ಬಹುತೇಕ ಮಹಿಳೆಯರಲ್ಲಿ ಕಾಡುವ ಸಮಸ್ಯೆ ಅಂದರೆ ತಿಂಗಳಿನ ಮುಟ್ಟು. ಇದು ವಯಸ್ಸಿನ ಸಮಸ್ಯೆ ಅಲ್ಲದೆ ಎಲ್ಲ ವಯಸ್ಸಿನ ಹೆಣ್ಣು ಮಕ್ಕಳಿಗೆ ಸರ್ವೇ ಸಾಮನ್ಯವಾಗಿ ಈ ಸಮಸ್ಯೆ ಇದ್ದೆ ಇರುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆಯಿಂದ ಅನೇಕ ಮಹಿಳೆಯರು ಬಳಲುತ್ತಾರೆ,ಇದಕ್ಕೆ ಕಾರಣ ಆಹಾರದ ಪದ್ಧತಿ ಇರಬಹುದು ಅಥವಾ ಹಾರ್ಮೂನ್ ಬದಲಾವಣೆ ಇರಬಹುದು ಈಗಿನ ವಾಯುಮಾಲಿನ್ಯ ಕೂಡ ಕಾರಣವಾಗಿರಬಹುದು, ಇದರಿಂದ ಮುಂದೆ ಗರ್ಭಧರಿಸಲು ಸಾಧ್ಯವಾಗದೆ ಇರಬಹುದು, ತಿಂಗಳಿಗೆ ಒಮ್ಮೆ ಸತತವಾಗಿ ಮುಟ್ಟು ಆಗುತ್ತಿದ್ದು ಒಂದೆರಡು ದಿನ ಮುಂದಕ್ಕೆ ಹೋದರೆ ಚಿಂತಿಸುವ ಅವಶ್ಯಕೆತೆ ಇಲ್ಲ, ಆದರೆ ಪ್ರತಿ ಸಾರಿ ಸರಿಯಾದ ಸಮಯಕ್ಕೆ ಆಗದೆ ಹೋದರೆ ವೈದ್ಯರ ಬಳಿ ಸಂಪರ್ಕಿಸುವುದು ಉತ್ತಮ. ಇದು ಅಲಕ್ಶ್ಯ ಮಾಡುವ ವಿಚಾರವಲ್ಲದ ಕಾರಣ. ಆದರೆ ಒಂದೆರಡು ದಿನ ಮುಂದೆ ಹೋಗಿ ಸರಿಯಾಗಿ ಆಗುತ್ತಿದ್ದರೆ ಈ ಮನೆಮದ್ದುಗಳನ್ನು ಬಳಸಿ ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ದೂರಗೊಳಿಸಿ.

 

ಬಾದಾಮಿ

ನಿತ್ಯದಲ್ಲೂ ಬಾದಾಮಿಯನ್ನು ಸೇವಿಸುತ್ತಾ ಬಂದರೆ ನಿಮ್ಮ ಋತುಚಕ್ರದಲ್ಲಿ ಯಾವುದೇ ತೊಂದರೆ ಕಂಡು ಬರುವುದಿಲ್ಲ, ಕೇವಲ ಇದಕ್ಕೆ ಇಷ್ಟೇ ಅಲ್ಲದೆ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಮಕ್ಕಳಿಗೆ ಕೊಡುವುದರಿಂದ ಅವರ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

ಕ್ಯಾರೆಟ್ 

ಕ್ಯಾರೆಟ್ ನಲ್ಲಿ ದೇಹಕ್ಕೆ ಬೇಕಾಗಿರುವ ವಿಟಮಿನ್ಸ್ಗಳು ಹೇರಳವಾಗಿರುತ್ತವೆ. ಅಷ್ಟೇ ಅಲ್ಲದೆ ಇದು ಹಾರ್ಮೋನ್ ಗಳ ಸಮತೋಲನೆಯನ್ನು ಕಾಪಾಡುವು ಶಕ್ತಿ ಈ ತರಕಾರಿ ಅಲ್ಲಿದೆ, ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಸಲಾಡ್ ಗಳ್ಳಲ್ಲಿ ಹಾಕಿಕೊಂಡು ತಿನ್ನಬಹುದು, ಇದನ್ನು ಮಕ್ಕಳಿಗೆ ಹೆಚ್ಚಾಗಿ ಕೊಡುವುದರಿಂದ ಅವರಲ್ಲಿ ಕಣ್ಣಿನ ದೃಷ್ಠಿಯ ಸಮಸ್ಯೆ ಕಾಡುವುದಿಲ್ಲ. ಇದನ್ನು ಜ್ಯೂಸ್ ಮಾಡಿಕೊಂಡು ಕೂಡ ಕುಡಿಯಬಹುದು.

 

ಪಪಾಯ / ಪರಂಗಿ ಹಣ್ಣು

ಮುಟ್ಟಿನ ಸಮಸ್ಯೆಯಿಂದ ಬಳಲುವರಿಗೆ ಪಪ್ಪಾಯ ಹಣ್ಣು ರಾಮ ಬಾಣವಿದಂತ್ತೆ. ಹೆಚೆಚ್ಚು ಈ ಹಣ್ಣನ್ನು ಸೇವಿಸುತ್ತಾ ಬಂದರೆ ಕ್ರಮೇಣವಾಗಿ ಮುಟ್ಟಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವಿರಿ. ಹೆಚ್ಚಾಗಿ ಬೆಳಗಿನ ಹೊತ್ತು ಈ ಹಣ್ಣನು ಸೇವಿಸುವುದು ಉತ್ತಮ.

ಅರಿಶಿಣ

ಒಂದು ಲೋಟ ನೀರಿಗೆ ಅರಿಶಿನ ಹಾಕಿ ಸ್ವಲ್ಪ ಸಣ್ಣ ಗುಳ್ಳಿ ಬಂದರೆ ಸಾಕು ಆ ನೀರನ್ನು ದಿನಕ್ಕೆ ೨ ಬಾರಿ ಕುಡಿದರೆ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವುದು ಅಷ್ಟೇ ಅಲ್ಲದೆ ನೀವು ಅಂದುಕೊಳ್ಳುವ ದಿನಕ್ಕೆ ಸರಿಯಾಗಿ ಮುಟ್ಟು ಆಗುವುದು ( 10 ದಿನದ ಮುಂಚೆಯಿಂದ ತೆಗೆದುಕೊಳ್ಳಬೇಕು ). ದಿನಕ್ಕೆ 2 ಬಾರಿ ಬೆಚ್ಚಗಿನ ಹಾಲಿನೊಂದಿಗೆ ಅರಿಶಿನ ಹಾಕಿಕೊಂಡು ಕುಡಿಯಬೇಕು ಇದರಿಂದ ದೇಹದಲ್ಲಿ ಹಾರ್ಮೋನ್ಗಳ ಬ್ಯಾಲೆನ್ಸ್ ಸುಧಾರಿಸುತ್ತದೆ. ಪೈನಾಪಲ್ ಜ್ಯೂಸ್ ಅನ್ನು ಹೆಚ್ಚಾಗಿ ಸೇವಿಸುತ್ತಾ ಬಂದರೆ ತಿಂಗಳಿನ ಮುಟ್ಟು ಸರಿಯಾಗಿ ಆಗುತ್ತದೆ.ಇದರ ಜೊತೆಗೆ ಯೋಗ ಮತ್ತೆ ಕೆಲವು ವ್ಯಾಯಾಮಗಳನ್ನು ರೂಢಿಸಿಕೊಳ್ಳಿ.

LEAVE A REPLY

Please enter your comment!
Please enter your name here