ಇತ್ತೀಚಿನ ದಿನಗಳಲ್ಲಿ ದೇಹದ ಬೊಜ್ಜನ್ನು ಕಡಿಮೆ ಮಾಡಿಕೊಳ್ಳೋದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಬೊಜ್ಜು ಕರಗಿಸಿಕೊಳ್ಳಲು ಹಲವು ರೀತಿಯ ಮಾರ್ಗಗಳಿವೆ ಆದ್ರೆ ಅವುಗಲ್ಲಿ ಈ ವಿಧಾನ ಕೂಡ ನಿಮಗೆ ಸಹಕಾರಿಯಾಗಿದೆ ಅನ್ನೋದನ್ನ ತಿಳಿದು, ನಿಮಗೆ ಉಪಯೋಗವಾಗಲಿ ಅನ್ನೋ ಕಾರಣಕ್ಕೆ ಈ ಮೂಲಕ ತಿಳಿಸುತ್ತಿದ್ದೇವೆ. ಆತ್ಮೀಯ ಸ್ನೇಹಿತರೆ ದೇಹದ ಬೊಜ್ಜು ಕಡಿಮೆ ಮಾಡಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡಿಕೊಳ್ಳುವಬದಲು ಸ್ವತಃ ನೀವೇ ನಿಮ್ಮ ಕೈಯಿಂದಲೇ ಉತ್ತಮವಾದ ನ್ಯಾಚುರಲ್ ಮನೆಮದ್ದನ್ನು ಮಾಡಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಇದರಲ್ಲಿ ಯಾವುದೇ ಕೆಮಿಕಲ್ ಮಿಕ್ಸ್ ಇರೋದಿಲ್ಲ ಅಡುಗೆಗೆ ಬಳಸುವ ಜೀರಿಗೆ ಹಾಗೂ ಒಂದು ನಿಂಬೆಹಣ್ಣು ಅಥವಾ ಸ್ವಲ್ಪ ಜೇನುತುಪ್ಪ ಇದ್ರೆ ಸಾಕು ಇಮ್ಮ ದೇಹದ ಬೊಜ್ಜನ್ನು ಬಹುಬೇಗನೆ ನಿವಾರಿಸಿಕೊಳ್ಳಬಹುದು.

ಜೀರಿಗೆ ನೀರನ್ನು ತಯಾರಿಸೋದು ಹೇಗೆ? ಒಂದು ಗ್ಲಾಸ್ ನೀರನ್ನು ಪಾತ್ರೆಯಲ್ಲಿ ಹಾಕಿ ಆ ನೀರಿಗೆ ಒಂದೆರಡು ಚಮಚದಷ್ಟು ಜೀರಿಗೆಯನ್ನು ಹಾಕಿ ೫ ನಿಮಿಷಗಳ ಕಾಲ ಒಲೆಯ ಮೇಲಿಟ್ಟು ಕುದಿಸಿ. ನಂತರ ಒಲೆಯಿಂದ ಕೆಳಗೆ ಇಳಿಸಿ ಕುದಿಸಿದ ನೀರನ್ನು ಸೋಸಿಕೊಳ್ಳಿ. ಇದಾದ ಮೇಲೆ ಒಂದು ಗ್ಲಾಸ್ ನಲ್ಲಿ ಆ ನೀರನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಳ್ಳಬಹುದು, ಸಕ್ಕರೆ ಕಾಯಿಲೆ ಇರುವವರು ಜೇನುತುಪ್ಪವನ್ನು ಹಾಕಿಕೊಳ್ಳಬೇಡಿ. ಇದರ ಬದಲಿಗೆ ಒಂದು ಅರ್ಧ ಹೋಳು ನಿಂಬೆ ರಸವನ್ನು ಬೆರೆಸಿಕೊಳ್ಳಬಹುದು.

ಈ ಜೀರಿಗೆ ನೀರನ್ನು ಬೆಳಗ್ಗೆ ಹಾಗೂ ಸಂಜೆ ಎರಡು ಟೈಮ್ ಸೇವನೆ ಮಾಡುವುದು ಉತ್ತಮ. ಬೆಳಗ್ಗೆ ಖಾಲಿ ಹೊಟ್ಟೆಗೆ ಹಾಗೂ ರಾತ್ರಿ ಮಲಗುವ ಮುಂಚೆ ಹೀಗೆ ಪ್ರತಿದಿನ ಜೀರಿಗೆ ನೀರನ್ನು ಸೇವಿಸುವ ಜತೆಗೆ ಜಂಕ್ ಫುಡ್ ಅನ್ನು ತ್ಯಜಿಸಿದರೆ ಖಂಡಿತ ದೇಹದ ಅನಗತ್ಯ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಇದರೊಂದಿಗೆ ಸಂಜೆ ಹಾಗೂ ಬೆಳಗ್ಗೆ ವ್ಯಾಯಾಮ ಮಾಡಿದರೆ ನಿಮ್ಮ ಅರೋಗ್ಯ ಉತ್ತಮವಾಗಿ ವೃದ್ಧಿಯಾಗುವುದು. ನಿಮ್ಮ ಸ್ನೇಹಿತರಿಗೂ ಈ ವಿಚಾರವನ್ನು ಶೇರ್ ಮಾಡಿ ಇದರ ಸದುಪಯೋಗ ಪಡೆದುಕೊಳ್ಳಲಿ. ಧನ್ಯವಾದಗಳು

LEAVE A REPLY

Please enter your comment!
Please enter your name here