ಆಯಾ ಪ್ರದೇಶಕ್ಕೆ ತಕ್ಕಂತ್ತೆ ಊಟ ಉಡುಪು ಇರುತ್ತದೆ. ಸಾಮನ್ಯವಾಗಿ ಮನೆಯಲ್ಲಿ ಸಾಮನ್ಯವಾಗಿ ಕುರುಕುಲು ತಿಂಡಿಗಳ್ಳನು ಮಾಡುವ ಅಭ್ಯಾಸ ಇದ್ದೆ ಇರುತ್ತದೆ. ಬೇಸಿಗೆಯ ಕಾಲದಲ್ಲಿ ಒಂದು ತರಹದ ಆಹಾರದ ಪದ್ದತಿ ಇರುತ್ತದೆ, ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಒಂದೇ ತರಹದ ಆಹಾರ ಪದ್ದತಿ ಇರುತ್ತದೆ, ಯಾವಾಗಲು ಊಟಕ್ಕೆ ಬಿಸಿ ಬಿಸಿ ಅಡಿಗೆ ಬೇಕಿನಿಸುತ್ತದೆ. ಮಲೆನಾಡುಗಳಲ್ಲಿ ಹಲಸಿನ ಹಪ್ಪಳ ಮಾಡುತ್ತಾರೆ, ಇನ್ನು ಉತ್ತರ ಕರ್ನಾಟಕದ ಕಡೆಗೆ ವಿಧವಾದ ಹಪ್ಪಳಗಳನ್ನು ತಯಾರಿಸುತ್ತಾರೆ, ಅಕ್ಕಿ ಹಪ್ಪಳ, ಉದ್ದಿನ ಹಪ್ಪಳ, ಎಲ್ಲ ಕಾಳುಗಳನ್ನು ಸೇರಿಸಿ ಹಪ್ಪಳ ತಯಾರಿಸೋವುದು ಮಾಮೂಲಿ. ನೀವು ಸಬ್ಬಕ್ಕಿ ಕಾಳುಗಳಿಂದ ಕಿಚಿಡಿ ಅಥವಾ ಅದರಿಂದ ವಡ ತಯಾರಿಸೋವುದು ಸರ್ವೇ ಸಾಮನ್ಯ ಆದರೆ ಅದನ್ನ ಬಳಸಿ ಒಮ್ಮೆ ಸಂಡಿಗೆ ತಯಾರಿಸಿ ನೋಡಿ ಮಳೆಗಾಲಕ್ಕೆ ಹೇಳಿ ಮಾಡಿಸಿದಂತ್ತ ಕುರುಕುಲು ಇದು. ಆಚೆ ಕಡೆ ಇಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿ ತಿಂದರೆ ಆರೋಗ್ಯಕ್ಕೂ ಒಳ್ಳೇದು. ಹೇಗೆ ಮಾಡೋದು ಅಂತೀರಾ ಚಿಂತೆ ಬೇಡ ಈ ಕೆಳಗೆ ಓದಿ.

 

ಸಂಡಿಗೆ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು

1 ಬಟ್ಟಲು ಸಬ್ಬಕ್ಕಿ ಕಾಳುಗಳು

1 ಚಮಚ ಹಸಿ ಮೆಣಸಿನ ಕಾಯಿ ಪೇಸ್ಟ್ ( ನಿಮ್ಮ ರುಚಿಗೆ ತಕ್ಕಂತೆ)

ಸ್ವಲ್ಪ ಕಾಯಿ ತುರಿ

1 ಚಮಚ ನಿಂಬೆ ಹಣ್ಣಿನ ರಸ

ಸ್ವಲ್ಪ ಇಂಗು

2 ಚಮಚ ಜೀರಿಗೆ

ರುಚಿಗೆ ತಕಷ್ಟು ಉಪ್ಪು

ತಯಾರಿಸುವ ವಿಧಾನ

ಮೊದಲು ಸಬ್ಬಕ್ಕಿಯನ್ನು 4 ಗಂಟೆಗಳ ಕಾಲ ನೆನಿಸಿಡಬೇಕು, ನಂತರ ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅದಕ್ಕೆ 4 ಬಟ್ಟಲು ನೀರು( ಸಬ್ಬಕ್ಕಿ ತೆಗೆದು ಕೊಂಡಿರುವ ಅಳತೆಯ ಮೇಲೆ ) ಹಾಕಿ ಅದರಲ್ಲಿ ಹಸಿ ಹಸಿಮೆಣಸಿನ ಕಾಯಿ ಪೇಸ್ಟ್, ಉಪ್ಪು ಮತ್ತು ಸಬ್ಬಕ್ಕಿ ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದು ತಳ ಹಿಡಿಯದಂತ್ತೆ ಕೈಯಾಡಿಸುತ್ತ ಇರಬೇಕು, ಅದು ಬೆಂದ ಮೇಲೆ 10 ನಿಮಿಷ ಸಣ್ಣ ಉರಿಯಲ್ಲಿ ಹಾಗೆ ಬಿಡಬೇಕು , ನಂತರ ಅದಕ್ಕೆ ಇಂಗು ಜೀರಿಗೆ ನಿಂಬೆ ಹಣ್ಣಿನ ರಸ ಹಾಕಿ 10 ನಿಮಿಷ ಕುದಿಸಬೇಕು ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
ತಣ್ಣಗಾದ ನಂತರ ಮಿಶ್ರಣ ಗಟ್ಟಿ ಆಗುತ್ತಾ ಬರುತ್ತದೆ. ಮೊದಲು ಒಂದು ತೆಳು ಪೇಪರ್ ಅಥವಾ ಒಂದು ದೊಡ್ಡ ತಟ್ಟೆಯ ಮೇಲೆ ಬಿಳಿ ಬಟ್ಟೆಯನ್ನು ಹಾಕಿ ಸಿದ್ಧ ಮಾಡಿಕೊಂಡಿರಬೇಕು, ನಂತರ ಒಂದು ಅಳತೆಯ ಚಮಚ ತೆಗೆದು ಕೊಂಡು ರೆಡಿ ಮಾಡಿರುವ ಬಟ್ಟೆಯ ಮೇಲೆ ನಿಮ್ಮ ಅಳತೆಯ ಪ್ರಕಾರ ಹಾಕಿಕೊಳ್ಳಬೇಕು, ನಂತರ ಇದನ್ನು ಬಿಸಿಲಿಗೆ ಒಣಗಲು ಹಾಕಬೇಕು 2 ರಿಂದ 3 ದಿನ ಬಿಸಿಲಿಗೆ ಒಣಗಿಸಿದರೆ ಸಾಕು. ಆಮೇಲೆ ಅದನ್ನ ಒಂದು ಡಬ್ಬಿಗೆ ಹಾಕಿಕೊಳ್ಳಬೇಕು , ಬೇಕಿನಿಸಿದಾಗ ಎಣ್ಣೆಯಲ್ಲಿ ಕರಿದು ಕಂಡು ತಿನ್ನಬಹುದು. ಮನೆಯಲ್ಲೇ ಹಿಂತಹ ರುಚಿಕರವಾದ ತಿನಿಸುಗಳನ್ನು ರೆಡಿ ಮಾಡಿಕೊಳ್ಳಿ ಆರೋಗ್ಯಕರವಾಗಿರಿ .

1 COMMENT

LEAVE A REPLY

Please enter your comment!
Please enter your name here