದ್ಧಿ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರೊಫೆಸರ್​ ಕಾವ್ಯಾ ದಾಶೋಹರ ಅವರ ಪ್ರಕಾರ ಹೆಸರುಬೇಳೆ ಬೆಳೆ ಆಧಾರಿತವಾಗಿ ಸಸ್ಯಾಹಾರ ಮೊಟ್ಟೆಯನ್ನು ಬೆಳೆಯಲಾಗಿದೆ.

ಗಿಡದಲ್ಲಿ ಬೆಳೆದಂತ ಮೊಟ್ಟೆಯ ಆರೋಗ್ಯದ ವಿಶೇಷತೆ ಏನು? ಕೋಳಿ ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್​ ಹಾಗೂ ಅಲರ್ಜಿ ಸಮಸ್ಯೆಗಳು ಇರುತ್ತವೆ. ಆದರೆ, ಸಸ್ಯಾಹಾರದ ಮೊಟ್ಟೆಯಲ್ಲಿ ಈ ಸಮಸ್ಯೆಗಳಿಲ್ಲ. ಜತೆಗೆ ಕೋಳಿ ಮೊಟ್ಟೆ ತಿನ್ನದೇ ಇರುವವರು ಸಸ್ಯಾಹಾರ ಮೊಟ್ಟೆಯನ್ನು ತಿಂದು, ಕೋಳಿ ಮೊಟ್ಟೆಯಲ್ಲಿ ದೊರೆಯುತ್ತಿದ್ದ ಎಲ್ಲ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬಹುದು .

LEAVE A REPLY

Please enter your comment!
Please enter your name here