ದಂಪತಿಗಳು ಹೆಚ್ಚು ರೋಮ್ಯಾನ್ಸ್ ಅಲ್ಲಿ ತೊಡಗಿದ್ರೆ ಅವರ ನಡುವಿನ ಭಾಂದವ್ಯ ಇನ್ನು ಹೆಚ್ಚಿಸುತ್ತದೆ. ಲೈಂಗಿಕ ಕ್ರಿಯೆ ಎಂಬುದು ಜೀವನದ ಒಂದು ಭಾಗ. ದಂಪತಿಗಳು ಪ್ರೀತಿ, ಜಗಳ ಮತ್ತು ಅನೋನ್ಯತೆಯಿಂದ ಇದ್ದರೆ ಅವರ ಸಂಭಂದ ಗಟ್ಟಿ ಆಗಿರುತ್ತದೆ. ಒಬ್ಬರಿಗೊಬ್ಬರು ಕನ್ನಡಿಯಂತೆ ಇರಬೇಕು.

ಸಂತಾನೋತ್ಪತ್ತಿಗೆ ಲೈಂಗಿಕ ಕ್ರಿಯೆ ಸಂಭಂದ ಎನ್ನುವುದು ತುಂಬಾ ಅಗತ್ಯವಾಗಿದೆ. ಆದರೆ ಎಷ್ಟೋ ಜನರಿಗೆ ಇದರ ಬಗ್ಗೆ ಅರಿವಿಲ್ಲದಂತೆ ವರ್ತಿಸುತ್ತಾರೆ. ಸದ್ಯ ಭಾರತದಲ್ಲಿ ಲೈಂಗಿಕ ಶಿಕ್ಷದ ಬಗ್ಗೆ ಅರಿವು ಮೂಡಿಸುವ ಕೊರತೆ ತುಂಬಾ ಇದೆ. ಅದಲ್ಲದೆ ಇದರ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಮಡಿವಂತಿಕೆ ಬೇರೆ ಹೆಚ್ಚಾಗಿದೆ ಎಂಬುದು ಸುಳ್ಳಲ್ಲ.

ಸಂಶೋಧಕರ ಪ್ರಕಾರ ಒಬ್ಬ ವ್ಯಕ್ತಿ ಆರೋಗ್ಯವಂತರಾಗಿರಲು ಲೈಂಗಿಕ ಕ್ರಿಯೆ ತುಂಬಾ ಮುಖ್ಯ. ಲೈಂಗಿಕ ಕ್ರಿಯೆಯಲ್ಲಿ ಮಿತವಾಗಿ ತೊಡಗುವುದರಿಂದ ಹೃದಯ ಸಮಸ್ಯೆ ಉಂಟಾಗುವುದಿಲ್ಲ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ದಿನನಿತ್ಯದ ಜೇವನದಲ್ಲಿ ಕಂಡು ಬರುತ್ತಿರುವ ಖಿನ್ನತೆ ಮತ್ತು ಒತ್ತಡವನ್ನು ದೂರ ಮಾಡುವಲ್ಲಿ ಲೈಂಗಿಕ ಚಟುವಟಿಕೆಗಳು ಮುಖ್ಯ ಪಾತ್ರವಹಿಸಿದೆ.

ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಮನಸಿನ ಸಮತೋಲನ ಕಾಪಾಡಿಕೊಳ್ಳಬಹುದು ಮತ್ತು ದೇಹದಲ್ಲಿ ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಅಲ್ಲದೆ ಮನುಷ್ಯನ ಮಾನಸಿಕ ಆರೋಗ್ಯವು ಸುಧಾರಿಸುತ್ತದೆ. ದಂಪತಿಗಳ ಮಧ್ಯೆ ಲೈಂಗಿಕ ಸಂಭಂದ ಚೆನ್ನಾಗಿದ್ದರೆ ದಾಂಪತ್ಯ ಜೀವನ ಸುಂದರವಾಗಿರುತ್ತದೆ.

LEAVE A REPLY

Please enter your comment!
Please enter your name here