ವಯಸ್ಸಾದವರಿಗೆ ಮಂಡಿ ನೋವು ಅನ್ನೋದು ಪದೇ ಪದೇ ಕಾಡುತ್ತಿರುತ್ತದೆ. ಈ ನೋವನ್ನು ನಿವಾರಿಸಿಕೊಳ್ಳಲು ನಿಮ್ಮ ಅಂಗೈಯಲ್ಲೇ ಇದೆ ಮನೆಮದ್ದು. ಹೌದು ಸ್ನೇಹಿತರೆ ಎಕ್ಕೆ ಗಿಡದ ಎಲೆ ಹಲವು ಪ್ರಯೋಜನಗಳನ್ನು ಹೊಂದಿದ್ದು ಮಂಡಿ ನೋವನ್ನು ಕೂಡ ವಾಸಿ ಮಾಡಲು ಸಹಕಾರಿಯಾಗಿದೆ.

ಎಕ್ಕೆಗಿಡ ಎಲ್ಲರೂ ನೋಡಿರುತ್ತೀರ ಅಥವಾ ಕೆಲವರು ಇದರ ಉಪಯೋಗಕ್ಕಾಗಿ ಮನೆಯ ಮುಂದೆ ಈ ಎಕ್ಕೆ ಗಿಡವನ್ನು ಬೆಳೆಸಿರುತ್ತಾರೆ. ಈ ಎಕ್ಕೆಗಿಡದ ಹಾಲು ಅಷ್ಟೇ ಅಲ್ದೆ ಇದರ ಎಲೆ ಕೂಡ ಉಪಯೋಗಕಾರಿ ಅನ್ನೋದನ್ನ ನಿಮಗೆ ಹೀಗಾಗಲೇ ಹಿಂದಿನ ಲೇಖನದಲ್ಲಿ ತಿಳಿಸಿದ್ದೇವೆ. ಮಂಡಿ ನೋವು ನಿವಾರಿಸಲು ಎಕ್ಕೆಗಿಡ ಹೇಗೆ ಸಹಕಾರಿ ಅನ್ನೋದನ್ನ ಮುಂದೆ ನೋಡಿ.

ಮೊದಲು ಎಕ್ಕೆ ಗಿಡದ ದೊಡ್ಡ ಎಲ್ಲೆಗಳನ್ನು ತಂದು ಅದನ್ನು ಶುದ್ದವಾಗಿ ತೊಳೆದು ಸ್ವಲ್ಪ ಒಣಗಿಸಿ ಅದನ್ನು ನೀರಿಲ್ಲದೆ ಎಲೆಗಳನ್ನು ಒರೆಸಿ ಒಂದು ಬಾಣಲೆಗೆ ಸ್ವಲ್ಪ ಎಳ್ಳೆಣ್ಣೆ ಹಾಕಿ ನಂತರ ಅದರಲ್ಲಿ ಒಂದು ಎಕ್ಕೆಗಿಡದ ಎಲೆಗಳನ್ನು ಹಾಕಿ ಎಲೆ ರೋಸ್ಟ್ ಆಗೋವರೆಗೂ ಬಿಸಿ ಮಾಡಿ ಬಿಸಿಮಾಡಿದ ಎಣ್ಣೆಯನ್ನು ತಗೆದುಕೊಂಡು ಒಂದು ಚಿಕ್ಕ ಡಬ್ಬಿಯಲ್ಲಿ ಹಾಕಿಕೊಂಡು ರಾತ್ರಿ ಮಲಗುವ ಮುನ್ನ ಅಥವಾ ಸಂಜೆಯ ಸಮಯದಲ್ಲಿ ಮಂಡಿ ನೋವು ಇರುವಂತ ಜಾಗಕ್ಕೆ ಈ ಎಣ್ಣೆಯನ್ನು ಹಚ್ಚಿ ಮಸಾಜ್ ರೀತಿ ಮಾಡಬೇಕು ನೋವು ಇರುವಂತ ಜಾಗಕ್ಕೆ ಉತ್ತಮವಾಗಿ ಹಚ್ಚಿ ಮಸಾಜ್ ರೀತಿ ಮಾಡುತ್ತ ಬಂದ್ರೆ ಎಷ್ಟೇ ಹಳೆಯದಾದ ಮಂಡಿನೋವು ಗುಣವಾಗುದು.

ಮತ್ತೊಂದು ವಿಧಾನ ಏನು ಅಂದ್ರೆ ಒಂದು ವೇಳೆ ಎಕ್ಕೆ ಗಿಡದ ಎಲೆಯನ್ನು ಎಣ್ಣೆಯಲ್ಲಿ ಬಳಸದೆ ಇದ್ರೆ ನೇರವಾಗಿ ಎಕ್ಕೆ ಗಿಡದ ಎಲೆಗಳನ್ನು ತೊಳೆದು ನೀರಿಲ್ಲದೆ ಒರೆಸಿ ಮಂಡಿ ನೋವು ಇರುವ ಜಾಗಕ್ಕೆ ಸುತ್ತಲೂ ಎಲೆಗಳನ್ನು ಇಟ್ಟು ಒಂದು ಕಾಟನ್ ಬಟ್ಟೆಯಿಂದ ಸುತ್ತಿಕೊಳ್ಳಬೇಕು. ಇದನ್ನು ರಾತ್ರಿ ಮಲಗುವ ವೇಳೆ ಮಾಡಿದರೆ ಉತ್ತಮ ಫಲಿತಾಂಶ ಇರುತ್ತದೆ. ಮತ್ತೆ ಮರುದಿನ ಇದನ್ನು ಬಿಚ್ಚಿ ದೈನಂದಿನ ಕೆಲಸ ಮಾಡಿ ಮರುದಿನ ರಾತ್ರಿ ಮಲಗುವ ಮುಂಚೆ ಹೊಸ ವಿಧಾನವನ್ನು ಅನುಸರಿಸಬೇಕು ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶವಿದೆ.

ಎಕ್ಕೆ ಗಿಡ ಪೂಜೆಗೆ ಅಷ್ಟೇ ಅಲ್ದೆ ಅದೆಷ್ಟೋ ಆಯುರ್ವೇದಿಕ್ ಔಷಧಿಗಳಿಗೆ ಉಪಯೋಕಾರಿಯಾಗಿದೆ. ಎಕ್ಕೆಗಿಡದ ಎಲೆಯನ್ನು ಬಳಸುವಾಗ ಎಚ್ಚರವಾಗಿರಬೇಕು ಇದರ ಹಾಲು ಕಣ್ಣಿಗೆ ಬಿದ್ರೆ ತುಂಬಾನೇ ಕಷ್ಟವಾಗುತ್ತದೆ. ಹುಷಾರಾಗಿ ಇದರ ಬಳಕೆ ಮಾಡುವುದು ಉತ್ತಮ. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಇದನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here