ಮನುಷ್ಯನ ದೇಹದ ಪ್ರತಿ ಭಾಗಗಳು ಕೂಡ ತುಂಬಾನೇ ಪ್ರಾಮುಖ್ಯತೆಯನ್ನು ವಹಿಸುತ್ತವೆ. ಯಾವುದನ್ನೂ ಕೂಡ ನಿರ್ಲಕ್ಷಿಸಬಾರದು ತೊಡೆಯ ಭಾಗಗಳಲ್ಲಿ ಕೆಲವರಿಗೆ ಡಾರ್ಕ್ ಸ್ಕಿನ್ ಆಗಿರುತ್ತದೆ ಅಂತವರಿಗೆ ಈ ಮಾಹಿತಿ ಉಪಯುಕ್ತವಾಗಿದೆ. ಕೆಲವರು ತೊಡೆಯ ಭಾಗದಲ್ಲಿರುವ ಚರ್ಮ ಕಪ್ಪು ಆಗಿರುವುದರಿಂದ ಬೇರೆಯವರ ಮುಂದೆ ಹೇಳಿಕೊಳ್ಳಲು ಸಂಕೋಚ ಅಥವಾ ವೈದ್ಯರ ಮುಂದೆ ಹೇಳಿಕೊಳ್ಳಲು ಆಗದೆ ಇರಬಹುದು ಆಗಾಗಿ ಈ ಮನೆಮದ್ದನ್ನು ಬಳಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ.

ನ್ಯಾಚುರಲ್ ಮನೆಮದ್ದು ಯಾವುದೇ ಅಡ್ಡ ಪರಿಣಾಮವಿಲ್ಲದೆ ಉತ್ತಮ ಫಲಿತಾಂಶವನ್ನು ನೀಡುವಲ್ಲಿ ಹೆಚ್ಚು ಸಹಕಾರಿಯಾಗಿದೆ. ಮನೆಯಲ್ಲಿ ಬಳಸುವಂತ ಈ ಪದಾರ್ಥಗಳನ್ನು ಬಳಸಿ ತೊಡೆಯ ಭಾಗದಲ್ಲಿ ಆಗುವಂತ ಡಾರ್ಕ್ ಸ್ಕಿನ್ ಅನ್ನು ಹೇಗೆ ಪರಿಹರಿಸಿ ಕೊಳ್ಳಬಹುದು ಅನ್ನೋದನ್ನ ತಿಳಿಯೋಣ ಮುಂದೆ ನೋಡಿ.

ಬೇಕಾಗುವ ಪದಾರ್ಥಗಳು: ಮೊಸರು, ಕಸ್ತೂರಿ ಅರಿಶಿನ, ಕಡ್ಲೆಹಿಟ್ಟು, ಹಾಗೂ ಅರ್ಧ ಹೋಳು ನಿಂಬೆ
ಮೊದಲು ಒಂದು ಖಾಲಿ ಬೋಲ್ ತಗೆದುಕೊಂಡು ಅದರಲ್ಲಿ ಎರಡು ಟೀ ಸ್ಪೂನ್ ಕಡ್ಲೆ ಹಿಟ್ಟು ಹಾಕಿ ಅದಕ್ಕೆ ಒಂದು ಚಮಚ ಮೊಸರು ಸೇರಿಸಿ ಅರಿಶಿನ ಕೂಡ ಹಾಕಿದ ಮೇಲೆ ಅರ್ಧ ಹೋಳು ನಿಂಬೆಯನ್ನು ರಸವನ್ನು ಸೇರಿಸಿ ನಂತರ ಈ ಎಲ್ಲವನ್ನು ಚನ್ನಾಗಿ ಮಿಕ್ಸ್ ಮಾಡಿ.

ಮಿಕ್ಸ್ ಮಾಡಿದ ಪೇಸ್ಟ್ ಅನ್ನು ಸ್ನಾನಕ್ಕಿಂತ ಮುಂಚೆ ಹಚ್ಚಿಕೊಂಡು ಹತ್ತು ನಿಮಿಷಗಳ ಕಾಲ ಡಾರ್ಕ್ ಸ್ಕಿನ್ ಮೇಲೆ ಮಸಾಜ್ ರೀತಿ ಮಾಡಬೇಕು ಇದು ಡ್ರೈ ಆದ ನಂತರ ಶುದ್ಧವಾದ ನೀರಿನಿಂದ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ತೊಡೆ ಭಾಗದಲ್ಲಿ ಆಗುವಂತ ಡಾರ್ಕ್ ಸ್ಕಿನ್ ಸಮಸ್ಯೆಯನ್ನು ಬಹುಬೇಗನೆ ನಿವಾರಿಸಿಕೊಳ್ಳಬಹುದಾಗಿದೆ.

ಮಾರುಕಟ್ಟೆಯಲ್ಲಿ ಸಿಗುವಂತ ವಿವಿಧ ರೀತಿಯ ಕ್ರೀಮ್ ಗಳನ್ನೂ ಬಳಸುವ ಬದಲು ಮನೆಯಲ್ಲಿಯೇ ಸುಲಭವಾಗಿ ಸ್ವತಃ ತಾವೇ ತಯಾರಿಸುವ ನ್ಯಾಚುರಲ್ ಮನೆಮದ್ದು ನಿಮಗೆ ಹೆಚ್ಚು ಸಹಕಾರಿ ಅನ್ನೋದನ್ನ ಈ ಮೂಲಕ ತಿಳಿಸಲು ಬಯಸುತ್ತವೆ. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ. ಧನ್ಯವಾದಗಳು

LEAVE A REPLY

Please enter your comment!
Please enter your name here