ಬಾದಾಮಿ ಅರೋಗ್ಯಕ್ಕೆ ಅತಿ ಹೆಚ್ಚು ಉಪಯುಕ್ತವಾದದದ್ದು. ಬಾದಾಮಿ ಸೇವನೆಯಿಂದ ದೇಹಕ್ಕೆ ಹಲವು ಆರೋಗ್ಯಕಾರಿ ಪ್ರಯೋಜನಗಳಿವೆ. ಇದರಲ್ಲಿ ಪ್ರೊಟೀನ್, ಕ್ಯಾಲ್ಶಿಯಂ. ಹಾಗೂ ಐರನ್ ಅಂಶ ಇರುವುದರಿಂದ ಮನುಷ್ಯನ ದೇಹಕ್ಕೆ ಹೆಚ್ಚಿನ ಅರೋಗ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಬಾದಾಮಿಯನ್ನು ಸೇವನೆ ಮಾಡುವುದರಿಂದ ಯಾವೆಲ್ಲ ಲಾಭಗಳನ್ನು ಪಡೆಯಬಹುದು ಅನ್ನೋದನ್ನ ಮುಂದೆ ನೋಡಿ.

ಬಾದಾಮಿಯಲ್ಲಿರುವಂತ ಎಣ್ಣೆ ಅಂಶ ಹಾಗೂ ಪ್ರೊಟೀನ್ ಅಂಶ ಗರ್ಭಿಣಿಯರಿಗೆ ಹಾಗೂ ಚಿಕ್ಕ ಮಕ್ಕಳಿಗೆ ತುಂಬಾನೇ ಉಪಯೋಗಕಾರಿ ಒಳ್ಳೆಯ ಆರೋಗ್ಯದ ವೃದ್ಧಿಗೆ ಸಹಕರಿಸುತ್ತದೆ. ದೇಹವನ್ನು ಬಲಿಷ್ಠವಾಗಿ ಮಾಡಲು ಬಾದಾಮಿ ಸೇವನೆ ಮಾಡುವುದು ಉತ್ತಮ. ಮಾನಸಿಕ ಹಾಗೂ ದೈಹಿಕ ಶಕ್ತಿ ನೀಡಲು ಬಾದಾಮಿ ಸೇವನೆ ಅಗತ್ಯವಾಗಿ ಬೇಕಾಗುತ್ತದೆ.

ಸಾಮನ್ಯವಾಗಿ ಕಾಡುವಂತ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಹಾಗೂ ರಕ್ತಹೀನತೆ ಮುಂತಾದ ಸಮಸ್ಯೆಗಳ ನಿಯಂತ್ರಿಸಲು ಬಾದಾಮಿ ಸೇವನೆ ಮಾಡುವುದು ಒಳ್ಳೆಯದು. ಬಾದಾಮಿ ಎಣ್ಣೆಯನ್ನು ಬಳಸಿ ಚಿಕ್ಕ ಮಕ್ಕಳಿಗೆ ಮಸಾಜ್ ರೀತಿ ಮಾಡುವುದರಿಂದ ಮಕ್ಕಳ ದೇಹದ ಮೂಳೆಗಳು ದೃಢವಾಗಿ ಬೆಳೆಯುತ್ತದೆ. ಮಕ್ಕಳ ಬೆಳವಣಿಗೆಗೆ ಕೂಡ ಬಾದಾಮಿ ಸಹಕಾರಿ.

ಮುಖದಲ್ಲಿನ ಮೊಡವೆ ನಿವಾರಿಸಿಕೊಳ್ಳಲು ಶುದ್ಧವಾದ ಹಸುವಿನ ಹಾಲಿನಲ್ಲಿ ಬಾದಾಮಿ ಬೀಜವನ್ನು ಅರೆದು ಒಂದು ವಾರಗಳ ಕಾಲ ಹಚ್ಚಿದರೆ ಮಿಕದಲ್ಲಿ ಮೊಡವೆ ಸಮಸ್ಯೆ ಇರೋದಿಲ್ಲ. ಅಷ್ಟೇ ಅಲ್ದೆ ಹಸುವಿನ ಹಾಲಿಗೆ ಅರೆದ ಬಾದಾಮಿ ಮತ್ತು ಕಲ್ಲುಸಕ್ಕರೆ ಹಾಕಿ ಕುಡಿಯುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

ಪ್ರತಿದಿನ ಜಂಕ್ ಫುಡ್ ಗಳ ಸೇವನೆ ಮಾಡುವ ಬದಲು ಮನೆಯಲ್ಲೇ ನೆನಸಿದ ಬಾದಾಮಿಯನ್ನು ಪ್ರತಿದಿನ 5-6 ಬಾದಾಮಿ ಸೇವನೆ ಮಾಡಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ದೇಹಕ್ಕೆ ಉತ್ತಮ ಎನರ್ಜಿಯನ್ನು ಪಡೆದುಕೊಳ್ಳಬಹುದಾಗಿದೆ. ಹೀಗೆ ಪ್ರತಿದಿನ ಉತ್ತಮ ಆರೋಗ್ಯದ ವಿಚಾರಗಳನ್ನು ತಿಳಿದುಕೊಳ್ಳಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿಕೊಳ್ಳಿ ಹಾಗೂ ನಮ್ಮಲ್ಲಿ ತಿಳಿಯುವಂತ ಉಪಯುಕ್ತ ವಿಚಾರಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು.

LEAVE A REPLY

Please enter your comment!
Please enter your name here