ಕೆಲವು ಜನರಿಗೆ ಶೂ ಅಥವಾ ಚಪ್ಪಲಿಗಳನ್ನು ಹೆಚ್ಚು ಕಾಲ ಹಾಕಿಕೊಂಡಾಗ ಕೆಟ್ಟ ವಾಸನೆ ಬರುವುದು ಸಹಜ ಅದರಿಂದ ಕೆಲವು ಬಾರಿ ಮುಜುಗರಕ್ಕೆ ಈಡಾಗುತ್ತಾರೆ ಹಾಗಾದ್ರೆ ಯಾವುದೇ ರಾಸಾಯನಿಕಗಳನ್ನು ಬಳಸದೇ ಈ ಸಿಂಪಲ್ ಟಿಪ್ಸ್ ಗಳನ್ನು ಬಳಸುವುದರಿಂದ ವಾಸನೆಯನ್ನು ತಪ್ಪಿಸಬಹುದು ಅವುಗಳು ಹೀಗಿವೆ.

ನೀಲಗಿರಿ ಎಣ್ಣೆ ಯಿಂದ ನಿಮ್ಮ ಪಾದಗಳನ್ನು ಮಸಾಜ್ ಮಾಡಿಕೊಳ್ಳುವುದರಿಂದ ವಾಸನೆ ಕಡಿಮೆಯಾಗಿ ಘಮಘಮ ವಾಸನೆ ಬರುತ್ತದೆ ನೀಲಗಿರಿ ಎಣ್ಣೆಯನ್ನು ಬಳಸುವುದರಿಂದ ಪಾದಗಳಿಗೂ ಸಹ ಯಾವುದೇ ಇನ್ಫೆಕ್ಷನ್ ಗಳು ಆಗುವುದಿಲ್ಲ

ನೀವು ಸದಾ ಕಾಲ ಧರಿಸುವ ಶೂ ಚಪ್ಪಲಿಗಳನ್ನು ಬಿಸಿ ನೀರಿನಲ್ಲಿ ಸ್ವಲ್ಪ ಅಡುಗೆ ಸೋಡಾ ಬೆರೆಸಿ ನೆನೆಯಿಟ್ಟು ತೊಳೆಯುವುದರಿಂದ ವಾಸನೆ ಬರುವುದು ತಪ್ಪುತ್ತದೆ

ನಿಮ್ಮ ಕಾಲುಗಳು ಸದಾ ಬೆವರುತ್ತಿದ್ದರೆ ಶೂ ಹಾಕಿಕೊಳ್ಳುವ ಮುನ್ನ ಟಾಲ್ಕಂ ಪೌಡರ್ ಅನ್ನು ಹಾಕಿ ನಂತರ ಶೂ ಅಥವಾ ಚಪ್ಪಲಿ ಹಾಕಿಕೊಳ್ಳಿ

ಸಾಕ್ಸ್ ಗಳನ್ನು ಆದಷ್ಟು ಎರಡು ದಿನಗಳಿಗೊಮ್ಮೆ ಬದಲಾಯಿಸಿ ಅವುಗಳನ್ನು ತೊಳೆಯುವಾಗ ಉಲ್ಟಾ ಮಾಡಿ ತೊಳೆಯಿರಿ ಇದರಿಂದ ಕೊಳೆಯಲ್ಲ ಸಂಪೂರ್ಣವಾಗಿ ಹೋಗಿ ಹಾಕಿಕೊಂಡಾಗ ವಾಸನೆ ಬರುವುದಿಲ್ಲ

LEAVE A REPLY

Please enter your comment!
Please enter your name here