ಸೌಂದರ್ಯ ಅನ್ನೋದು ಈಗಿನ ದಿನಗಳಲ್ಲಿ ಎಲ್ಲರಿಗೂ ಕೂಡ ಅತಿ ಅವಶ್ಯಕವಾಗಿ ಬೇಕಾಗಿರುವಂತಾದಾಗಿದೆ. ಮಹಿಳೆಯರು ಅಷ್ಟೇ ಅಲ್ದೆ ಪುರುಷರು ಕೂಡ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಾರೆ. ಮುಖದ ಮೇಲಿನ ಕೆಪ್ಪುಕಲೆಗಳನ್ನು ನಿವಾರಿಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಹಲವು ಕ್ರೀಮ್ ಇವೆ ಆದ್ರೆ ಅವುಗಳಿಂಗಿಂತ ಮನೆಯಲ್ಲೇ ನೀವು ತಯಾರಿಸುವಂತ ಈ ಮನೆಮದ್ದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಬಹಳಷ್ಟು ಹೆಣ್ಣು ಮಕ್ಕಳು ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಹಣ ವ್ಯಯ ಮಾಡುತ್ತಾರೆ, ಆದ್ರೆ ಈ ಟಿಪ್ಸ್ ಫಾಲೋ ಮಾಡಿದರೆ ಖಂಡಿತ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಕಾಫಿ ಪೌಡರ್ ಬರಿ ಕಾಫಿ ಮಾಡಿ ಕುಡಿಯಲು ಅಷ್ಟೇ ಅಲ್ದೆ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೂಡ ಇದನ್ನು ಬಳಸಲಾಗುತ್ತದೆ. ಕಾಫಿಯಲ್ಲಿರುವಂತ ಕೆಫೈನ್ ಅಂಶ ಸೌಂದರ್ಯ ವೃದ್ಧಿಗೆ ಸಹಕಾರಿ. ಕಾಫಿಯನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳೋದು ಹೇಗೆ ಅನ್ನೋದನ್ನ ತಿಳಿಯೋಣ.

ಕಾಫಿ ಪೌಡರ್ ಅನ್ನು ಮೂರೂ ಚಮಚ ತಗೆದುಕೊಂಡು ಒಂದು ಬೋಲ್ ನಲ್ಲಿ ಹಾಕಿ ಅದಕ್ಕೆ ಒಂದು ಚಮಚ ಹಾಲು ಹಾಕಿ ಚನ್ನಾಗಿ ಮಿಕ್ಸ್ ಮಾಡಿದ ಮೇಲೆ ಮುಖದ ಮೇಲೆ ಈ ಪೇಸ್ಟ್ ಅನ್ನು ಹಚ್ಚಿಕೊಂಡು ರೌಂಡ್ ಆಗಿ ಮಸಾಜ್ ರೀತಿ ಮಾಡಿ ಸ್ವಲ್ಪ ಹೊತ್ತಿನ ನಂತರ ಮುಖವನ್ನು ಶುದ್ಧವಾದ ನೀರಿನಿಂದ ತೊಳೆದುಕೊಂಡರೆ ಮುಖದ ಅಂದ ಪಳ ಪಳನೆ ಹೊಳೆಯುವಂತೆ ಮಾಡುತ್ತದೆ. ಮುಖದಲ್ಲಿ ಇರುವಂತ ಕೊಳೆಗಳು ನಿವಾರಣೆಯಾಗಿ ಮುಖದ ಚರ್ಮ ಕಾಂತೀಯತೆಯನ್ನು ಪಡೆದುಕೊಳ್ಳುತ್ತದೆ.

ಹಳೆಯ ಕಾಫಿ ಬೀಜಗಳನ್ನು ತಗೆದುಕೊಂಡು ಪುಡಿ ಮಾಡಿ 15 ದಿನಕ್ಕೊಮ್ಮೆ ಈ ಪುಡಿಯನ್ನು ನೀರಿನಲ್ಲಿ ಹಾಕಿ ಮಿಶ್ರಣ ಮಾಡಿದ ನಂತರ ತಲೆ ಬುರುಡೆಗೆ ಹಚ್ಚಿಕೊಳ್ಳುವುದರಿಂದ ತಲೆ ಬುರಡೆಯಲ್ಲಿರುವಂತ ಡೆಂಡ್ರಾಪ್ ಹಾಗೂ ತಲೆಯಲ್ಲಿನ ಕೊಳೆ ನಿವಾರಣೆಯಾಗುತ್ತದೆ. ಕಾಫಿ ಬೀಜದಲ್ಲಿರುವಂತ ಕೆಫೈನ್ ಅಂಶ ಆರೋಗ್ಯಕರವಾದದ್ದು ಹಾಗಾಗಿ ಕಾಫಿ ಪೌಡರ್ ಇಷ್ಟೊಂದು ಗುಣಗಳನ್ನು ಹೊಂದಿವೆ.

ಅಷ್ಟೇ ಅಲ್ದೆ ಮೊಣಕೈ ಮೊಣಕಾಲಿನ ಭಾಗಗಳಲ್ಲಿ ಕಪ್ಪಾಗಿರುವಂತ ಚರ್ಮಕ್ಕೆ ಹೊಳಪನ್ನು ನೀಡುತ್ತದೆ ಈ ಕಾಫಿ ಪೌಡರ್. ಹೌದು ಹಳೆಯ ಕಾಫಿ ಬೀಜಗಳನ್ನು ಪುಡಿ ಮಾಡಿ ಅದನ್ನು ಪೇಸ್ಟ್ ರೀತಿ ತಯಾರಿಸಿಕೊಂಡು ಹಚ್ಚಿಕೊಳ್ಳುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಈ ಕಾಫಿ ಬೀಜ ಹಾಗೂ ಪೌಡರ್ ಉಪಯೋಗವನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here