ಎಲ್ಲಾ ಋತುಮಾನಗಳಲ್ಲಿ ಸಿಗುವ ಸೌತೆಕಾಯಿ ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಸಿಗುತ್ತದೆ. ಇದರಲ್ಲಿ  ಹೆಚ್ಚು ನೀರಿನ ಅಂಶವಿರುತ್ತದೆ ಮತ್ತು ರೋಗನಿರೋಧಕ ಶಕ್ತಿಯು ಹೆಚ್ಚು. ಸೌತೆಕಾಯಿಯಲ್ಲಿ ಪ್ರೋಟೀನ್, ಬೀಟಾ ಕೆರೋಟಿನ್ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿ ಇವೆ.ಇದರ ಸೇವನೆ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

ಸಿಪ್ಪೆ ಸಹಿತ ಸೌತೆಕಾಯಿಯನ್ನು ಉಪ್ಪು ಮತ್ತು ಮೆಣಸು ಬಳಸಿ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ.

ಬೀಜವಿಲ್ಲದ ಎಳೆಯ ಸೌತೆಕಾಯಿಯನ್ನು ಸೇವಿಸುವುದರಿಂದ ವೀರ್ಯ ವೃದ್ಧಿಯಾಗುತ್ತದೆ.

ಮೂತ್ರ ರೋಗ ದಿಂದ ಬಳಲುತ್ತಿರುವವರಿಗೆ ಹಸಿ ಸೌತೆಕಾಯಿಯ ಸೇವನೆ ಲಾಭದಾಯಕವಾಗಿದೆ.

ಸೌತೆಕಾಯಿಯ ರಸವನ್ನು ಅಂಗಾಲು ಗಳಿಗೆ ಉಜ್ಜುವುದರಿಂದ ಕಣ್ಣುಗಳ ಉರಿ ಅಂಗಾಲಿನ ಉರಿಯು ಕಡಿಮೆಯಾಗಿ ಸುಖವಾದ ನಿದ್ರೆ ಬರುತ್ತದೆ.

ಸೌತೆಕಾಯಿಯ ರಸದೊಂದಿಗೆ ನಿಂಬೆರಸವನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ಮತ್ತು ಮುಖದ ಕಳೆ ಹೆಚ್ಚುತ್ತದೆ.

ಸೌತೆಕಾಯಿಯನ್ನು ಕತ್ತರಿಸಿ ಅರ್ಧ ಗಂಟೆ ಫ್ರಿಡ್ಜ್ ನಲ್ಲಿ ಇಟ್ಟು ನಂತರ ಅದನ್ನು ಕಣ್ಣುಗಳ ಮೇಲೆ ಇರಿಸುವುದರಿಂದ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳು ನಿವಾರಣೆಯಾಗುತ್ತದೆ ಮತ್ತು ಕಣ್ಣುಗಳ ಆಯಾಸ ಕಡಿಮೆಯಾಗುತ್ತದೆ, ಕಣ್ಣುಗಳು ನಳನಳಿಸುತ್ತವೆ.

ಹಸಿ ಸೌತೆಕಾಯಿಯ ಸೇವನೆಯು ಮಧುಮೇಹ ರಕ್ತದೊತ್ತಡ ಈ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಒಂದು ಉತ್ತಮ ಆಹಾರ.

ಸೌತೆಕಾಯಿಯ ನಿರಂತರ ಸೇವನೆಯಿಂದ ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ದೂರವಿರಿಸಬಹುದು.

LEAVE A REPLY

Please enter your comment!
Please enter your name here