ಸುಮಾರು ಜನರಿಗೆ ಕಾಮಕಸ್ತೂರಿ ಎಂದರೇನು ಎಂಬುವುದೇ ತಿಳಿದಿರುವುದಿಲ್ಲ ಆದರೆ ಇದು ದೇಹಕ್ಕೆ ತುಂಬಾ ತಂಪು. ಇದರ ಬೀಜಗಳನ್ನು ಅಡುಗೆಯಲ್ಲಿಯೂ ಸಹ ಬಳಸುತ್ತಾರೆ ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಕಾಮಕಸ್ತೂರಿಯನ್ನು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ಬೆಳೆಯುತ್ತಾರೆ ಹಾಗಾದರೆ ಏನು ಈ ಕಾಮಕಸ್ತೂರಿಯ ಕರಾಮತ್ತು ಅಂತೀರಾ ಇಲ್ಲಿ ಓದಿ…

ಉಷ್ಣ ಪ್ರಕೃತಿ ಉಳ್ಳವರು ಈ ಕಾಮ ಕಸ್ತೂರಿ ಬೀಜ ಗಳನ್ನು ನೀರಿನಲ್ಲಿ ಹಾಕಿಕೊಂಡು ಕುಡಿಯುವುದರಿಂದ ದೇಹ ತಂಪಾಗುತ್ತದೆ

ಅತಿಯಾದ ಶೀತ ಕೆಮ್ಮು ಆದಾಗ ಈ ಕಾಮಕಸ್ತೂರಿ ಬೀಜ ಮತ್ತು ಎಲೆಗಳನ್ನು ಬಳಸಿ ಕಷಾಯ ತಯಾರಿಸಿಕೊಂಡು ಜೇನುತುಪ್ಪದ ಜೊತೆ ಸೇವಿಸಿದರೆ ಕೆಮ್ಮು ಮತ್ತು ನೆಗಡಿ ಕಡಿಮೆಯಾಗುತ್ತದೆ

ಮೂಲವ್ಯಾಧಿ ಇಂದ ರಕ್ತಸ್ರಾವ ಆಗುತ್ತಿದ್ದರೆ ಕಾಮ ಕಸ್ತೂರಿ ಬೀಜ ಮತ್ತು ಎಲೆಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಆ ನೀರನ್ನು ಸಕ್ಕರೆ ಬೆರೆಸಿಕೊಂಡು ಸೇವಿಸಿದರೆ ಮೂಲವ್ಯಾಧಿಯಿಂದ ಆಗುವ ರಕ್ತ ಸ್ರಾವ ನಿಲ್ಲುತ್ತದೆ

ಅತಿಯಾದ ತೂಕವಿದ್ದು ತುಂಬಾ ಬೆವರು ಬಂದಾಗ ಕೆಟ್ಟ ವಾಸನೆ ಬರುತ್ತಿದ್ದರೆ ಪ್ರತಿನಿತ್ಯ ಕಾಮಕಸ್ತೂರಿ ಎಲೆಗಳನ್ನು ಮಿಕ್ಸಿ  ಮಾಡಿಕೊಂಡು ದೇಹಕ್ಕೆ ಲೇಪಿಸಿಕೊಂಡರೆ ಕೆಟ್ಟ ವಾಸನೆ ನಿವಾರಣೆ ಆಗುತ್ತದೆ

LEAVE A REPLY

Please enter your comment!
Please enter your name here