ಸಾಮಾನ್ಯವಾಗಿ ಮೆಂತ್ಯೆ ಕಾಳನ್ನು ಯಾರು ಹೆಚಾಗ್ಗಿ ಇಷ್ಟಪಡುವುದಿಲ್ಲ ಕಾರಣ ಇದರಲ್ಲಿರುವ ಕಹಿ ಅಂಶ. ಆದರೆ ಇದನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ, ನೀವು ಇದನ್ನ ಎರಡು ರೀತಿಯಲ್ಲಿ ಉಪಯೋಗಿಸಬಹುದು ಇದರ ಸೊಪ್ಪು ಅನ್ನು ಬಳಸಿ ಹಲವಾರು ರೀತಿಯ ರುಚಿಯಾದ ಖಾದ್ಯಗಳನ್ನು ಮಾಡಿ ಸವಿಯಬಹುದು. ನಂತರ ಕಾಳಿನ ರೂಪದಲ್ಲಿ ನಾವು ನಿತ್ಯದಲ್ಲೂ ನಾವು ಅಡುಗೆಯಲ್ಲಿ ಬಳಸುತ್ತೇವೆ, ಬೆಳೆ ಬೇಯಿಸಬೇಕಾದರೆ ಒಂದುರೆಡು ಕಾಳು ಹಾಕಿ ಬೇಯಿಸಿದರೆ ಚೆನ್ನಾಗಿ ಬೇಯುವುದರ ಜೊತೆಗೆ ಒಳ್ಳೆಯ ಘಮ ನೀಡುತ್ತದೆ. ಅಡುಗೆ ಮನೆಯ ಸಾಂಬಾರ ಡಬ್ಬದಲ್ಲಿ ಇದು ಇದ್ದೆ ಇರುತ್ತದೆ. ದೋಸೆಗೆ ಅಕ್ಕಿ ಹಾಕುವಾಗ ಅದರ ಜೊತೆಗೆ ಒಂದು ಹತ್ತು ಕಾಳಷ್ಟು ಮೆಂತ್ಯೆ ಅನ್ನು ಹಾಕಿದರೆ ದೋಸೆಯ ರುಚಿ ಹೆಚ್ಚುತ್ತದೆ. ಇನ್ನ ಮೆಂತ್ಯೆ ಕಾಳನ್ನು ನೆನೆ ಹಾಕಿ ಮೊಳಕೆ ಬರಸಿ ಸಾಂಬಾರ ಅಥವಾ ಉಸಲಿ ಮಾಡಿಕೊಂಡು ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಇಷ್ಟೇ ಅಲ್ಲದೆ ಇನ್ನು ಇದರಿಂದ ಏನೇನು ಉಪಯೋಗಗಳಿವೆ ಅಂತ ಈ ಕೆಳಗೆ ಓದಿ…

ತೂಕ ಕಡಿಮೆ ಮಾಡಬೇಕೆನ್ನುವುರು ಮೆಂತ್ಯೆಯನ್ನು ಹೆಚ್ಚಾಗಿ ಬಳಸಿ ನಿಮ್ಮ ಊಟದಲ್ಲಿ ಮೆಂತ್ಯೆ ಕಾಳಿನ ಉಪಯೋಗ ಹೆಚ್ಚಾಗಿ ಇರುವಂತೆ ನಿಗಾವಹಿಸಿ. ರಾತ್ರಿ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನಿಸ ಬೇಕು, ಬೆಳೆಗ್ಗೆ ಎದ್ದ ತಕ್ಷಣ ನೆನಸಿರುವ ಕಾಳನ್ನು ಚೆನ್ನಾಗಿ ಅಗಿದು ತಿನ್ನಬೇಕು ಇದರಿಂದ ಹೊಟ್ಟೆ ಹಸಿವು ಬೇಗ ಆಗುವುದಿಲ್ಲ ಇದರಿಂದ ದೇಹದ ತೂಕ ಸಮತೋಲನೆಗೆ ಬರುವಂತ್ತೆ ನೋಡಿಕೊಳ್ಳುತ್ತದೆ. ಇದನ್ನ ಮಧುಮೇಹಿಗಳು ಕೂಡ ಬಳಸಬಹುದು.

ಕೆಮ್ಮು, ನೆಗಡಿ, ಶೀತ, ಜ್ವರ, ಗಂಟಲ ಬೇನೆ, ಸುಸ್ತು ಇಂತಹ ಕಾಯಿಲೆಗಳು ಬಂದಾಗ ಒಂದು ಚಮಚ ಲಿಂಬೆ ರಸ ಮತ್ತು ಸ್ವಲ್ಪ ಜೇನು ತುಪ್ಪ ಅದರ ಜೊತೆಗೆ ಸ್ವಲ ಮೆಂತ್ಯೆ ಕಾಳುಗಳನ್ನು ಬೆರಸಿ ತಿನ್ನುವುದರಿಂದ ಕೆಮ್ಮು ಮತ್ತು ಮೇಲೆ ಹೇಳಿದ ಖಾಯಿಲೆಗಳಿಂದ ಬೇಗ ಆರಾಮ್ ಹೊಂದಬಹುದು. ಇದನ್ನು ನಿತ್ಯದಲ್ಲೂ ಕೊಂಚ ಸೇವಿಸುವುದರಿಂದ ದೇಹಕ್ಕೆ ಸುಸ್ತು ಆಗದಂತ್ತೆ ನೋಡಿಕೊಳ್ಳುತ್ತದೆ.

ಮುಖದಲ್ಲಿ ಹೆಚ್ಚಾಗಿ ಬ್ಲಾಕ್ ಹೆಡ್ಸ್, ಮೊಡವೆ, ನೆರಿಗೆಗಳು ಹೆಚ್ಚಾಗಿ ಕಂಡು ಬಂದರೆ ಮೆಂತ್ಯೆ ಕಾಳಿಂದ ಮುಕ್ತಿ ಪಡೆಯಬಹುದು, ಮೆಂತ್ಯೆ ಕಾಳನ್ನು ಮೊದಲು ನೆನಿಯಿಡಬೇಕು, ಕಾಳುಗಳು ನೆನದ ನಂತರ ಅದನ್ನು ಕುದಿಸಲು ಹಾಕಬೇಕು ಕಾಳುಗಳು ಚೆನ್ನಾಗಿ ಕುದಿಯಬೇಕು, ನಂತರ ಇದನ್ನು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು, ನಂತರ ರುಬ್ಬಿದ ಮಿಶ್ರಣವನ್ನು ಮುಖಕ್ಕೆ ದಪ್ಪನಾಗಿ ಹಚ್ಚಿಕೊಂಡು ೨೦ ರಿಂದ ೩೦ ನಿಮಿಷ ಆರಲು ಬಿಡಬೇಕು ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು.

ಮಲಬದ್ದತೆ ಹೆಚ್ಚಾಗಿ ಆಗಿದ್ದಲ್ಲಿ ಮೆಂತ್ಯೆ ಅನ್ನು ನೆನಿಸಿ ಅದನ್ನ ಬೆಳಿಗ್ಗೆ ಎದ್ದು ಚೆನ್ನಾಗಿ ಕುದಿಸಬೇಕು, ಕುದ್ದ ಮೇಲೆ ಬೆಳಿಗಿನ ಟೀ ಅಥವಾ ಕಾಫಿ ಕುಡಿಯುವ ಮೊದಲು ಈ ನೀರನ್ನು ಕುಡಿಯಬೇಕು ಇದರಿಂದ ಮಲಬದ್ದತೆ ನಿಯಂತ್ರಣಕ್ಕೆ ಬರುತ್ತದೆ. ಅಜೀರ್ಣ ಮತ್ತು ಹೊಟ್ಟೆನೋವಿನಿಂದ ಬಳಲುವುರು ಮೆಂತ್ಯೆ ಕಾಳನ್ನು ನೆನಿಸಿ ಅದರಿಂದ ಟೀ ಮಾಡಿಕೊಂಡು ಕುಡಿದರೆ ಅದರಿಂದ ಹೊಟ್ಟೆನೋವು ಮತ್ತು ಅಜೀರ್ಣ ಸಮಸ್ಯೆ ದೂರವಾಗುತ್ತದೆ.

ಕೂದಲು ಸೊಂಪಾಗಿ ಬೆಳೆಯ ಬೇಕು ಅಂತ ಬಯಸುವುದಾದರೆ ಮೆಂತ್ಯೆ ಕಾಳಿನ ಉಪಯೋಗ ಪಡೆಯಬಹುದು. ರಾತ್ರಿ ನೀರಿನಲ್ಲಿ ಮೆಂತ್ಯೆ ಕಾಳನ್ನು ನೆನಿಸಿಕೊಳ್ಳಬೇಕು ಅದನ್ನು ಬೆಳಿಗ್ಗೆಯೆದ್ದು ನುಣ್ಣಗೆ ರುಬ್ಬಿಕೊಳ್ಳಬೇಕು, ನಂತರ ಅದನ್ನ ಕೂದಲಿಗೆ ನೀಟಾಗಿ ಹಚ್ಚಿಕೊಂಡು ಅರ್ಧ ತಾಸು ಅಥವಾ ಒಂದು ತಾಸು ಬಿಟ್ಟು ತಲೆ ತೊಳಿದುಕೊಳ್ಳಬೇಕು ಇದರಿಂದ ಕೂದಲು ಸೊಂಪಾಗಿ ಬೆಳೆಯುವುದರ ಜೊತೆಗೆ ಉದುರುವುದು ಕಡಿಮೆ ಆಗುತ್ತದೆ.

ಮೆಂತ್ಯೆ ಕಾಳನ್ನು ನೆನಿಸಿ ಅದನ್ನು ಮೊಳಕೆ ಬರಸಿ ಅದರಿಂದ ಉಸಲಿ ಮಾಡಿಕೊಂಡು ತಿಂದರೆ ಎದೆ ಹಾಲು ಕುಡಿಸುವ ತಾಯಿಂದರಿಗೆ ಇದು ತುಂಬಾ ಒಳ್ಳೆಯದು ಇದರಿಂದ ಮಗುವಿಗೆ ಹಾಲಿನ ಸಮಸ್ಯೆ ಆಗುವುದಿಲ್ಲ. ಹಾಗೆ ಮೆಂತ್ಯೆ ಚಟ್ನಿ ಮತ್ತು ಮೆಂತ್ಯೆ ದೋಸೆಯನ್ನು ಮಾಡಿ ಕೊಡಬಹುದು ಈ ತರಹದ ಆಹಾರ ಬಾಣಂತಿಯರಿಗೆ ಕೊಡುವುದು ಉತ್ತಮ ಇದರಿಂದ ಅವರಿಗೆ ಜೀರ್ಣ ಕ್ರಿಯೆಯು ಹೆಚ್ಚಾಗುವುದರ ಜೊತೆಗೆ ಹಾಲಿನ ಸಮಸ್ಯೆ ಹೆಚಾಗ್ಗಿ ಕಾಡುವುದಿಲ್ಲ.

ಮೆಂತ್ಯೆ ಕಾಳನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ದೇಹದಲ್ಲಿ ಬೇಡದಿರುವ ಕೊಬ್ಬು ನಿಯಂತ್ರಣಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು, ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು ಇದು ಹೃದ್ಯಘಾತವನ್ನು ತಪ್ಪಿಸುತ್ತದೆ, ಇಷ್ಟೇ ಅಲ್ಲದೆ ಇದು ಸೋಡಿಯಂನ್ನು ಹೊಂದಿರುವ ಕಾರಣ ಇದು ಹೃದಯ ಮತ್ತು ರಕ್ತದೊತ್ತಡವನ್ನು ನಿಭಾಯಿಸುತ್ತದೆ.

1 COMMENT

LEAVE A REPLY

Please enter your comment!
Please enter your name here