ಹೆಣ್ಣು ಮಕ್ಕಳಲ್ಲಿ ಎರಡು ತರ ಇರುತ್ತಾರೆ. ಒಂದು ಬೇಗ ಮಕ್ಕಳು ಪಡಿಯಬೇಕು ಇನ್ನೊಂದು ಬೇಗ ಮಕ್ಕಳಾದರೆ ಸೌಂದರ್ಯ ಹಾಳಾಗುತ್ತದೆ ಮತ್ತು ಪ್ರೈವೆಸಿ ಇರುವುದಿಲ್ಲ ಅಂತ. ಇನ್ನು ಕೆಲಸ ಮಾಡುವ ಹೆಣ್ಣು ಮಕ್ಕಳು ಸದ್ಯ ೩-೪ ವರ್ಷ ಮಕ್ಕಳು ಬೇಡ ನಾನು ಇನ್ನು ಕೆಲಸದಲ್ಲಿ ತುಂಬಾ ಸಾಧಿಸುವುದು ಇದೆ ಎಂಬುದು, ಆದರೆ ಇವೆಲ್ಲ ಎಷ್ಟು ಸರಿ ಅನ್ನುವುದು ನಮ್ಮ ಇವತ್ತಿನ ಪ್ರಶ್ನೆ. ಹಿಂದಿನ ಕಾಲದಲ್ಲಿ ಮದುವೆ ಆದ ಒಂದು ವರ್ಷದಲ್ಲಿ ಮಡಿಲು ತುಂಬಿರ ಬೇಕು ಎಂಬುದು ಆಗಿನ ಕಾಲದ ಪದ್ಧತಿ ಆಗಿತ್ತು ಒಂದು ವೇಳೆ ಮಕ್ಕಳು ಸ್ವಲ್ಪ ತಡವಾದರೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡು ಹೆಣ್ಣು ಮಕ್ಕಳ ಜೀವ ನೆಮ್ಮದಿಯಾಗಿರುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ ಹೆಣ್ಣು ಮಕ್ಕಳು ನಾಲ್ಕು ಗೋಡೆಯಿಂದ ಹೊರ ಬಂದಿದ್ದಾರೆ. ಸ್ವತಂತ್ರ ಜೀವನ ನಡೆಸುತ್ತಿದ್ದಾರೆ, ಮಕ್ಕಳು ಮಾಡಿಕೊಳ್ಳುವ ವಿಷಯದಲ್ಲೂ ಸಹ ಸ್ವತಂತ್ರಳಾಗಿದ್ದಾಳೆ ಆದರೆ ಇದರಿಂದ ಎಷ್ಟು ಒಳ್ಳೆಯದು ಎಂಬುದನ್ನು ಇಲ್ಲಿ ಓದಿ..

ಇತ್ತೀಚಿನ ಆಹಾರ,  ವಾತಾವರಣ, ರೀತಿ ನೀತಿ, ರಿವಾಜು, ಪದ್ಧತಿ ಎಲ್ಲವೂ ಸಹ ವಿಭಿನ್ನವಾಗಿದೆ. ಆದರೆ ನಮ್ಮ ಹಿಂದಿನ ಕಾಲದ ಜನ ತುಂಬಾ ಜಾಣರಾಗಿದ್ದರು ಆದರೆ ಅವರಂತೆ ಈಗ ಎಲ್ಲಿ ನಡೆಯುತ್ತದೆ ಅಲ್ಲವೇ? ನೀವು ಫ್ಯಾಮಿಲಿ ಪ್ಲಾನಿಂಗ್ ಮಾಡುವುದರಿಂದ ಎಷ್ಟೆಲ್ಲ ತೊಂದರೆಗಳಾಗುತ್ತವೆ. ಮದುವೆ ತಡವಾಗಿ ಆಗಿದ್ದರೆ ಅಥವಾ ಮಗು ಪಡೆಯುವ ವಯಸ್ಸು ಮೀರಿದ್ದರೆ ಫ್ಯಾಮಿಲಿ ಪ್ಲಾನಿಂಗ್ ಮಾಡುವುದು ಬೇಡ. ಇದರಿಂದ ತಾಯಿ ಮತ್ತು ಮಗು ಇಬ್ಬರ ಜೀವಕ್ಕೂ ಅಥವಾ ಬೇರೆ ಏನೋ ಸಮಸ್ಯೆ ಆಗುತ್ತದೆ ಆದ್ದರಿಂದ ಆದಷ್ಟು ಸರಿಯಾದ ವಯಸ್ಸಿನಲ್ಲಿ ಮಕ್ಕಳನ್ನು ಮಾಡಿಕೊಳ್ಳಿ.

ಒಂದು ವೇಳೆ ನಿಮಗೆ ಮಧುಮೇಹ ಇನ್ನು ಬೇರೆ ಯಾವುದಾದರು ಆರೋಗ್ಯ ಸಮಸ್ಯೆಯಿದ್ದರೆ ಒಮ್ಮೆ ವೈದ್ಯರಲ್ಲಿ ಕೇಳಿ ಪ್ಲಾನಿಂಗ್ ಮಾಡುವುದನ್ನು ಬಿಟ್ಟು ಮಕ್ಕಳು ಮಾಡಿಕೊಳ್ಳುವುದರ ಬಗ್ಗೆ ಗಮನ ಕೊಡಿ. ಮತ್ತು ಸರಿಯಾದ ಸಮಯಕ್ಕೆ ಮಗು ಆದರೆ ಗಂಡ ಹೆಂಡತಿ ಸಂತೋಷವಾಗಿರುತ್ತಾರೆ. ಹೆಚ್ಚಾಗಿ ೩೦ ವರ್ಷ ದಾಟಿದ ಮೇಲೆ ಮಕ್ಕಳಾದರೆ ಬುದ್ಧಿ ಮಾಂದ್ಯ ಅಥವಾ ಮುಂಚೆ ಹುಟ್ಟುತ್ತವೆ ಹೀಗೆ ಹಲವಾರು ತೊಂದರೆ ಆಗಬಹುದು ಮತ್ತು  ಫ್ಯಾಮಿಲಿ ಪ್ಲಾನಿಂಗಯಿಂದ ಮುಂದೆ ಮಕ್ಕಳಾಗದೇ ಇರುವುದು ಹೀಗೆ ಹಲವಾರು ತೊಂದರೆ ಆಗುತ್ತವೆ ಆದ್ದರಿಂದ ಆದಷ್ಟು ಬೇಗ ಮಕ್ಕಳನ್ನು ಮಾಡಿಕೊಂಡು ಸಂತೋಷವಾಗಿರಿ.

LEAVE A REPLY

Please enter your comment!
Please enter your name here