ಹೌದು ಇವು ಚೂರು ಪಾರು ಟಿಪ್ಸ್ಗಳೇ ಅಂದುಕೊಳ್ಳಿ ಆದರೆ ಪರಿಣಾಮ ಮಾತ್ರ ಅಪಾರ. ಹಾಗಾದ್ರೆ ಏನು ಅವು ಸಣ್ಣ ಪುಟ್ಟ ಟಿಪ್ಸ್ ಅಂತೀರಾ ಇಲ್ಲಿ ಓದಿ …

ಎಳ್ಳೆಣ್ಣೆಯನ್ನು ನೀವು ತಲೆ ಸ್ನಾನ ಮಾಡುವ ಒಂದು ಘಂಟೆ ಮುಂಚೆ ಲೇಪಿಸಿಕೊಂಡರೆ ಕೂದಲು ದಟ್ಟವಾಗಿ ಮತ್ತು ಕಾಂತಿಯುತವಾಗಿ ಕಾಣುತ್ತವೆ.

ಸೇಬುಹಣ್ಣು ತಿಂದು ಸಿಪ್ಪೆ ಎಸಿಯುವ ಮುನ್ನ ಆ ಸಿಪ್ಪೆಯಿಂದ ಮುಖಕ್ಕೆ ನಯವಾಗಿ ಉಜ್ಜಿಕೊಂಡರೆ ಜಿಡ್ಡಿನ ಅಂಶ ಹೋಗಿ ಮುಖ ಹೊಳೆಯುತ್ತದೆ ಮತ್ತು ಜಿಡ್ಡನ್ನು ತಡೆಗಟ್ಟಬಹುದು.

ಬಾಯಿಹುಣ್ಣು ಅಂತ ಅವು ಇವು ಮಾತ್ರೆ ತೆಗೆದುಕೊಳ್ಳುವ ಬದಲು ಜಾಜಿಕಾಯಿಯನ್ನು ನೀರಿನಲ್ಲಿ ತೇಯ್ದು (ಅರ್ಧ ಚಮಚದಷ್ಟು) ಅರ್ಧ ಲೋಟ ನೀರಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ಕಡಿಮೆ ಆಗುತ್ತದೆ.

ನಿಮ್ಮ ಆಹಾರದಲ್ಲಿ ಎಲೆಕೋಸಿನ ನಿಯಮಿತ ಬಳಕೆಯಿಂದ ಒಸಡಿನಲ್ಲಿ ಆಗುವ ರಕ್ತಸ್ರಾವವನ್ನು ತಡೆಗಟ್ಟಬಹುದು.

ಕಾಮಾಲಿ ರೋಗಿಗಳು ದಿನಕ್ಕೆ ಎರಡು ಬಾರಿ ಮೂಲಂಗಿ ಎಲೆಯ ರಸ ಸೇವಿಸುವುದರಿಂದ ಶೀಘ್ರ್ ಗುಣಮುಖರಾಗುತ್ತಾರೆ.

ಒಂದು ವೇಳೆ ಜಾಂಡಿಸ್ ಆದಲ್ಲಿ ಹಿರೇಕಾಯಿಯ ನಿಯಮಿತ ಸೇವನೆಯಿಂದ ಜಾಂಡಿಸ್ ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಾರೆ.

“ಮನೆಯೇ ಮೊದಲ ಆಸ್ಪತ್ರೆ” ಮನೆಯ ಮದ್ದುಗಳನ್ನು ಬಳಸಿ ಆದಷ್ಟು ಇಂಗ್ಲಿಷ್ ಮಾತ್ರೆಗಳಿಂದ ದೂರವಿರಿ.

LEAVE A REPLY

Please enter your comment!
Please enter your name here