ಹಲಸಿನ ಹಣ್ಣಿನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಪ್ರೋಟೀನ್ ಗಳು ಇವೆ. ಹಲಸಿನಹಣ್ಣಿನ ಬೀಜ ಕಾಯಿ ಮತ್ತು ಹಣ್ಣು ಎಲ್ಲವೂ ಹಲವಾರು ರೀತಿಯ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಹಲಸಿನ ಹಣ್ಣನ್ನು ತಿನ್ನೋದ್ರಿಂದ ಕ್ಯಾನ್ಸರ್ ಹೊಟ್ಟೆ ಹುಣ್ಣು ಶ್ವಾಸಕೋಶದ ಸಮಸ್ಯೆಗಳಿಂದ ದೂರವಿರಬಹುದು. ಹೆಚ್ಚಾಗಿ ತಿಂದರೆ ಹೊಟ್ಟೆ ಉಬ್ಬರ ಅಂತಹ ಸಮಸ್ಯೆಗಳು ಬರುತ್ತವೆ.

ಎಳೆ ಹಲಸಿನ ಕಾಯಿ ಕೊತ್ತಿ ಅದರಿಂದ ಹುಳಿ ಮಾಡಿಕೊಂಡು ತಿಂದರೆ ಪಿತ್ತ ನಿವಾರಣೆ ಯಾಗುತ್ತದೆ.ಹಲಸಿನ ಹಣ್ಣಿನಲ್ಲಿ ಹೆಚ್ಚು ಫೈಬರ್ ಇರುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಹಲಸಿನಹಣ್ಣಿನ ತೊಳೆಗಳನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ನರಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ.

ಹಲಸಿನ ಹಣ್ಣಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆಯುವುದರಿಂದ ಮುಖದಲ್ಲಿನ ನೆರಿಗೆಗಳು ಮತ್ತು ಸುಕ್ಕು ನಿವಾರಣೆಯಾಗುತ್ತದೆ.

ಹಲಸಿನಹಣ್ಣಿನ ಬೀಜ ಗಳನ್ನು ಹುರಿದು ತಿನ್ನುವುದರಿಂದ ವೀರ್ಯ ವೃದ್ಧಿಯಾಗುತ್ತದೆ.

ಹಲಸಿನ ಹಣ್ಣಿನ ಸೇವನೆಯಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಹಲಸಿನ ಹಣ್ಣಿನ ಸೇವನೆಯಿಂದ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹಲಸಿನ ಹಣ್ಣನ್ನು ಹಸಿ ಹಾಲಿನೊಡನೆ ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಮುಖದ ಬಣ್ಣ ತಿಳಿಯಾಗುತ್ತದೆ. ಹಲಸಿನ ಹಣ್ಣಿನಲ್ಲಿರುವ ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here