ಕೆಲವರಿಗೆ ಹೆಚ್ಚಾಗಿ ತಿಂದರು ತೂಕ ಹೆಚ್ಚಾಗಬಾರದು ಎನ್ನುವ ಅಸೆ ಹೊಂದಿರುತ್ತಾರೆ, ಇನ್ನು ಕೆಲವರು ನಾವು ಹೆಚ್ಚಾಗಿ ತಿನ್ನುವುದಿಲ್ಲ ಆದರೂ ದಪ್ಪ ಆಗತಾನೆ ಇದೀನಿ ಅಂತಾ ಬೇಸರಪಡುವ ಜನರು ಇದ್ದಾರೆ. ತೂಕ ಕಡಿಮೆಗೊಳಿಸಬೇಕಾದರೆ ಸ್ವಲ್ಪ ಡಯಟ್ ಮಾಡಲೇಬೇಕು ಅಂದರೆ ಆಚೆ ಕಡೆಯ ಆಹಾರ ತಿನಿಸಿಗಳು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇವೆನ್ನೆಲ್ಲ ತಿನ್ನೋದು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು ನಮ್ಮ ದೇಹಕ್ಕೆ ಎಷ್ಟ್ಟುಆಹಾರದ ಅಗತ್ಯವಿದೆಯೂ ಅಷ್ಟನ್ನು ಮಾತ್ರ ಸೇವಿಸಬೇಕು ಅಗತ್ಯಕ್ಕಿಂತ ಹೆಚ್ಚಾದರೆ ದೇಹದಲ್ಲಿ ಬೇಡದಿರುವ ಕೊಬ್ಬು ಮತ್ತು ತೂಕ ಏರುವುದು ಸಾಮಾನ್ಯ ಆದರೆ ನಮ್ಮ ದೇಹವು ಎಷ್ಟ್ಟುಅವಶ್ಯ ಇದೆಯೂ ಅಷ್ಟನ್ನು ಮಾತ್ರ ಅದು ಸ್ವೀಕರಿಸುತ್ತದೆ ಮಿಕ್ಕಿದು ಮಲ ಮೂತ್ರ ವಿಸರ್ಜನೆಯಲ್ಲಿ ಆಚೆ ಹೋಗುತ್ತದೆ. ಆದರೆ ನಮಗೆ ತಿನ್ನೋದು ಇಷ್ಟ ಆದರೆ ತೂಕ ಮಾತ್ರ ಹೆಚ್ಚಾಗಿ ಆಗಬಾರದು ಅಂತ ಬಯಸುವುರು ಈ ಕೆಳಗೆ ಹೇಳುವ ಜ್ಯೂಸ್ ನಿತ್ಯವು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಕ್ಯಾರೆಟ್ ಜ್ಯೂಸ್

ಯಾವದೇ ತರಕಾರಿ ಇರಲಿ ಅದನ್ನು ಬೇಯಿಸದೆ ಹಾಗೆ ತಿನ್ನುವುದು ಒಳ್ಳೆಯದು ಇದರಿಂದ ದೇಹಕ್ಕೆ ಬೇಕಾಗಿರುವ ವಿಟಮಿನ್ಸ್ ಪೋಷ್ಟಿಕಾಂಶಗಳು ದೊರೆಯುತ್ತವೆ. ಡಯಟ್ ಮಾಡುವವರು ನಿತ್ಯವೂ ಕ್ಯಾರೆಟ್ ಜ್ಯೂಸ್ ಅನ್ನು ಸೇವಿಸಿದರೆ ತೂಕ ಕಡಿಮೆ ಆಗುತ್ತಾ ಬರುತ್ತದೆ. ನಾವೇನು ಡಯಟ್ ಮಾಡಲ್ಲ ಆದರೂ ತೂಕ ಇಳಿಬೇಕು ಅಂತ ಬಯಸುವರು ಕ್ಯಾರೆಟ್ ಜ್ಯೂಸ್ ಅನ್ನು ನಿತ್ಯವು ಸೇವಿಸಬೇಕು ಇದರಿಂದ ತೂಕ ಕಡಿಮೆ ಆಗುತ್ತಾ ಬರುತ್ತದೆ. ಕ್ಯಾರೆಟ್ ನಲ್ಲಿ ಸಾಕಷ್ಟ್ಟು ಪ್ರಮಾಣದ ಪೊಟ್ಯಾಶಿಯಂ ಇರುವ ಕಾರಣ ಇದು ದೇಹದ ತೂಕವನ್ನು ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ಬೀಟ್ ರೂಟ್ ಜ್ಯೂಸ್

ಬೀಟ್ರೂಟ್ ಅನ್ನು ತುರಿದು ಅದಕ್ಕೆ ಸ್ವಲ್ಪ ಉಪ್ಪು ಮೊಸರು ಹಾಕಿ ಕೊಂಡು ತಿನ್ನಬಹುದು ಇಲ್ಲದೆ ಹೋದಲ್ಲಿ ಕೋಸಂಬರಿ ತರ ಮಾಡಿಕೊಂಡು ತಿನ್ನಬಹುದು ಇದು ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೆ ಇದು ದೇಹದಲ್ಲಿರುವ ಬೇಡದಿರುವ ಕೊಬ್ಬನ್ನು ಕಡಿಮೆಗೊಳಿಸುತ್ತದೆ, ಮತ್ತು ಮೆಟಬಾಲಿಸಂ ಅನ್ನು ಹೆಚ್ಚಾಗಿ ಮಾಡುತ್ತದೆ. ಬಿಟ್ ರೂಟ್ ನಲ್ಲಿ ನೈಟ್ರೇಟ್ ಎಂಬ ಅಂಶವು ನೀವು ಬೀಟ್ ರೂಟ್ ಸೇವಿಸಿದಾಗ ಅದು ದೇಹದಲ್ಲಿ ನೈಟ್ರಿಕ್ ಆಗಿ ಬದಲಾಗುತ್ತದೆ ಇದರಿಂದ ದೇಹವು ತೂಕ ಕಡಿಮೆ ಆಗುತ್ತದೆ ಅದರಿಂದ ನಿತ್ಯವು ಬೀಟ್ ರೂಟ್ ಜ್ಯೂಸ್ ಸೇವನೆಯ ಅಭ್ಯಾಸ ರೂಡಿಸಿಕೊಳ್ಳಿ ಇಲ್ಲದೆ ಹೋದಲ್ಲಿ ಹಸಿ ತರಕಾರಿಯನ್ನೇ ತಿನ್ನಲು ರೂಡಿಸಿಕೊಳ್ಳಿ. ಇದನ್ನ ಹೆಚ್ಚಾಗಿ ತಿನ್ನುವುದರಿಂದ ದೇಹಕ್ಕೆ ಶಕ್ತಿ ಮತ್ತು ಸಂಧಿಗಳ ನೋವು ಹೆಚ್ಚಾಗಿ ಕಾಣುವುದಿಲ್ಲ. ಮಧುಮೇಹಿಗಳು ಕೂಡ ಇದನ್ನು ತಿನ್ನಬಹುದು ಇದರಲ್ಲಿ ಕಬ್ಬಿನಾಂಶ ಹೆಚ್ಚಾಗಿ ಇರುತ್ತದೆ. ಮಕ್ಕಳಿಗೆ ಇದನ್ನು ಹೆಚ್ಚಾಗಿ ಕೊಡಬೇಕು ಇದರಿಂದ ಅವರ ಬೆಳವಣಿಗೆ ಚೆನ್ನಾಗಿ ಆಗುವುದರ ಜೊತೆಗೆ ದೇಹಕ್ಕೆ ಶಕ್ತಿ ಕೂಡ ಬರುತ್ತದೆ.

ನೆಲ್ಲಿಕಾಯಿ ಜ್ಯೂಸ್

ನೆಲ್ಲೆಕಾಯಿ ರಸವು ದೇಹದ ತೂಕ ಕಡಿಮೆಗೊಳಿಸುವಲ್ಲಿ ತುಂಬಾನೇ ಮುಖ್ಯ ಪಾತ್ರವಹಿಸುತ್ತದೆ. ಚಿಕ್ಕ ನೆಲ್ಲಿಕಾಯಿ ಅಲ್ಲ ದೊಡ್ಡ ನೆಲ್ಲಿಕಾಯಿ ಅಥವಾ ಬೆಟ್ಟದ ನೆಲ್ಲಿಕಾಯಿ ಅದನ್ನು ಉಪಯೋಗಿಸಬೇಕು. ಮೊದಲಿಗೆ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆಯಬೇಕು ನಂತರ ಅದನ್ನು ಎರಡು ಭಾಗಗಳಿಗೆ ಕತ್ತರಿಸಬೇಕು ಅದರಲ್ಲಿರುವ ಬೀಜಗಳನ್ನು ತೆಗೆಯಬೇಕು, ನಂತರ ಮಿಕ್ಸಿ ಜಾರಿಗೆ ಹೆಚ್ಚಿರುವ ನೆಲ್ಲಿಕಾಯಿ ಮತ್ತು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು, ರುಬ್ಬಿಕೊಂಡಿರುವ ಮಿಶ್ರಣವನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಅದರ ರಸವನ್ನು ಚೆನ್ನಾಗಿ ಹಿಂಡಿ ಕೊಳ್ಳಬೇಕು, ನಿಮಗೆ ಒಂದು ಕಪ್ ಗಿಂತ ಹೆಚ್ಚಾಗಿ ಎನಿಸಿದರೆ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಹುದು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟದಷ್ಟು ನೆಲ್ಲಿಕಾಯಿ ರಸ ಅದಕ್ಕೆ 3 ರಷ್ಟು ನೀರನ್ನು ಸೇರಿಸಿ ಕುಡಿಯಬೇಕು ಸಕ್ಕರೆ ಮತ್ತು ಜೇನನ್ನು ಸೇರಿಸದೆ ಕುಡಿಯಬೇಕು ಹೀಗೆ ನಿತ್ಯವೂ ಮಾಡಿದರೆ ತೂಕ ಕಡಿಮೆಯುಗುವುದರ ಜೊತೆಗೆ ದೇಹದಲ್ಲಿ ಬೇಡದಿರುವ ಕೊಬ್ಬು ಕೂಡ ಕಡಿಮೆಯಾಗುತ್ತ ಬರುತ್ತದೆ.

ಮೂಸಂಬಿ ಜ್ಯೂಸ್

ದೇಹದ ತೂಕ ವಿಳಿಸುವ ನಿಟ್ಟಿನಲ್ಲಿ ಮೂಸಂಬಿ ಜ್ಯೂಸ್ ತುಂಬಾನೇ ಸಹಕಾರಿ ಇದಕ್ಕೆ ಕಾರಣ ಇದರಲ್ಲಿರುವ ಸಿಟ್ರಿಕ್ ಆಮ್ಲ ಇದು ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಆಚೆ ಹಾಕಿ ದೇಹಕ್ಕೆ ಬೇಕಾಗಿರುವ ಒಳ್ಳೆಯ ಕೊಬ್ಬನ್ನು ನೀಡುತ್ತದೆ. ಬೇರೆ ಹಣ್ಣಿನ ಜ್ಯೂಸ್ ಕುಡಿಯುವ ಬದಲು ಮೂಸಂಬಿ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸ ರೂಡಿಸಿಕೊಳ್ಳಿ ಇದರಿಂದ ದೇಹದ ತೂಕ ಕಡಿಮೆ ಆಗುತ್ತಾ ಬರುತ್ತದೆ. ಅಷ್ಟೇ ಅಲ್ಲದೆ ಇದು ದೇಹದ ಮೇಲೆ ಬೇಗ ಪರಿಣಾಮ ಬೀರುತ್ತದೆ. ಇದನ್ನ ಮನೆಯಲ್ಲಿ ಮಾಡಿಕೊಂಡು ಕುಡಿಯಬಹುದು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಮೂಸಂಬಿ ರಸವನ್ನು ಹಾಕಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು ಸಾಧ್ಯವಾದಷ್ಟು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ ಇದರಿಂದ ನೀವು ಉತ್ತಮ ಫಲಿತಾಂಶ ಕಂಡುಕೊಳ್ಳುವಿರಿ. ಇದೆ ತರ ರಾತ್ರಿ ಮಲಗುವ ಮುನ್ನ ಇನ್ನೊಂದು ಲೋಟ ಕುಡಿಯುವುದರಿಂದ ದೇಹವು ಬೇಗನೆ ಅನಗತ್ಯವಿರುವ ತೂಕವನ್ನು ಕಡಿಮೆ ಗೊಳ್ಳಿಸುತ್ತದೆ.

ಪಾಲಕ್ ಜ್ಯೂಸ್

ಪಾಲಕ್ ಜ್ಯೂಸ್ ಅನ್ನು ಹೆಚ್ಚಾಗಿ ಸೇವಿಸಬೇಕುಇದರಲ್ಲಿರುವ ಕಬ್ಬಿಣ ಅಂಶ, ಮೆಗ್ನಿಶಿಯಂ, ಮತ್ತು ವಿಟಮಿನಗಳು ಹೆಚ್ಚಾಗಿ ಇರುವುದರಿಂದ ಇವು ತೂಕವನ್ನು ಕಡಿಮೆ ಗೊಳಿಸಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೆ ದೇಹದಲ್ಲಿ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ. ಪಾಲಕ್ ಸೊಪ್ಪನ್ನು ಹೆಚ್ಚಾಗಿ ಮಕ್ಕಳಿಗೆ ಕೊಡಬೇಕು ಒಂದು ವರ್ಷದ ಮಕ್ಕಳಿಗೆ ಇದನ್ನು ಹೆಚ್ಚಾಗಿ ತಿನ್ನಿಸಬೇಕು ಇದರಿಂದ ಅವರ ದೇಹಕ್ಕೆ ಬೇಕಾಗಿರುವ ವಿಟಮಿನ್ಗಳು ದೊರೆಯುತ್ತವೆ.ಒಂದು ಲೋಟ ಬಿಸಿನೀರಿಗೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಹಾಕಿಕೊಂಡು ಕುಡಿದರೆ ತೂಕ ಬೇಗ ಕಡಿಮೆ ಆಗುತ್ತದೆ. ಇದರ ಜೊತೆಗೆ ನಿತ್ಯವು ಸ್ವಲ್ಪ ಹೊತ್ತು ವಾಕಿಂಗ್ ಜಾಗಿಂಗ್ ಅನ್ನು ಮಾಡುವು ಉತ್ತಮ.

LEAVE A REPLY

Please enter your comment!
Please enter your name here