ತಲೆ ನೋವು ಅನ್ನೋದು ಕೆಲವರಿಗೆ ಸಾಮಾನ್ಯವಾಗಿ ಕಾಡುತ್ತದೆ ಆದ್ರೆ ಅರ್ಧ ತಲೆನೋವು ಬಂದ್ರೆ ತುಂಬಾನೇ ನೋವು ಆಗುವುದಲ್ಲದೆ ಯಾವುದೇ ಕೆಲಸ ಮಾಡಲಿಕೆ ಆಗದಷ್ಟು ನೋವು ಕೊಡುತ್ತದೆ. ಕೆಲವೊಮ್ಮೆ ಮಾತ್ರೆಗಳನ್ನು ನುಂಗಿದರು ಸಹ ವಾಸಿಯಾಗದಷ್ಟು ನೋವು ಕೊಡುತ್ತದೆ ಈ ತಲೆನೋವು. ಇದಕ್ಕೆ ನಿಮಗೆ ಒಂದೊಳ್ಳೆ ಮನೆಮದ್ದನ್ನು ತಿಳಿಸಲು ಬಯಸುತ್ತವೆ.

ಔಡಲ ಗಿಡ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಚಿರಪರಿಚಿತವಾಗಿರುವಂತ ಗಿಡ. ಈ ಗಿಡ ತಲೆನೋವು ಅರ್ಧ ತಲೆನೋವನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಇದರ ಎಲೆಗಳನ್ನು ರಾತ್ರಿ ಮಲಗುವ ಮುಂಚೆ ಬಳಸಿದರೆ ಎಂತಹ ತಲೆ ನೋವು ಇದ್ರು ಮೂರೇ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು. ಈ ಔಡಲ ಎಲೆಯನ್ನು ತಲೆನೋವಿಗೆ ಹೇಗೆ ಬಳಸಬೇಕು ಅನ್ನೋದನ್ನ ಮುಂದೆ ನೋಡಿ.

ಮೊದಲು ಒಂದು ಚಿಕ್ಕ ಬೋಲ್ ನಲ್ಲಿ ೨ ಸ್ಪೂನ್ ಕೊಬ್ಬರಿ ಎಣ್ಣೆ ಹಾಗೂ ೨ ಸ್ಪೂನ್ ಎಳ್ಳೆಣ್ಣೆ ಹಾಕಿ ಎರಡನ್ನು ಚನ್ನಾಗಿ ಮಿಕ್ಸ್ ಮಾಡಿಕೊಂಡು ತಲೆಗೆ ಮಸಾಜ್ ಮಾಡುವ ರೀತಿಯಲ್ಲಿ ಹಚ್ಚಿಕೊಳ್ಳಬೇಕು, ನಂತರ ೨ ರಿಂದ ೩ ಔಡಲ ಎಲೆಗಳನ್ನು ತಲೆಯ ಮೇಲೆ ಅಂದರೆ ಎಲೆಯ ತೊಟ್ಟು ಮೇಲಿರುವಂತೆ ಉಲ್ಟಾಮಾಡಿ ತಲೆ ಮೇಲೆ ಎಲೆಗಳನ್ನು ಹಾಕಿಕೊಂಡು ಒಂದು ಟವಲ್ ಅಥವಾ ಬಟ್ಟೆಯಿಂದ ತಲೆಯನ್ನು ಕಟ್ಟಿಕೊಳ್ಳಬೇಕು. ಬಟ್ಟೆಯನ್ನು ಯಾವ ರೀತಿಯಲ್ಲಿ ಕಟ್ಟಿಕೊಳ್ಳಬೇಕು ಅಂದ್ರೆ ತಲೆಸ್ನಾನಮಾಡುವಾಗ ತಲೆಗೆ ಬಟ್ಟೆಯನ್ನು ಕಟ್ಟಿಕೊಳ್ಳುವ ರೀತಿಯಲ್ಲಿ ಕಟ್ಟಿಕೊಂಡು ರಾತ್ರಿ ಮಲಗಬೇಕು ಮರುದಿನ ಬೆಳಗ್ಗೆ ಅಷ್ಟ್ರಲ್ಲಿ ತಲೆಗೆ ಕಟ್ಟಿದ ಔಡಲ ಎಲೆಗಳು ಒಣಗಿ ಕರ್ಕಲಾ ಆಗಿರುತ್ತವೆ. ತಲೆನೋವು ಕೂಡ ವಾಸಿಯಾಗಿರುತ್ತದೆ. ತಲೆನೋವು ಮೊದಲ ದಿನದಲ್ಲಿ ವಾಸಿಯಾಗದೆ ಇದ್ರೆ ಮರುದಿನ ಮತ್ತೊಮ್ಮೆ ಪ್ರಯತ್ನಿಸಿ ಮೂರೂ ದಿನಗಳಲ್ಲಿ ತಲೆನೋವು ಬೇಗನೆ ವಾಸಿಯಾಗುತ್ತದೆ.

ಬೆಳಗ್ಗೆ ಎದ್ದ ತಕ್ಷಣ ತಲೆಗೆ ಕಟ್ಟಿದಂತ ಔಡಲ ಎಲೆಗಳನ್ನು ತಗೆದು ಸ್ನಾನ ಮಾಡಿಕೊಳ್ಳಿ. ಈ ಮಾಹಿತಿ ನಿಮ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲ್ಲಿ. ಅಷ್ಟೇ ಅಲ್ದೆ ಪ್ರತಿದಿನ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿಕೊಳ್ಳಿ. ಧನ್ಯವಾದಗಳು.

LEAVE A REPLY

Please enter your comment!
Please enter your name here