ನಾವು ಎಷ್ಟೋ ಹಣ್ಣುಗಳನ್ನು ಸುಮ್ಮನೆ ಬಾಯಿ ರುಚಿಗೆ ತಿಂದು ಬಿಡುತ್ತೇವೆ. ಆದರೆ ನಾವು ಬಾಯಿ ರುಚಿಗೆ ಅಂತ ತಿನ್ನುವ ಹಣ್ಣುಗಳೇ ಎಷ್ಟೊಂದು ಆರೋಗ್ಯದ ಗುಟ್ಟು ಅಡಗಿಸಿಕೊಂಡಿರುತ್ತದೆ ಅಂದರೆ ಹೇಳಲಾಗದು ಹಾಗಿದ್ರೆ ಎಲ್ಲರೂ ಇಷ್ಟ ಪಡುವ ಹಲಸಿನ ಹಣ್ಣಿನ ಬಗ್ಗೆ ನಾವು ನಿಮಗೆ ಗೊತ್ತಿರದ ಕೆಲವು ವಿಷಯ ತಿಳಿಸುತ್ತೇವೆ ಮುಂದೆ ಓದಿ…

ಈ ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಇರುತ್ತದೆ. ಆದ್ದರಿಂದಲೇ “ಹಸದ(ಹಸುವೇ ಆದಾಗ) ಹಲಸು ಉಂಡು ಮಾವು ಅಂತ ಗಾದೆ ಮಾತಿದೆ. ನೀವು ಸಹ ಕೇಳಿರುತ್ತೀರಾ, ಹಲಸಿನಲ್ಲಿ  ಸೆರೋಟಿನ್, ಬೀಟಾ ಕ್ಯಾರೋಟಿನ್, ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಅಂಶಗಳನ್ನು ಒಳಗೊಂಡಿದೆ.

ಈ ಹಣ್ಣಿನಲ್ಲಿರುವ ಅಧಿಕ ಮ್ಯಾಗ್ನೆಷಿಯಂ ಮತ್ತು ಕ್ಯಾಲ್ಶಿಯಂ ಅಂಶವಿರುವುದರಿಂದ ಮೂಳೆಗಳನ್ನು ಗಟ್ಟಿಯಾಗಿಸುವುತ್ತದೆ. ಸಾಮಾನ್ಯವಾಗಿ ಮ್ಯಾಗ್ನೆಷಿಯಂ ಮತ್ತು ಕ್ಯಾಲ್ಶಿಯಂ ಅಂಶವಿರುವ ಯಾವುದೇ ಪದಾರ್ಥವನ್ನು ತಿಂದರು ಮೂಳೆಗಳು ಬಲಗೊಳ್ಳುತ್ತವೆ.

ಒಂದು ವೇಳೆ ಮಲಭದ್ದತೆ ಸಮಸ್ಯೆ ಇರುವವರು ಹಲಸಿನ ಹಣ್ಣು ನಿಯಮಿತವಾಗಿ ತಿನ್ನುವುದರಿಂದ ಮಲಭದ್ದತೆ ಸಮಸ್ಯೆ ಕಡಿಮೆಯಾಗುತ್ತದೆ. ವಿಟಮಿನ್ ಮತ್ತು ಖನಿಜಾಂಶಗಳು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ.

1 COMMENT

LEAVE A REPLY

Please enter your comment!
Please enter your name here