ಎಲ್ಲರ ಮನೆಯಲ್ಲೂ ಆಲೂಗಡ್ಡೆಯನ್ನು ಉಪಯೋಗಿಸುವ ಅಭ್ಯಾಸ ಇದ್ದೆ ಇರುತ್ತದೆ. ಆಲೂಗಡ್ಡೆ ಹಾಗು ಬಟಾಟಿ ಅನ್ನುವ ೨ ಹೆಸರನ್ನು ಹೊಂದಿರುವ ತರಕಾರಿ. ಆಲೂಗಡ್ಡೆಯಿಂದ ತಯಾರಿಸುವ ವಿಧವಿಧವಾದ ಖಾದ್ಯಗಳು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದು ಸಿಹಿ ಅಂಶವನ್ನು ಹೊಂದಿರುತ್ತದೆ, ಇದು ಬೇಗನೆ ಜೀರ್ಣವಾಗುವುದಿಲ್ಲ ತುಂಬಾ ಹೊತ್ತು ಹೊಟ್ಟೆ ತುಂಬಿದ ಹಾಗೆ ಅನಿಸುತ್ತೆ. ಇನ್ನು ಈ ತರಕಾರಿ ಬಳಸಿ ಮಾಡುವ ಅಲೋ ಚಿಪ್ಸ್, ಆಲೂ ಪರೋಟ, ಪಲ್ಯ , ಬುರ್ಜಿ, ಹೀಗೆ ಹಲವಾರು ರುಚಿ ರುಚಿಯಾದ ತಿನುಸುಗಳನ್ನು ಮಾಡುತ್ತಾರೆ. ಆಲೂಗಡ್ಡೆಗಳಲ್ಲಿ ಅನೇಕ ಜಾತಿಗಳಿವೆ, ಬಿಳಿ, ಬಂಗಾರದ ಬಣ್ಣ , ನೇರಳೆ ಬಣ್ಣ, ಕಪ್ಪು ಬಣ್ಣ, ಕಂದು ಬಣ್ಣ ಹೀಗೆ ಹಲವಾರು ರೀತಿಯ ಬಣ್ಣಗಳನ್ನು ಹೊಂದಿರುವ ಆಲೂಗಡ್ಡೆಯು ಕೇವಲ ಬಾಯಿಗೆ ರುಚಿಯನ್ನು ಕೊಡದೆ ಬಹು ಉಪಯೋಗಿ ತರಕಾರಿ ಇದು. ಇನ್ನು ಇದರ ಉಪಯೋಗ ಏನು ಅನ್ನೋದನ್ನ ಈ ಕೆಳಗೆ ಓದಿ.

ಸುಟ್ಟಿರುವ ಜಾಗದಲ್ಲಿ ಶರೀರದ ಯಾವುದೇ ಭಾಗವಿರಲ್ಲಿ ಅದಕ್ಕೆ ಈ ಲೇಪನ ಮಾಡಿ ಹಚ್ಚಬೇಕು. ಆಲೂಗಡ್ಡೆಯನ್ನು ನುಣ್ಣಗೆ ಅರಿದು ಕೊಳ್ಳಬೇಕು ನಂತರ ಸುಟ್ಟಿರುವ ಭಾಗಕ್ಕೆ ಹಚ್ಚಬೇಕು ಇದರಿಂದ ಗಾಯದ ಉರಿ ಕಡಿಮೆ ಆಗುವುದರ ಜೊತೆಗೆ ತಂಪಾಗಿಸುತ್ತದೆ.

ಇದರಲ್ಲಿ ಪೋಷ್ಟಿಕಾಂಶವು ಹೆಚ್ಚಾಗಿರುವ ಕಾರಣ ಇದನ್ನು ಬೇಯಿಸುವಾಗ ಮತ್ತು ಅದರ ಸಿಪ್ಪೆಯನ್ನು ತೆಗೆಯುವಾಗ ಅದರಲ್ಲಿರುವ ಸೂಕ್ಷ್ಮ ಪದರ ಹಾಳಾಗದಂತೆ ನೋಡಿಕೊಳ್ಳಬೇಕು. ಇದನ್ನು ಸಿಪ್ಪೆ ಸಮೇತ ತಿನ್ನುವುದರಿಂದ ಬಿಪಿಯನ್ನು ನಿಯಂತ್ರಣದಲ್ಲಿ ಇರುವಂತೆ ಮಾಡುತ್ತದೆ.

ಶರೀರದ ಯಾವದೇ ಭಾಗದಲ್ಲಿ ನೋವಿನಿಂದ ಉದು ಕೊಂಡಿದರೆ(ಬಾವು ) ಬಂದಿದ್ದರೆ ಆಲೂಗಡ್ಡೆಯಿಂದ ಕಡಿಮೆ ಗೊಳಿಸಬಹುದು. 4 ಆಲೂಗಡ್ಡೆಯನ್ನು ತೆಗೆದು ಕೊಂಡು ಅದನ್ನು 4 ಭಾಗಗಳಾಗಿ ಕತ್ತರಿಸಬೇಕು, ನಂತರ ಅದನ್ನು ಒಂದು ಗ್ಲಾಸ್ ಅಷ್ಟು ನೀರನ್ನು ತೆಗೆದುಕೊಂಡು ಬೇಯಿಸಿಕೊಳ್ಳಬೇಕು ಪೂರ್ತಿಯಾಗಿ ನೀರು ಕುದಿದು ಹೋಗದಂತ್ತೆ ನೋಡಿಕೊಳ್ಳಬೇಕು, ಅದು ಸ್ವಲ್ಪ ತಣ್ಣಗಾದ ಮೇಲೆ ಊದಿಕೊಂಡಿರುವ ಭಾಗಕ್ಕೆ ಆಲೂಗಡ್ಡೆಯ ನೀರನ್ನು ಹಾಕಿ ತೊಳಿಯಬೇಕು ಇದರಿಂದ ಭಾವು ಕಡಿಮೆಯಾಗುತ್ತದೆ.

ಆಲೂಗಡ್ಡೆಯನ್ನು ನುಣ್ಣಗೆ ಅರೆದು ನಿಂಬೆ ಹಣ್ಣಿನ ರಸದೊಂದಿಗೆ ಚೆನ್ನಾಗಿ ಕಲಸಿಕೊಳ್ಳಬೇಕು ಇಸುಬು, ಅಲರ್ಜಿ, ಎಗ್ಜಿಮಾ ಹೀಗೆ ಚರ್ಮ ರೋಗದ ಸಮಸ್ಯೆಯಿದ್ದರೆ ಮೇಲೆ ಹೇಳಿರುವ ಲೇಪನವನ್ನು ಸಮಸ್ಯೆ ಇರುವ ಜಾಗದಲ್ಲಿ ಹಚ್ಚಿ ಮೇಲೆ ಎಲೆಯನ್ನು ಹಾಕಿ ಕಟ್ಟಬೇಕು ಹೀಗೆ ದಿನವು ಮಾಡಿದರೆ ಹಿಂತಹ ಸಮಸ್ಯೆಗಳಿಂದ ಕ್ರಮೇಣ ಮುಕ್ತಿ ಹೊಂದಬಹುದು.

ಅಡುಗೆ ಮಾಡುವಾಗ ಎಲ್ಲಾದರೂ ಸುಟ್ಟರೆ ಆಲೂಗಡ್ಡೆಯಿಂದ ಉಜ್ಜಿಕೊಳ್ಳಬೇಕು ಇದರಿಂದ ಗಾಯ ಹರಡಿಕೊಳ್ಳುವುದಿಲ್ಲ ಜೊತೆಗೆ ಉರಿಯುವುದು ಬೇಗ ಕಡಿಮೆ ಗೊಳ್ಳುತ್ತದೆ.

LEAVE A REPLY

Please enter your comment!
Please enter your name here