ಬೇಸಿಗೆಯ ಕಾಲದಲ್ಲಿ ಹೆಚ್ಚಾಗ್ಗಿ ನೀರಿನ ಅಂಶ ಇರುವ ಪಧಾರ್ಥಗಳು ಹೆಚ್ಚಾಗಿ ಸೇವಿಸುತ್ತೇವೆ, ಸಾಧ್ಯವಾದಷ್ಟು ಮನೆಯಲ್ಲೆ ಜ್ಯೂಸಗಳನ್ನು ತಯಾರಿಸಿಕೊಂಡು ಕುಡಿಯುವುದು ಉತ್ತಮ ಇದರಿಂದ ಹೊರಗಿನ ಧೂಳು ಹೊಟ್ಟೆಗೆ ಸೇರಿವುದಿಲ್ಲ, ಇದರಿಂದ ದೇಹಕ್ಕೆ ಯಾವದೇ ಹಾನಿಉಂಟಾಗುವುದಿಲ್ಲ ಎಲ್ಲ ಹಣ್ಣುಗಳು ಸೇರಿಸಿ ಅದರ ರಸವನ್ನು ಸೇವಿಸುವುದು ಮತ್ತೆ ಸೀಸನ್ಗೆ ತಕ್ಕಂತ್ತೆ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಕುಡಿಯಬಹುದು ಯಾವ ಸಾಮಾನ್ಯವಾಗಿ ನಾವು ಕಲಗಂಡಿ, ಕರ್ಭುಜ, ಸೇಬು,ಕಿತ್ತಳೆ, ಈ ತರಹದ ಜ್ಯೂಸ್ ಟೆಸ್ಟ್ ಮಾಡಿರ್ತೀರ ಆದರೆ ನಾವು ಇಲ್ಲಿ ಹೇಳುವ ಜ್ಯೂಸ್ ಮಾಡಿ ನೋಡಿ…

ಎಳೆನೀರಿನ ಶರಬತ್ತು/ ಬೋಂಡಾ ಶರಬತ್ತು 

ಬೇಕಾಗಿರುವ ಸಾಮಗ್ರಿಗಳು

ತೆಳು ಗಂಜಿ ಇರುವ ಎಳೆನಿರು, ಸಕ್ಕರೆ, ಶುಂಠಿ.

ಮಾಡುವ ವಿಧಾನ

ಎಳೆನೀರಿನಲ್ಲಿರುವ ತೆಳುವಾದ ಗಂಜಿ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಬೇಕು,ನಂತರ ಶುಂಠಿಯನ್ನ ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು,ರುಬ್ಬಿರುವ ಶುಂಠಿ ಪೇಸ್ಟ್ ಅನ್ನು ಎಳೆನೀರಿಗೆ ಹಾಕಿ ಮತ್ತು ಸಕ್ಕರೆ ಹಾಕಿದರೆ ಬೋಂಡಾ ಶರಬತ್ತು ಅಥವಾ ಎಳೆನೀರಿನ ಶರಬತ್ತು ಬಾಯಿಗೂ ರುಚಿ ದೇಹಕ್ಕೂ ಶಕ್ತಿ.

ಗೇರು ಹಣ್ಣಿನ ಜ್ಯೂಸ್

ಬೇಕಾಗಿರುವ ಸಾಮಗ್ರಿಗಳು

ಗೇರು ಹಣ್ಣು,ಸಕ್ಕರೆ,ಉಪ್ಪು,ಕಾಳುಮೆಣಸಿನ ಪುಡಿ,ನೀರು

,ತಯಾರಿಸುವ ವಿಧಾನ

ಒಂದು ಪಾತ್ರೆಗೆ ನೀರು ಮತ್ತೆ ಸಕ್ಕರೆ ಹಾಕಿ ಹದವಾದ ಮಿಶ್ರಣ ಮಾಡಿಕೊಳ್ಳಬೇಕು, ಸಾಧ್ಯವಾದಷ್ಟು ಗೇರು ಹಣ್ಣಿನ ರಸ ಕೈಯಿಂದ ಹಿಂಡಿ ತೆಗೆದುಕೊಳ್ಳಬೇಕು ಈ ತರಹ ಮಾಡಿಕೊಳ್ಳುವುದು ಆಗದೆ ಹೋದ್ರೆ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಕೊಳ್ಳಬೇಕು ಅದಕ್ಕೆ ಒಂದು ಚೀಟಿಗೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಹಾಕಿದರೆ ಗೇರು ಹಣ್ಣಿನ ಜ್ಯೂಸ್ ಕುಡಿಯಲು ರೆಡಿ.

ಕಾಮಕಸ್ತೂರಿ ಬೀಜದ ಪಾನೀಯ

ಬೇಕಾಗಿರುವ ಪದಾರ್ಥಗಳು

ಕಾಮಕಸ್ತೂರಿ ಬೀಜ, ನಿಂಬೆಹಣ್ಣು,ಸಕ್ಕರೆ,ಉಪ್ಪು,ನೀರ

 ಮಾಡುವ ವಿಧಾನ

ನಿಂಬೆ ಹಣ್ಣನ್ನು ಸಿಪ್ಪೆ ತೆಗೆದು ಮಿಕ್ಸಿ ಮಾಡಿಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ನೀರು ಸಕ್ಕರೆ ಸಮ ಪ್ರಮಾಣದಲ್ಲಿ ಹಾಕಿ ಹದ ಮಾಡಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಕಾಮಕಸ್ತೂರಿ ಬೀಜ ನೆನಿಸಿ ಕೊಳ್ಳಬೇಕು, ನೀರು, ನಿಂಬೆಹಣ್ಣು ಮತ್ತು ನೇನಿಸಿ ಇಟ್ಟಿರುವ ಕಾಮಕಸ್ತೂರಿ ಬೀಜ ಮಿಶ್ರಣ ಮಾಡಿಕೊಳ್ಳಬೇಕು ಮಾಡಿರುವ ಮಿಶ್ರಣಕ್ಕೆ ಚೀಟಿಗೆ ಉಪ್ಪು ಹಾಕಬೇಕು ನಂತರ ಅಂಸೋಲ್ ಅಥವಾ ಪುನ್ನಾರ್ ಪುಳಿಯನ್ನು ಸೇರಿಸಿದರೆ ಕಾಮಕಸ್ತೂರಿ ಬೀಜದ ಜ್ಯೂಸ್ ಕುಡಿಯಲು ಸಿದ್ಧ.

LEAVE A REPLY

Please enter your comment!
Please enter your name here