ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ನೀರಿನಂಶವು ಸಿಗುತ್ತದೆ. ಎಷ್ಟು ನೀರು ಕುಡಿದರೂ ಬಾಯಾರಿಕೆ ದೂರವಾಗುವುದಿಲ್ಲ. ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಆಯಾಸ ಬಾಯಾರಿಕೆ ನಿವಾರಣೆಯಾಗುತ್ತದೆ, ಮತ್ತು ದೇಹವು ತಂಪಾಗುತ್ತದೆ. 100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ ಶೇಕಡ 95.8 ಗ್ರಾಂ ತೇವಾಂಶ ಇರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಸಿ, ನಯಾಸಿನ್, ರೈಬೋಫ್ಲೇವಿನ್, ಥಿಯಾಮಿನ್, ಕಬ್ಬಿಣ, ಪಾಸ್ಪರಸ್ ಅಂಶಗಳು ಇರುತ್ತದೆ.

ಬೇಸಿಗೆಯಲ್ಲಿ ಕಲ್ಲಂಗಡಿ  ಹಣ್ಣನ್ನು ನಿರಂತರವಾಗಿ ಸೇವಿಸುವುದರಿಂದ ಮೂತ್ರ ವಿಸರ್ಜನೆ ಹೆಚ್ಚುವುದು ಹಾಗೂ ದೇಹದಲ್ಲಿನ ಕಲ್ಮಶಗಳು ದೂರವಾಗುತ್ತದೆ.

ಕಲ್ಲಂಗಡಿ ಹಣ್ಣಿನ ಮೇಲಿನ ಕೆಂಪಾದ ಹಣ್ಣನ್ನು ತಿಂದು ನಂತರ  ಬಿಳಿ ಅಂಶವನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು.

ಗಸಗಸೆ ಕಲ್ಲಂಗಡಿ ಬೀಜ ಮತ್ತು ಬಾದಾಮಿಯನ್ನು ಪುಡಿ ಮಾಡಿ ಹಾಲು ಸಕ್ಕರೆ ಬೆರೆಸಿ ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗಿ ಸುಖ ನಿದ್ರೆ ಬರುವುದರೊಂದಿಗೆ ಹೃದಯ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಅರ್ಧ ಲೋಟ ಕಲ್ಲಂಗಡಿ ರಸ ಅರ್ಧ ಲೋಟ ಮಜ್ಜಿಗೆಗೆ ಸ್ವಲ್ಪ ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಜಾಂಡಿಸ್ ಉರಿಮೂತ್ರ ಮೂತ್ರ ಕಟ್ಟು ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಒಂದು ಲೋಟ ಕಲ್ಲಂಗಡಿ ರಸಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದ ಅತಿಸಾರ ಕಾಲರ ವಾಂತಿ ಮತ್ತು ಆಮಶಂಕೆ ಈ ರೀತಿ ರೋಗಗಳು ನಿವಾರಣೆಯಾಗುತ್ತದೆ.

ರುಚಿ ಮಾತ್ರವಲ್ಲದೆ ಕಲ್ಲಂಗಡಿ ಹಣ್ಣಿನಲ್ಲಿ ಸಾರಜನಕ ಮೇದಸ್ಸು ಖನಿಜಾಂಶ ಕಾರ್ಬೋಹೈಡ್ರೇಟ್ ಕ್ಯಾಲ್ಸಿಯಂ ಕಬ್ಬಿಣದಂಶ ಹೆಚ್ಚಾಗಿ ಇರುವುದರಿಂದ ಮಕ್ಕಳಿಂದ ವೃದ್ಧರವರೆಗೂ ಈ ಹಣ್ಣಿನ ಸೇವನೆ ಲಾಭದಾಯಕವಾಗಿದೆ.

LEAVE A REPLY

Please enter your comment!
Please enter your name here