ಶೀತ ಕೆಮ್ಮು ಅದು ಬೇಸಿಗೆ, ಮಳೆಗಾಲ, ಚಳಿಗಾಲ ಅನ್ನದೆ ಬರುವ ಸಾಮಾನ್ಯ ಖಾಯಿಲೆ. ಕೆಲವರಿಗಂತೂ ಧೂಳು, ಸಣ್ಣ ಪುಟ್ಟ ಅಲರ್ಜಿ, ಹವಾಮಾನದ ವೈಪರೀತ್ಯ ಆದರೂ ಸಾಕು ಸೀನುವುದು ಶುರು ಆಗುತ್ತದೆ. ಅದರಿಂದ ಆಗುವ ನೋವು ಅಷ್ಟಿಷ್ಟಿಲ್ಲ ತಲೆನೋವು , ಮೈಕೈ ನೋವು , ಗಂಟಲ ನೋವು , ಒಂದಲ ಎರಡಲ ಹಲವಾರು ಬಾಧೆಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ಮಾತ್ರೆ ತೆಗೆದು ಕೊಂಡಷ್ಟು ಇದು ಹೆಚ್ಚಾಗಿ ಹೋಗುವುದಿಲ್ಲ ಆ ಕ್ಷಣಕ್ಕೆ ನೆಮ್ಮದಿ ಅನಿಸಿದಿರು ಇದು ದೇಹಕ್ಕೆ ಅಷ್ಟು ಒಳ್ಳೆಯದಲ್ಲ. ಹಿತ್ತಲ ಗಿಡ ಮದ್ದಲ್ಲ ಅನ್ನುವುದನ್ನು ಮರತಾತಂಗಿದೆ ಸಣ್ಣ ಪುಟ್ಟ ಖಾಯಿಲೆಗಳಿಗೆ ವೈದ್ಯರ ಬಳಿ ಹೋಗೋವುದನ್ನು ಬಿಟ್ಟು ಮನೆಯಲ್ಲೇ ಆರೋಗ್ಯಕರವಾಗಿ ಈ ತರಹದ ಕಷಾಯವನ್ನು ಮಾಡಿಕೊಂಡು ಕುಡಿದರೆ ದೇಹಕ್ಕೂ ಹಿತ ಮನಸ್ಸಿಗೂ ಹಿತ. ಅಷ್ಟೇ ಅಲ್ಲದೆ ಇದು ನಿಮ್ಮ ಮೈಯನ್ನು ಬೆಚ್ಚಗೆ ಇಡುವುದರ ಜೊತೆಗೆ ಉಸಿರಾಟದ ಸಮಸ್ಯೆ ಆಗದಂತ್ತೆ ನೋಡಿಕೊಳ್ಳುತ್ತದೆ, ಜ್ವರ ಇದ್ದಾಗೂ ಕೂಡ ಈ ಕಷಾಯವನ್ನು ಕೊಡಬಹುದು. ಇಷ್ಟೆಲಾ ಉಪಯೋಗ ಇರುವ ಅದು ಯಾವ ಕಷಾಯ ಅಂತೀರಾ ಚಿಂತೆ ಬೇಡ ಅದನ್ನ ಹೇಗೆ ಮಾಡೋದು ಅಂತ ನಾವು ಹೇಳ್ತಿವಿ ನೀವು ಮಾಡಿ ನೋಡಿ.

 

ಬೇಕಾಗುವ ಸಾಮಗ್ರಿಗಳು

1 ಚಮಚ ಕೊತ್ತಂಬರಿ ಬೀಜ

1/2 ಚಮಚ ಜೀರಿಗೆ

1/2 ಚಮಚ ಅರಿಶಿನ ಪುಡಿ

1 ಚಮಚ ಬೆಲ್ಲ

1 ಚಮಚ ಕಾಳು ಮೆಣಸು

1 ಚಮಚ ತುರಿದ ಶುಂಠಿ

1/2 ಲೋಟ ಹಾಲು( ನಿಮ್ಮ ಅಳತೆಗೆ ತಕ್ಕಂತ್ತೆ )

ತಯಾರಿಸುವ ವಿಧಾನ

ಕೊತ್ತಂಬರಿ ಬೀಜ, ಜೀರಿಗೆ , ಕಾಳು ಮೆಣಸು, ಇದರ ಜೊತೆಗೆ ಸ್ವಲ್ಪ ಏಲ್ಲಕ್ಕಿ ಹಾಕಿ ಸ್ವಲ್ಪ ಹುರಿಯಬೇಕು, ನಂತರ ಅದು ತಣ್ಣಗಾದ ಮೇಲೆ ತರಿ ತರಿಯಾಗಿ ಪುಡಿ ಮಾಡಿ ಕೊಳ್ಳಬೇಕು( ನಿಮಗೆ ಜಾಸ್ತಿ ಅನಿಸಿದರೆ ಗಾಳಿ ಆಡದ ಡಬ್ಬದಲ್ಲಿ ಇಟ್ಟುಕೊಳ್ಳಿ ಎಷ್ಟ್ಟು ದಿನವಾದರೂ ಇದರ ಘಮ ಹೋಗೋವುದಿಲ್ಲ). ನಂತರ ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ ಕೊಳ್ಳಬೇಕು ನೀರಿನಲ್ಲಿ ಚಿಕ್ಕ ಚಿಕ್ಕ ಗುಳ್ಳಿಗಳು ಬರಲು ಪ್ರಾಂಭಿಸಿದಾಗ 1 ಚಮಚ ಕಷಾಯ ಪುಡಿ ,( ನಿಮ್ಮ ಅಳತೆಗೆ ತಕ್ಕಂತ್ತೆ ) ಅರಿಶಿನ ಪುಡಿ , ಬೆಲ್ಲ ,ಶುಂಠಿ ಹಾಕಿ ಸ್ವಲ್ಪ ಕೈಯಾಡಿಸಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ ಚಿಕ್ಕ ಉರಿಯಲ್ಲಿ ಕುಡಿಸುವುದರಿಂದ ಅದರಲ್ಲಿರುವ ಸಾಮಗ್ರಿಗಳು ನೀರಿನಲ್ಲಿ ಚೆನ್ನಾಗಿ ಕುದಿಯುತ್ತದೆ , ಅದು ಕುದಿದು ಬಂದ ಮೇಲೆ ಅದಕ್ಕೆ ಹಾಲು ಹಾಕಿ ಮತ್ತೊಮ್ಮೆ ಕುದಿಸಿದರೆ ರುಚಿಕರವಾದ ಕಷಾಯ ಕುಡಿಯಲು ಸಿದ್ಧ . ಈ ತರಹದ ಆರೋಗ್ಯಕರ ಕಷಾಯಗಳನ್ನು ಮನೆಯಲ್ಲೇ ಮಾಡಿ ಕೊಂಡು ಕುಡಿಯುವ ಅಭ್ಯಾಸ ರೂಡಿಸಿಕೊಳ್ಳಿ ವೈದ್ಯರ ಬಳಿ ಹೋಗೋವುದನ್ನು ಕಡಿಮೆಗೊಳಿಸಿ. ಇದನ್ನ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಇದನ್ನು ಸೇವಿಸಬಹುದು.

LEAVE A REPLY

Please enter your comment!
Please enter your name here