ಸಾಮಾನ್ಯವಾಗಿ ಬಸಳೆ ಸೊಪ್ಪಿನ ಬಳ್ಳಿಯನ್ನು ಬೆಳಿಸಿರುತ್ತಾರೆ. ಇದನ್ನು ಬೆಳಿಸುವುದು ತುಂಬಾನೇ ಸುಲಭ ಕೇವಲ ಇದರ ಎಲೆಗಳನ್ನು ತೆಗೆದು ಅದರ ಕಾಂಡವನ್ನು ಮಣ್ಣಿನಲ್ಲಿ ನೆಟ್ಟರೆ ಅದಕ್ಕೆ ಮಿತವಾಗಿ ನೀರು ಹಾಕಬೇಕು ಆದರೆ ಒಳ್ಳೆಯ ಮಣ್ಣು ಇರಬೇಕು, ಇಲ್ಲದೆ ಹೋದರೆ ಬಸಳೆ ಸಸಿಯ ಬೀಜವನ್ನು ಒಂದು ಪಾಟ್ ನಲ್ಲಿ ಕೆಂಪು ಮಣ್ಣು ಮತ್ತು ನೀರು ಹಾಕಿ ಸ್ವಲ್ಪ ಮರಳು ಮಿಶ್ರಿತ ಮಣ್ಣು ಇದ್ದರೇ ಒಳ್ಳೆಯದು ಸಸಿಯ ಬೀಜವನ್ನು ಸ್ವಲ್ಪ್ ಆಳದಲ್ಲಿ ಹಾಕಬೇಕು ಇದು ಮೊಳಕೆ ಬರಲು ೧೦ ರಿಂದ ೧೨ ದಿವಸ ಬೇಕಾಗುತ್ತದೆ. ಇಷ್ಟೇ ಅಲ್ಲದೆ ಇದು ದೇಹಕ್ಕೆ ಬೇಕಾಗಿರುವ ಪ್ರೋಟೀನ್ಸ್, ಕಾರ್ಬೋಹೈಡ್ರೇಟ್, ಮತ್ತು ಖನಿಜಾಂಶ ವನ್ನು ಹೊಂದಿರುತ್ತದೆ. ಇದರಲ್ಲಿ ೨ ವಿಧವಿದೆ ಒಂದು ಕೆಂಪು ಬಣ್ಣದ ಬಸಳೆ ಇನ್ನೊಂದು ಹಸಿರು ಬಣ್ಣದ ಬಸಳೆ. ಇನ್ನು ಬೇಸಿಗೆ ಕಾಲಕ್ಕೆ ಬಸಳೆ ತಂಬುಳೆ ತಿನ್ನುವುದು ತುಂಬಾನೇ ಒಳ್ಳೆಯದು ಇದರಿಂದ ದೇಹವನ್ನು ಉಷ್ಣ ದಿಂದ ಕಾಪಾಡುತ್ತದೆ. ಒಂದು ಸಾರಿ ಈ ರೀತಿಯ ತಂಬುಳೆ ಮಾಡಿ ಸವಿಯಿರಿ.

ಬೇಕಾಗಿರುವ ಸಾಮಗ್ರಿಗಳು

ಬಸಳೆ ಸೊಪ್ಪು – ಒಂದು ಹಿಡಿ

ಕಾಳು ಮೆಣಸು- 10 – 12

ಜೀರಿಗೆ – 1 ಚಮಚ

ಹಸಿ ಮೆಣಸಿನಕಾಯಿ – ನಿಮ್ಮ ಇಷ್ಟಕ್ಕೆ ತಂಕಂತೆ

ತುಪ್ಪ – 1 ಚಮಚ

ತೆಂಗಿನ ಕಾಯಿ ತೂರಿ – 3 ಚಮಚ

ಮಜ್ಜಿಗೆ ಅಥವಾ ಮೊಸರು – ಒಂದು ದೊಡ್ಡ ಬಟ್ಟಲು

ಉಪ್ಪು ರುಚಿಗೆ ತಕಷ್ಟು

ಒಗ್ಗರಣೆಗೆ- ಸಾಸಿವೆ , ಒಣ ಮೆಣಸಿನಕಾಯಿ, ಹಿಂಗು, ತುಪ್ಪ ಅಥವಾ ಎಣ್ಣೆ

ಮಾಡುವ ವಿಧಾನ

  1. ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಬಸಳೆ ಸೊಪ್ಪು ಮತ್ತು ಕಾಳು ಮೆಣಸು, ಹಸಿ ಮೆಣಸಿನ ಕಾಯಿ. ಹಾಕಿ ಕುದಿಯಲು ಬಿಡಬೇಕು, ಅದು ಕುದಿದು ಬಂದ ಮೇಲೆ ಸ್ವಲ್ಪ ತಣ್ಣಗಾಗಲು ಬಿಡಬೇಕು ನಂತರ ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಕೊಳ್ಳಬೇಕು, ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಅದು ಕಾದ ಮೇಲೆ ಅದಕ್ಕೆ ಸಾಸಿವೆ, ಜೀರಿಗೆ, ಇಂಗು ಹಾಕಬೇಕು ನಂತರ ರುಬ್ಬಿದ ಮಿಶ್ರಣವನ್ನು ಅದಕ್ಕೆ ಹಾಕಿ ಕೈಯಾಡಿಸಬೇಕು ಸ್ವಲ್ಪ ಕುದಿ ಬಂದ ಮೇಲೆ ಅದಕ್ಕೆ ರುಚಿಗೆ ತಕಷ್ಟು ಉಪ್ಪು ಹಾಕಿ ಅದಕ್ಕೆ ಮಜ್ಜಿಗೆ ಅಥವಾ ಮೊಸರು ಹಾಕಿದರೆ ರುಚಿಯಾದ ತಂಬುಳೆ ಸವಿಯಲು ಸಿದ್ಧ.

2- ಮೊದಲಿಗೆ ಒಂದು ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಒಣ ಮೆಣಸಿನಕಾಯಿ , ಜೀರಿಗೆ, ಕಾಳು ಮೆಣಸು ಸ್ವಲ್ಪ ಹಿಂಗು ಹಾಕಿ ಅದರಲ್ಲಿ ಬಸಳೆ ಸೊಪ್ಪನ್ನು ಹಾಕಿ ಬಾಡಿಸಬೇಕು ಅದು ಹಸಿ ವಾಸನೆ ಹೋದ ಮೇಲೆ ಅದನ್ನು ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಬೇಕು. ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ಉಪ್ಪು ಮಜ್ಜಿಗೆ ಅಥವಾ ಮೊಸರು ಹಾಕಿದರೆ ( ಬೇಕಿನಿಸಿದರೆ ಮೇಲೆ ಒಗ್ಗರಣೆ ಹಾಕಿ ಕೊಳ್ಳಬಹುದು) ರುಚಿಕರವಾದ ಬಸಳೆ ತಂಬುಳೆ ಸವಿಯಲು ಸಿದ್ದ.

LEAVE A REPLY

Please enter your comment!
Please enter your name here