ಫೆಬ್ರುವರಿ ಮಧ್ಯದಲ್ಲೇ ಶುರುವಾದ ಬಿಸಿಲಿಗೆ ಉಸ್ಸ್ಸ್ ಎನ್ನುವ ಹಾಗೆ ಆಗಿಬಿಬಿಟ್ಟಿದೆ. ಎಷ್ಟೇ ತಂಪುಯಾಗಿರುವ ನೀರು, ಜ್ಯೂಸ್, ಐಸ್ ಕ್ರಿಮ್ ತಿಂದರು ಬಿಸಿಲಿನ ಧಗೆಯಿಂದ ದೇಹವು ಮಾತ್ರ ಸಹಜ ಸ್ಥಿತಿಗೆ ಮರಳುವುದು ಕಷ್ಟವೇ ಆಗಿಬಿಟ್ಟಿದೆ, ಆಚೆ ಕಡೆಯ ಜ್ಯೂಸ್, ಐಸ್ ಕ್ರಿಮ್ ಸೇವನೆ ದೇಹಕ್ಕೆ ಅಷ್ಟು ಒಳೆಯದಲ್ಲ ಆದಷ್ಟು ಮನೆಯಲ್ಲೇ ನಿಂಬೆ ಹಣ್ಣಿನ ಪಾನಕ ಅಥವಾ ಜ್ಯೂಸ್ ತಾಜಾ ಹಣ್ಣಿನ ರಸ ಮಾಡಿಕೊಂಡು ಕುಡಿಯುವುದು ಒಳ್ಳೆಯದು. ಇದರಿಂದ ಆಚೆ ಕಡೆಯ ಧೂಳು ಮತ್ತು ರೋಗ ಉಂಟು ಮಾಡುವ ವೈರಸ್ಗಳು ನಿಮ್ಮ ದೇಹವನ್ನು ಅನಾರೋಗ್ಯಕ್ಕೆ ತುತ್ತಾಗಬಹುದು. ಸಾಧ್ಯವಾದಷ್ಟು ಎಳೆನೀರಿನ ಸೇವನೆ ಹೆಚ್ಚಾಗಿ ಮಾಡಿ ಇದರಿಂದ ದೇಹಕ್ಕೆ ನೀರಿನಾಂಶ ಹೆಚ್ಚಾಗುತ್ತದೆ. ಇನ್ನ ತಂಪು ಪಾನೀಯಗಳು ಅಂದರೆ ನಮಗೆ ನೆನಪಾಗುವುದೇ ಮಜ್ಜಿಗೆ , ಎಳೆನೀರು. ಬೇಸಿಗೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮಜ್ಜಿಗೆಯನ್ನು ಹೆಚ್ಚಾಗಿ ಕುಡಿಯಿರಿ ಇದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ನೀವು ಸಿಂಪಲ್ ಆಗಿರುವ ಮಜ್ಜಿಗೆ ಕುಡಿಯುವ ಬದಲು ಮಸಾಲಾ ಮಜ್ಜಿಗೆ ಒಮ್ಮೆ ಕುಡಿದು ನೋಡಿ ಇದರ ರುಚಿ ಹೇಗಿರುತ್ತೆ ಗೊತ್ತ? ಹಾಗಾದರೆ ನಾವು ರೆಸಿಪಿ ಹೇಳ್ತಿವಿ ನೀವು ಒಮ್ಮೆ ಟ್ರೈ ಮಾಡಿ ರುಚಿ ಸವಿಯಿರಿ.

ಮಸಾಲಾ ಮಜ್ಜಿಗೆ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು

ನೀರು 1  ಕಪ್

ಗಟ್ಟಿ ಮೊಸರು 1  ಕಪ್

ಶುಂಠಿ ಸ್ವಲ್ಪ

ಜೀರಿಗೆ ಪುಡಿ 1/2  ಚಮಚ

ಕೊತ್ತಂಬರಿ ಸೊಪ್ಪು ಸ್ವಲ್ಪ

ಇಂಗು  1/4  ಚಮಚ

ನಿಂಬೆ ರಸ 1 ಟೀ ಚಮಚ

ಸ್ವಲ್ಪ ಪುದೀನಾ ಸೊಪ್ಪು

ತುಪ್ಪ 1/2  ಚಮಚ

ಕರಿಬೇವು 7 ರಿಂದ 8 ದಳ

ಹಸಿಮೆಣಸಿನಕಾಯಿ 1( ನಿಮ್ಮ ರುಚಿಗೆ ತಕ್ಕಂತೆ )

ರುಚಿಗೆ ತಕ್ಕಸ್ಟು ಉಪ್ಪು

ಮಾಡುವ ವಿಧಾನ

ಒಂದು ಮಿಕ್ಸಿ ಜಾರಿಗೆ ಚಿಕ್ಕದಾಗಿ ಹೆಚ್ಚಿಕೊಂಡಿರುವ ಹಸಿಮೆಣಸಿನಕಾಯಿ, ಮೊಸರು, ಜೀರಿಗೆ ಪುಡಿ, ಇಂಗು, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಶುಂಠಿ, ಉಪ್ಪು ಹಾಕಿಕೊಂಡು ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಗ್ಯಾಸ್ ಮೇಲೆ ಒಂದು ದಪ್ಪ ತಳದ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಬೇಕು ಅದು ಬಿಸಿ ಆದ ಮೇಲೆ ಅದರಲ್ಲಿ ಜೀರಿಗೆ ಮತ್ತು ಕರಿಬೇವಿನ ಎಲೆಯನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ರುಬ್ಬಿರುವ ಮಿಶ್ರಣವನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಬೇಕು, ನಂತರ ರುಬ್ಬಿರುವ ಮಿಶ್ರಣಕ್ಕೆ ನಿಂಬೆ ರಸ ಹಾಕಿ ಮತ್ತು ಒಂದು ಕಪ್ ಅಷ್ಟು ನೀರನ್ನು ಹಾಕಿ ಚೆನ್ನಾಗಿ ಕೈಯಾಡಿಸಬೇಕು ನಂತರ ಅದರ ಮೇಲೆ ಮಾಡಿರುವ ಒಗ್ಗರಣೆ ಹಾಕಬೇಕು ನಿಮಗೆ ಬೇಕು ಎನಿಸಿದರೆ ಐಸ್ ಕ್ಯೂಬ್ಸ್ ಹಾಕಿಕೊಳ್ಳಬಹದು ಇಲ್ಲವಾದಲ್ಲೇ ತಂಪಾಗಿರುವ ನೀರನ್ನು ಹಾಕಿಕೊಳ್ಳಬಹುದು. ಮಿಕ್ಸಿಯಲ್ಲಿ ಮಾಡಲು ಇಷ್ಟವಿಲ್ಲದವರು ಮೇಲೆಹೇಳಿರುವ ಸಾಮಗ್ರಿಗಳನ್ನು ಪಾತ್ರೆಗೆ ಹಾಕಿಕೊಂಡು ಮಾಡಿಕೊಳ್ಳಬಹುದು. ಹೀಗೆ ಮಾಡಿದರೆ ಮಸಾಲಾ ಮಜ್ಜಿಗೆ ಕುಡಿಯಲು ಸಿದ್ದ.

LEAVE A REPLY

Please enter your comment!
Please enter your name here