ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಜನರು ಬೇರೆ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಆದ್ರೆ ಎಲ್ಲದಕ್ಕಿಂತ ಮುಂಚೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವವರು ಇದನ್ನು ಅನುಸರಿಸಬೇಕು. ಹೌದು ಸ್ನೇಹಿತರೆ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಅಸೆ ಇದ್ರೆ ಜಂಕ್ ಫುಡ್ ಅನ್ನು ಸೇವಿಸುವುದು ಬಿಟ್ಟು ಬಿಡಿ. ಅಷ್ಟೇ ಅಲ್ದೆ ಸಿಕ್ಕ ಸಿಕ್ಕ ಆಹಾರ ಪದಾರ್ಥಗಳನ್ನು ಸೇವಿಸುವ ಬದಲು ಡ್ರೈ ಪೊಟ್ಸ್ ಇತ್ಯಾದಿ ಅರೋಗ್ಯ ವೃದ್ಧಿಸುವಂತ ಆಹಾರ ಸೇವನೆ ಮಾಡುವುದು ಸೂಕ್ತ. ನಿಮಗೆ ಈ ಮೂಲಕ ಮನೆಯಲ್ಲಿಯೇ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿ ಆಗುವಂತ ಡ್ರಿಂಕ್ಸ್ ಅನ್ನು ಹೇಗೆ ತಯಾರಿಸಿಕೊಳ್ಳಬಹುದು ಅನ್ನೋದನ್ನ ತಿಳಿಸುತ್ತೇವೆ.

ಮನೆಮದ್ದು ತಯಾರಿಸಿಸಲು ಬೇಕಾಗುವ ಸಾಮಗ್ರಿಗಳು: ನೀರು, ಹಸಿಶುಂಠಿ, ನಿಂಬೆಹಣ್ಣು, ಸೌತೆಕಾಯಿ ಹಾಗು ಪುದಿನ ಸೊಪ್ಪು ಇಸ್ಟ್ ಬೇಕಾಗುತ್ತದೆ, ಆದ್ರೆ ಇವುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಹೇಗೆ ತಯಾರಿಸಬೇಕು ಅನ್ನೋದನ್ನ ನೋಡಿ. ಮೊದಲು ನೀವು ಪ್ರತಿದಿನ ಎಷ್ಟು ನೀರು ಕುಡಿಯುತ್ತಿರೋ ಅಷ್ಟು ನೀರು ತಗೆದುಕೊಳ್ಳಿ ಉದಾಹರಣೆಗೆ 10 ರಿಂದ 12 ಗ್ಲಾಸ್ ನೀರು ಒಂದು ಚಿಕ್ಕ ಪಾತ್ರೆಯಲ್ಲಿ ಹಾಕಿ ನಂತರ ಎರಡು ಚಮಚದಷ್ಟು ಹಸಿ ಶುಂಠಿಯಯನ್ನು ತುರಿದು ಆ ನೀರಿನಲ್ಲಿ ಹಾಕಿ ನಂತರ ನಿಂಬೆಹಣ್ಣನ್ನು ರೌಂಡ್ ಆಗಿ ತೆಳ್ಳಗೆ ಕಟ್ ಮಾಡಿ ಒಂದೆರಡು ನಿಂಬೆಹಣ್ಣು ಹಾಕಬೇಕಾಗುತ್ತದೆ. ಇದಾದ ಮೇಲೆ ೧೫ ರಿಂದ 20 ತಾಜಾ ಪುದಿನ ಎಲೆಗಳನ್ನು ಹಾಕಿ ಹಾಗೂ ತಾಜಾ ಎಳೆ ಸೌತೆಕಾಯಿಯನ್ನು ಸೌಂಡ್ ಆಗಿ ಕಟ್ ಮಾಡಿಕೊಂಡು ಆ ಪಾತ್ರೆಯಲ್ಲಿ ಹಾಕಬೇಕು.

ಎಷ್ಟೆಲ್ಲ ಆದ ಮೇಲೆ ಒಂದು ಚಮಚದಿಂದ ಇವುಗಳನ್ನು ಚನ್ನಾಗಿ ಮಿಶ್ರಣ ಮಾಡಿ. ರಾತ್ರಿಯೆಲ್ಲಾ ಹಾಗೆ ನೆನೆಯಲು ಬಿಡಬೇಕು. ಮರುದಿನ ಬೆಳಗ್ಗೆ ಕಾಫಿ ಟೀ ಇತ್ಯಾದಿಗಳನ್ನು ಕುಡಿಯುವ ಬದಲು ರಾತ್ರಿಯೆಲ್ಲಾ ನೆನೆಸಿದ ಈ ಮನೆಮದ್ದನ್ನು ಸೋಸಿಕೊಂಡು ದಿನವಿಡೀ ಕುಡಿಯಬೇಕು. ನಿಮಗೆ ಬಾಯಾರಿಕೆ ಬಂದಂಗೆಲ್ಲ ಈ ನೀರನ್ನು ಸೇವಿಸಬೇಕು ಇದರ ಜತೆಗೆ ಪ್ರತಿದಿನ ಬೆಳಗ್ಗೆ ಸಂಜೆ ವ್ಯಾಯಾಮ ಇತ್ಯಾದಿಗಳನ್ನು ಮಾಡುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು.

ಸೂಚನೆ: ನೀವು ತಯಾರಿಸುವಂತ ಈ ಡ್ರಿಂಕ್ ಒಂದು ದಿನಕ್ಕೆ ಮಾತ್ರ ಬಳಸಬೇಕು ಮರು ದಿನ ಬೆಳಗ್ಗೆ ಮತ್ತೆ ಫ್ರೆಶ್ ನೀರನ್ನು ತಯಾರಿಸಿ ಕುಡಿಯಬೇಕು ಹೀಗೆ ಮಾಡಿದರೆ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಜತೆಗೆ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಧನ್ಯವಾದಗಳು.

LEAVE A REPLY

Please enter your comment!
Please enter your name here