ಈರುಳ್ಳಿ ಅಡುಗೆಯ ರುಚಿಗೆ ಅಷ್ಟೇ ಅಲ್ಲದೆ ಮನುಷ್ಯನ ದೇಹಕ್ಕೆ ತುಂಬಾನೇ ಸಹಕಾರಿಯಾಗಿದೆ. ಬಹಳಷ್ಟು ಜನರು ಈರುಳ್ಳಿಯನ್ನು ಸಲಾಡ್ ರೂಪದಲ್ಲಿ ಹಾಗೂ ಆಹಾರದಲ್ಲಿ ಬಳಸಿ ಇದರ ಸೇವನೆ ಮಾಡುತ್ತಾರೆ, ಆದ್ರೆ ಈರುಳ್ಳಿಯಿಂದ ಇಷ್ಟೊಂದು ಆರೋಗ್ಯಕರ ಲಾಭಗಳಿವೆ ಅನ್ನೋದನ್ನ ತಿಳಿದುಕೊಂಡಿರೋದಿಲ್ಲ. ಈರುಳ್ಳಿಯನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತ ಆರೋಗ್ಯಕರ ಲಾಭಗಳನ್ನು ಪಡೆಯಬಹುದಾಗಿದೆ.

ಈರುಳ್ಳಿಯಲ್ಲಿ ವಿಟಮಿನ್ ಸಿ ಐರನ್ ಹಾಗೂ ಕ್ಯಾಲ್ಶಿಯಂ ಗುಣಗಳು ಹೇರಳವಾಗಿರುವುದರಿಂದ ಈರುಳ್ಳಿ ಮನುಷ್ಯನ ದೇಹವನ್ನು ಕ್ಲಿನ್ ಮಾಡುವಲ್ಲಿ ಸಹಕಾರಿಯಾಗಿದೆ. ಈರುಳ್ಳಿಯನ್ನು ಸೇವಿಸುವುದರಿಂದ ಪ್ರತಿ ಪುರುಷನಿಗೂ ಕೂಡ ಪಲವತ್ತತೆ ಹೆಚ್ಚುತ್ತದೆ. ಊಟದ ಜತೆಗೆ ಹಸಿ ಈರುಳ್ಳಿಯನ್ನು ತಿನ್ನುವ ಹವ್ಯಾಸ ಇದ್ರೆ ಇನ್ನು ಒಳ್ಳೆಯದು.

ಈರುಳ್ಳಿಯ ಆರೋಗ್ಯಕಾರಿ ಗುಣಗಳು: ಕೀಲು ನೋವು ನಿವಾರಿಸುವಲ್ಲಿ ಈರುಳ್ಳಿ ಸಹಕಾರಿಯಾಗಿದೆ. ಕೆಲವರಿಗೆ ದೇಹದ ಮೂಳೆಗಳಲ್ಲಿ ಈ ಕೀಲು ನೋವು ಅನ್ನೋದು ಕಾಣಿಸಿ ಕೊಳ್ಳುತ್ತದೆ ಇಂತಹ ಸಮಸ್ಯೆಗೆ ಈರುಳ್ಳಿಯ ರಸವನ್ನು ಎಣ್ಣೆಯಲ್ಲಿ ಹಾಕಿ ನೋವು ಇರುವ ಜಾಗಕ್ಕೆ ಮಸಾಜ್ ರೀತಿ ಬಳಸುವುದರಿಂದ ಕೀಲು ನೋವು ಬಹುಬೇಗನೆ ವಾಸಿಯಾಗುತ್ತದೆ. ಅಷ್ಟೇ ಅಲ್ಲದೆ ಈರುಳ್ಳಿ ದೇಹದಲ್ಲಿ ರಕ್ತಕಣಗಳು ಸರಾಗವಾಗಿ ಕೆಲಸ ಮಾಡಲು ಈರುಳ್ಳಿ ಸೇವನೆ ಅಗತ್ಯವಾಗಿದೆ.

ತಲೆ ಕೂದಲು ಹಾಗೂ ತಲೆಹೊಟ್ಟು ಸಮಸ್ಯೆಗೆ ಈರುಳ್ಳಿ: ಈರುಳ್ಳಿ ರಸವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಮಸಾಜ್ ರೀತಿ ಮಾಡುವುದರಿಂದ ತಲೆ ಕೂದಲ ಸಮಸ್ಯೆ ನಿವಾರಣೆಯಾಗುವುದು. ಈರುಳ್ಳಿ ತಲೆಗೆ ರಕ್ಷಾ ಕವಚವಾಗಿ ಕೆಲಸ ಮಾಡುತ್ತದೆ.

ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಕೂಡ ಈರುಳ್ಳಿ ಸಹಕಾರಿ ಕಿಡ್ನಿಯಲ್ಲಿ ಸ್ಟೋನ್ ಆಗಿದ್ದರೆ ಖಾಲಿ ಹೊಟ್ಟೆಗೆ ಈರುಳ್ಳಿ ರಸವನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ಕಾಣಬಹುದು ಅಷ್ಟೇ ಅಲ್ಲದೆ ಈರುಳ್ಳಿ ದೇಹದಲ್ಲಿನ ರಕ್ತವನ್ನು ಶುದ್ದೀಕರಿಸುತ್ತದೆ. ಒಟ್ಟಾರೆಯಾಗಿ ಈರುಳ್ಳಿಯ ಹಲವು ಲಾಭಗಳನ್ನು ಪ್ರತಿಯೊಬ್ಬರೂ ಕೂಡ ಅತಿ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here