ಬಿಸಿಲಿನಲ್ಲಿ ಓಡಾಟ ಅವಿರತ ಪ್ರಯಾಣ ಬೆವರು ಬಂದರು ಒರೆಸಿಕೊಳ್ಳಲಾಗದಸ್ಟು ವ್ಯವಸ್ಥೆಯ ನಡುವೆ ನಮ್ಮ ಬದುಕಿನ ಬಂಡಿ ಸಾಗುತಿದೆ.
ಹೀಗಿರುವಾಗ  ಸಾಮಾನ್ಯವಾಗಿ ತೊಡೆ ಸಂದಿಯಲ್ಲಿ ಸಹಿಸಿಕೊಳ್ಳಲಾಗದ ತುರಿಕೆ. ಚರ್ಮ ಕಪ್ಪಾಗುವದು, ಕೆಂಪಾದ ವೃತ್ತಾಕಾರದ ಗುರುತುಗಳಾಗುವದು, ಭುಜದ ಮೇಲೆ  ಬಿಸಿಲಿನಲ್ಲಿ ಓಡಾಡುವಾಗ  ಈ ತರಹದ ಚರ್ಮಕ್ಕೆ ಸಂಬಂಧ ಪಟ್ಟ ರೋಗಗಳು  ಕಾಣಿಸಿಕೊಂಡು ಜನರ ಮದ್ಯ ಮುಜುಗರ ಉಂಟುಮಾಡುತ್ತವೆ. ಇದಕ್ಕೆ ಮಾರುಕಟ್ಟೆ ಯಲ್ಲಿ ಅನೆಕ ತರಹದ ಔಷಧಿಗಳು ಲಭ್ಯವಿರುತ್ತವೆ. ಅದರ ಬೆಲೆಗಳು ಅಸ್ಟೆ ದುಬಾರಿಯಾಗಿವೆ ಪರಿಣಾಮ ಕೂಡಾ ಸಮಾಧಾನಕರವಿಲ್ಲ.

ಇದಕ್ಕಾಗಿ ಒಂದು ಸರಳ ಮನೆ ಮದ್ದು ನೀವೇಮಾಡಿಕೊಳ್ಳಬಹುದು ಮತ್ತು ಪರಿಣಾಮಕಾರಿಯು ಆಗಿರುತ್ತದೆ. ಸಾಮಾನ್ಯವಾಗಿ ಸುತ್ತಮುತ್ತಲಿನಲ್ಲಿ  ಸಿಗುವ ಬೇವಿನ  ಎಲೆಯನ್ನು ತಂದು ಸ್ವಚ್ಚವಾಗಿ ತೊಳೆದು. ಸುಮಾರು ಐವತ್ತು ಗ್ರಾಮನಸ್ಟು ಇದು ಸ್ವಲ್ಪ ಹೆಚ್ಚು ಕಡಿಮೆ ಆದರು ಎನು ಅಡ್ಡ ಪರಿಣಾಮಗಳು ಇಲ್ಲ.

ತೊಳೆದು ಸ್ವಚ್ಚಗೊಳಿಸಿದ ಎಲೆಗಳನ್ನು ಜಾರಗೆ ಹಾಕಿ ಅದಕ್ಕೆ ಒಂದು ಚಮಚ ಅರಿಶಿನದ ಪುಡಿ ಸೆರಿಸಿ ಚೆನ್ನಾಗಿ ಗ್ರೈಂಡ ಮಾಡಿ ಒಂದು ಗಟ್ಟಿ ಮುಚ್ಚಳ ಇರುವ ಶಿಶೆಯಲ್ಲಿ ಇಟ್ಟುಕೊಳ್ಳಿ ದಿನಾ ರಾತ್ರಿ ಸೊಂಕಿರುವ ಭಾಗಕ್ಕೆ ಚೆನ್ನಾಗೆ ಲೆಪಿಸಿ ಸ್ನಾನ ಮಾಡುವಾಗ ತೊಳೆಯಿರಿ ಹೆಳ ಹೆಸರಿಲ್ಲದಂತೆ ಸೊಂಕು ಮಾಯವಾಗಿ ಹೊಗುತ್ತದೆ.

LEAVE A REPLY

Please enter your comment!
Please enter your name here