ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಎಷ್ಟೇ ಬಿಸಿಲಿದ್ದರೂ ಪ್ರತಿದಿನ ಅವರವರ ಕೆಲಸಗಳನ್ನು ಅವರು ಮಾಡಲೇಬೇಕು ಹೀಗೆ ಕೆಲಸ ಮಾಡುತ್ತಾ ಬಿಸಿಲಿನಿಂದ ಸುಸ್ತು ಆಗೋದು ಸಾಮಾನ್ಯ ಸಂಗತಿ. ನಾವು ಕೆಲವೊಂದು ಆಹಾರ ಪದ್ಧತಿ ಅನ್ನು ಅನುಸರಿಸಿ ಬಿಸಿಲಿನಿಂದ ಆಗೋ ದಾಹ ನೀರಡಿಕೆ ಆಯಾಸಗಳಿಂದ ದೂರವಿರಬಹುದು.

ನಿಂಬೆ ಹಣ್ಣಿನ ಪಾನಕ ಕ್ಕೆ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸಿ ಕುಡಿಯುವುದರಿಂದ ಆಯಾಸವೂ ಬಹುಬೇಗನೇ ನಿವಾರಣೆಯಾಗುವುದು.

ಹಸಿ ಕ್ಯಾರೆಟ್ ಅನ್ನು ತುರಿದು ಉಪ್ಪು ನಿಂಬೆರಸ ಬೆರೆಸಿ ಸೇವಿಸುವುದರಿಂದ ದೇಹದ ಆಯಾಸ ನಿವಾರಣೆಯಾಗುವುದಲ್ಲದೆ ಚೈತನ್ಯದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ದೇಹದ ಆಯಾಸ ವನ್ನು ನಿವಾರಿಸಲು ಕಬ್ಬಿನ ರಸವನ್ನು ಸೇವಿಸುವುದು ಲಾಭದಾಯಕವಾಗಿದೆ.

ಟೊಮೆಟೊ ಹಣ್ಣಿನ ರಸಕ್ಕೆ ಸಕ್ಕರೆ ಬೆರೆಸಿ ಕುಡಿಯುವುದು ಅಥವಾ ಟೊಮೆಟೋ ಹಣ್ಣನ್ನು ತಿನ್ನುವುದರಿಂದಲೂ ದೇಹದ ಆಯಾಸ ಕಡಿಮೆಯಾಗಿ ಲವಲವಿಕೆಯಿಂದ ಇರಬಹುದು.

ನೇರಳೆ ಹಣ್ಣನ್ನು ಸೇವಿಸುವುದರಿಂದ ಆಯಾಸ ನೀರಡಿಕೆ ದಾಹವ ಕಡಿಮೆಯಾಗುತ್ತದೆ. ಕಲ್ಲಂಗಡಿ ಹಾಗೂ ಕರಬೂಜ ಹಣ್ಣಿನ ಪಾನಕ ಸೇವನೆ ಆಯಾಸ ಮತ್ತು ನೀರಡಿಕೆ ಉತ್ತಮವಾಗಿದೆ.

ಸೌತೆಕಾಯಿ ಕಲ್ಲಂಗಡಿ ನೇರಳೆ ಟೊಮೇಟೊ ಕರಬೂಜ ಈ ಹಣ್ಣುಗಳ ಸೇವನೆ ಖಂಡಿತವಾಗಲೂ ದೇಹ ದ ಮತ್ತು ಮನಸ್ಸಿನ ಚೈತನ್ಯಕ್ಕೆ ಲಾಭದಾಯಕ.

LEAVE A REPLY

Please enter your comment!
Please enter your name here