ಸಾಮಾನ್ಯವಾಗಿ ಈ ಗಿಡ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಚಿರಪರಿಚಿತವಾಗಿರುತ್ತದೆ. ಈ ಗಿಡವನ್ನು ಸೀಮೆ ಹುಣಸೆ ಗಿಡ ಎಂಬುದಾಗಿ ಕರೆಯುತ್ತಾರೆ. ಬಹಳಷ್ಟು ಜನ ಇದನ್ನು ತಿಂದಿರುತ್ತಾರೆ, ಇನ್ನು ಕೆಲವರು ತಿನ್ನದೇ ಇರಬಹುದು. ಆದ್ರೆ ಈ ಹಣ್ಣಿನಿಂದ ಮನುಷ್ಯ ದೇಹಕ್ಕೆ ಸಿಗುವಂತ ಆರೋಗ್ಯದ ಗುಣಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿಯೋಣ.

ಈ ಗಿಡವನ್ನು ರಸ್ತೆ ಬದಿಗಳಲ್ಲಿ ಅಥವಾ ಕಾಡುಗಳಲ್ಲಿ ಹೊಲ ಗದ್ದೆಗಳ ಬಳಿಯಲ್ಲಿ ಹೆಚ್ಚಾಗಿ ಕಾಣಬಹುದು. ಈ ಗಿಡಗಳು ಸಿಗುವುದು ತುಂಬಾನೇ ಅಪರೂಪವಾಗಿದೆ. ಇದರಲ್ಲಿರುವಂತ ಸೀಮೆ ಹುಣಸೆಯನ್ನು ತಿನ್ನುವುದರಿಂದ ಎಷ್ಟೆಲ್ಲ ಪ್ರಯೋಜನವಿದೆ ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಬಿ ಇರುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಹಾಗೂ ದೇಹದಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ.

ಇನ್ನು ಚಿಕ್ಕ ಮಕ್ಕಳಿಗೆ ಇದರ ಸೇವನೆಯಿಂದ ಬುದ್ದಿ ಚುರುಕಾಗುತ್ತದೆ ಹಾಗೂ ಜ್ಞಾಪಕ ಶಕ್ತಿ ವೃದ್ಧಿಯಾಗಲು ಕೂಡ ಸಹಕಾರಿ ಅನ್ನೋದನ್ನ ಹೇಳಲಾಗುತ್ತದೆ. ಮುಂಚೆ ಈ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತಿರಲಿಲ್ಲ ಆದ್ರೆ ಇದು ಇದೀಗ ಜನಪ್ರಿಯತೆಯನ್ನು ಪಡೆದಿರುವ ಕಾರಣಕ್ಕೆ ಅಷ್ಟೇ ಅಲ್ದೆ ಇದರಿಂದ ಉತ್ತಮ ಆರೋಗ್ಯದ ಲಾಭಗಳನ್ನು ಪಡೆಯುವ ಸಲುವಾಗಿ ಸಾಮಾನ್ಯರ ಕೈಗೆ ಸಿಗುವಂತಾಗಿದೆ. ಮಾರುಕಟ್ಟೆಯಲ್ಲೂ ಕೂಡ ಈ ಹಣ್ಣನ್ನು ಪಡೆಯಬಹುದು ಸುಲಭವಾಗಿ ಮಾರುಕಟ್ಟೆಯಲ್ಲೂ ಕೂಡ ಇದು ಸಿಗುತ್ತದೆ.

ಯಾವುದೇ ಆಗಲಿ ಮಿತವಾಗಿರಲಿ ಜಾಸ್ತಿಯಾದರೆ ತೊಂದರೆ. ಅತಿಯಾದರೆ ಅಮೃತವು ವಿಷ ಅನ್ನೋದು ನೆನಪಿರಲಿ ಮಿತವಾಗಿ ಸೇವಿಸಿ ಹಿತವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ನಿಮ್ಮ ಸ್ನೇಹಿತರಿಗೂ ಕೂಡ ಇದರ ಉಪಯೋಗವನ್ನು ತಿಳಿಸಲು ಶೇರ್ ಮಾಡಿ ಹಾಗೂ ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿಕೊಳ್ಳಿ ಧನ್ಯವಾದಗಳು.

LEAVE A REPLY

Please enter your comment!
Please enter your name here