ಬಹಳಷ್ಟು ಜನರು ಹಲ್ಲುಗಳ ಆರೋಗ್ಯದ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ ಸ್ನೇಹಿತರೆ ಹಲ್ಲುಗಳ ಅರೋಗ್ಯ ಅತಿ ಉಪಯುಕ್ತವಾದದ್ದು. ಹಲ್ಲುಗಳ ಆರೈಕೆ ಸರಿಯಾಗಿ ಇರದೇ ಇದ್ರೆ ಕಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆಗಾಗಿ ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂಡ ಅಷ್ಟೇ ಅಗತ್ಯವಿದೆ. ಕೆಲವರ ಹಲ್ಲುಗಳಲ್ಲಿ ಹಳದಿಗಟ್ಟಿರುತ್ತದೆ ಮತ್ತು ಕರೆ ಕಟ್ಟಿರುತ್ತದೆ. ಪಾಚಿ ರೀತಿಯಲ್ಲಿ ಹಲ್ಲಿನ ಸುತ್ತಲೂ ಇರುತ್ತದೆ. ಇದಕ್ಕೆ ನಾರ್ಮಲ್ ಆಗಿ ಬ್ರಷ್ ಮಾಡುವುದರಿಂದ ನಿವಾರಣೆಯಾಗುವುದಿಲ್ಲ.

ಇದಕ್ಕೆ ಸೂಕ್ತ ಮನೆಮದ್ದನ್ನು ತಿಳಿಸುತ್ತೇವೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಬ್ರಷ್ ಮಾಡುವಾಗ ಉಪಯೋಗಿಸಿದರೆ ಸಾಕು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಬ್ರಷ್ ಮಾಡುವಾಗ ಈ ಮನೆಮದ್ದನ್ನು ಬಳಸಬೇಕು. ಇದಕ್ಕಿಂತ ಮೊದಲು ಮನೆಮದ್ದನ್ನು ಹೇಗೆ ತಯಾರಿಸೋದು ಅನ್ನೋದನ್ನ ತಿಳಿಸುತ್ತೇವೆ ಬನ್ನಿ. ಒಂದು ಪ್ಲಾಸ್ಟಿಕ್ ಬೋಲ್ ನಲ್ಲಿ ಒಂದು ಚಿಟಿಕೆ ಅರಿಶಿನ ಹಾಗೂ ಸೋಡಾವನ್ನು ಹಾಕಿ ಅದರೊಂದಿಗೆ ಸ್ವಲ್ಪ ಉಪ್ಪು ಇದರ ಜತೆಗೆ ಅರ್ಧ ಹೋಳು ನಿಂಬೆಹಣ್ಣನ್ನು ಮಿಶ್ರಣ ಮಾಡಿ ಇದರೊಂದಿಗೆ ನೀವು ಬಳಸುವ ಟೂತ್ ಪೇಸ್ಟ್ ಅನ್ನು ಮಿಶ್ರಣ ಮಾಡಿ. ಚನ್ನಾಗಿ ಮಿಶ್ರಣ ಮಾಡಿದ ಮೇಲೆ ಬ್ರಷ್ ಮೇಲೆ ಮಿಶ್ರಣವನ್ನು ಹಾಕಿ ಕೊಂಡು ಸರ್ಕುಲರ್ ರೀಯಲ್ಲಿ ಬ್ರಷ್ ಮಾಡಿ. ಹೀಗೆ ಮಾಡುವುದರಿಂದ ಹಲ್ಲುಗಳಲ್ಲಿರುವಂತ ಬ್ಯಾಕ್ಟಿರಿಯಾಗಳು ಹಾಗೂ ಹಳಧಿಗಟ್ಟಿದ ಹಲ್ಲುಗಳು ಬೆಳ್ಳಗೆ ಕಾಣುವಂತೆ ಸಹಕಾರಿಯಾಗುತ್ತದೆ.

ಒಂದೇ ಬಾರಿಗೆ ಮನೆಮದ್ದನ್ನು ಬಳಸಿ ಹಲ್ಲುಗಳು ಬೆಳ್ಳಗೆ ಆಗಿಲ್ಲ ಅಂದು ಬಿಟ್ಟು ಬಿಡಬೇಡಿ ಮನೆಮದ್ದುಗಳು ನಿಧಾನವಾಗಿ ಉತ್ತಮ ಫಲಿತಾಂಶವನ್ನು ನೀಡುವಲ್ಲಿ ಸಹಕಾರಿ, ಹಾಗಾಗಿ ಪ್ರತಿದಿನ ಇದನ್ನು ಬಳಸಿ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ನೀವು ತಯಾರಿಸುವ ಮನೆಮದ್ದು ಒಂದೇ ವೇಳೆಗೆ ಅಂದ್ರೆ ನೀವು ಬ್ರಶ್ ಮಾಡುವ ಮುಂಚೆ ಪ್ರೆಶ್ ಆಗಿ ತಯಾರಿಸಿ, ಇಂದು ತಯಾರಿಸಿದ ಮನೆಮದ್ದನ್ನು ನಾಳೆಗೆ ಉಪಯೋಗಿಸಬೇಡಿ. ಬ್ರಷ್ ಮಾಡುವ ಮುಂಚೆ ಮನೆಮದ್ದು ತಯಾರಿಸಿ ಹಲ್ಲು ಉಜ್ಜಿ ಮತ್ತೆ ಸಂಜೆ ಬ್ರಷ್ ಮಾಡುವ ಮುಂಚೆ ಮನೆಮದ್ದು ತಯಾರಿಸಿ ಬ್ರಷ್ ಮಾಡಿ ಈ ರೀತಿಯ ವಿಧಾನದಿಂದ ಉತ್ತಮ ಹಲ್ಲುಗಳ ಅರೋಗ್ಯ ವೃದ್ಧಿಯಾಗುತ್ತದೆ. ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ. ಧನ್ಯವಾದಗಳು

LEAVE A REPLY

Please enter your comment!
Please enter your name here