ಆಹಾರ ಸೇವಿಸಿದ ನಂತರ ಕೆಲವರಿಗೆ ಎಲೆ ಅಡಿಕೆ ಸೇವಿಸುವ ಅಭ್ಯಾಸವಿರುತ್ತದೆ. ಅದು ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ, ಆದರೆ ಈಗಿನ ಕಾಲದಲ್ಲಿ ಎಲೆ ಅಡಿಕೆ ಸೇವನೆ ತುಂಬಾ ವಿರಳ ಅಂಥವರು ಸೋಂಪಿನ ಕಾಳನ್ನು ತಿನ್ನುವುದು ಒಳ್ಳೆಯದು. ಇದನ್ನು  ತಿನ್ನುವುದರಿಂದ ಸೇವಿಸುವ ಆಹಾರ ಜೀರ್ಣವಾಗುವುದರ ಜೊತೆಗೆ ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಹಾಗೆಯೇ ಇನ್ನೂ ಅನೇಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.

ಸರಿಯಾಗಿ ಮೂತ್ರ ವಿಸರ್ಜನೆ ಆಗದಿದ್ದಾಗ ಸೋಂಪಿನ ಕಾಳನ್ನು ರುಬ್ಬಿ ಹೊಟ್ಟೆಯ ಮೇಲೆ ಲೇಪಿಸುವುದರಿಂದ ಮೂತ್ರ ಕಟ್ಟು  ಸಮಸ್ಯೆ ನಿವಾರಣೆಯಾಗುತ್ತದೆ.

ಋತು ಸಮಯದಲ್ಲಿ ಹೊಟ್ಟೆ ನೋವು ಇದ್ದಾಗ ಸೋಂಪು ಕಾಳನ್ನು ಐದಾರು ಬಾರಿ ತಿನ್ನುವುದರಿಂದ ಹೊಟ್ಟೆ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.

ತಲೆಯಲ್ಲಿ ಹೊಟ್ಟು ಮತ್ತು ಹೇನಿನ ಸಮಸ್ಯೆ ಇದ್ದರೆ ಕೊಬ್ಬರಿ ಎಣ್ಣೆಗೆ ಸೋಂಪು ಕಾಳನ್ನು ಬೆರೆಸಿ ಬಿಸಿ ಮಾಡಿ ಎಣ್ಣೆಯನ್ನು ಲೇಪಿಸುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ ಮತ್ತು ಹೇನಿನ ಸಮಸ್ಯೆಯು ದೂರವಾಗುತ್ತದೆ.

ಸೋಂಪಿನ ಕಾಳನ್ನು ಪ್ರತಿದಿನ ತಿನ್ನುವುದರಿಂದ ಅಲರ್ಜಿ ದಮ್ಮು ದೂರವಾಗುವುದು ಜೊತೆಗೆ ಮೆದುಳನ್ನು ಚುರುಕುಗೊಳಿಸುತ್ತದೆ.

ಸೋಂಪಿನ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಮುಟ್ಟಿನ ನೋವು ಕಡಿಮೆಯಾಗುವುದರ ಜೊತೆಗೆ ಮೂತ್ರ ವಿಸರ್ಜನೆ ಯು ಚೆನ್ನಾಗಿ ಆಗುತ್ತದೆ.

ಬಾಣಂತಿಯರು ಹೆಚ್ಚಾಗಿ ಸೋಂಪಿನ ಕಾಳನ್ನು ತಿನ್ನುವುದರಿಂದ ಹಾಲು ವೃದ್ಧಿಯಾಗುತ್ತದೆ.

ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಅದರಿಂದ ಕಣ್ಣುಗಳನ್ನು ತೊಳೆದರೆ ಕಣ್ಣುಗಳ ಸಮಸ್ಯೆ ದೂರವಾಗುತ್ತದೆ.

ಸೋಂಪು ಕಾಳಿನ ನಿರಂತರ ಸೇವನೆಯಿಂದ ರಕ್ತದಲ್ಲಿನ ಅಧಿಕ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಇರುವ ಕೆಟ್ಟ ಅಂಶವನ್ನು ಹೊರಹಾಕುತ್ತದೆ.

ಹಾಲಿನಲ್ಲಿ ಸೋಂಪಿನ ಕಷಾಯವನ್ನು ಬೆರೆಸಿ ಮಕ್ಕಳಿಗೆ ಕುಡಿಸಿದರೆ ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಅಜೀರ್ಣ ಸಮಸ್ಯೆಯೂ ದೂರವಾಗುತ್ತದೆ.

LEAVE A REPLY

Please enter your comment!
Please enter your name here