ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆಯೇ ಇದೆ ಉಪ್ಪು ಎಲ್ಲರ ಅಡುಗೆ ಮನೆಯಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದೆ. ಯಾವುದೇ ಅಡುಗೆಯಲ್ಲಿ ಉಪ್ಪು ಕಡಿಮೆಯಾದರೂ ಹೆಚ್ಚಾದರೂ ಅಡುಗೆಯ ರುಚಿ ಹಾಳಾಗುತ್ತದೆ. ಉಪ್ಪು ಕೇವಲ ಅಡುಗೆಗೆ ಮಾತ್ರವಲ್ಲ ದಿನನಿತ್ಯದ ಹಲವಾರು ಚಿಕ್ಕ ಪುಟ್ಟ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕಫ ಮತ್ತು ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಸಮಯದಲ್ಲಿ ಹುರಿಗಡಲೆಯ ಜೊತೆ 2 ಕಲ್ಲುಪ್ಪನ್ನು ಬೆರೆಸಿ ತಿನ್ನಬೇಕು, ಮತ್ತು ನೀರು ಕುಡಿಯದೆ ಮಲಗುವುದರಿಂದ ಕೆಮ್ಮು ಬೇಗ ವಾಸಿಯಾಗುತ್ತದೆ.

ಗಂಟಲು ಕಟ್ಟಿದ್ದರೆ ಗಂಟಲಿನಲ್ಲಿ ನೋವಿದ್ದರೆ ಬಿಸಿ ನೀರಿನಲ್ಲಿ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲಿನ ನೋವು ಕಡಿಮೆಯಾಗುತ್ತದೆ.

ನೆಗಡಿಯಿಂದ ಮೂಗು ಕಟ್ಟಿದ್ದರೆ ಬಿಸಿನೀರಿಗೆ ಒಂದು ಹಿಡಿ ಕಲ್ಲುಪ್ಪು ಬೆರೆಸಿ ಅದರ ಹಬೇಯನ್ನು ತೆಗೆದುಕೊಂಡರೆ ನೆಗಡಿ ಕಡಿಮೆಯಾಗುತ್ತದೆ.

ಬಾಯಲ್ಲಿ ಹುಣ್ಣು ಆಗಿದ್ದರೆ ಒಂದು ಕಪ್ಪು  ಬಿಸಿ ನೀರಿಗೆ ಅರ್ಧ ಸ್ಪೂನ್ ಅಡುಗೆ ಉಪ್ಪನ್ನು ಬೆರೆಸಿ ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣು ಬೇಗನೆ ಗುಣವಾಗುತ್ತದೆ.

ಚೇಳು ಕಚ್ಚಿದ ಜಾಗಕ್ಕೆ ತುಳಸಿ ರಸದೊಂದಿಗೆ ಉಪ್ಪನ್ನು ಬೆರೆಸಿ ಹಚ್ಚುವುದರಿಂದ ಉರಿ ಮತ್ತು ಏರಿಸುವುದು ಕಡಿಮೆಯಾಗುತ್ತದೆ.

ಲವಂಗ ದೊಂದಿಗೆ ಕಲ್ಲುಪ್ಪನ್ನು ಬಾಯಿಯಲ್ಲಿ ಹಾಕಿಕೊಂಡು ರಸ ಹೀರುವುದರಿಂದ ಕೆಮ್ಮು ಮತ್ತು ಕಫ ನಿವಾರಣೆಯಾಗುತ್ತದೆ.

ಸಂಧಿವಾತದಿಂದ ಊದಿಕೊಂಡಿರುವ ಭಾಗಕ್ಕೆ ಅಥವಾ  ಏನಾದರೂ ಪೆಟ್ಟು ಬಿದ್ದು ಜಾಗವು ಊದಿಕೊಂಡಿದ್ದರೆ ಆ ಜಾಗಕ್ಕೆ ಉಪ್ಪಿನ  ಕಾವು ಕೊಡುವುದರಿಂದ ನೋವು ಕಡಿಮೆಯಾಗಿ ಊದಿಕೊಂಡಿರುವುದು ಹೋಗುತ್ತದೆ.

ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ ಉಪ್ಪಿನ ಪುಡಿಯನ್ನು ಮುಖಕ್ಕೆ ಹಚ್ಚಿ ಎರಡು ನಿಮಿಷ ನಯವಾಗಿ ಉಜ್ಜಿದರೆ ಮುಖವು ಕಾಂತಿಯಿಂದ ಕಂಗೊಳಿಸುತ್ತದೆ.

ಕಾಲಿನ ಪಾದಗಳಲ್ಲಿ ತುಂಬಾ ನೋವಿದ್ದರೆ ಕಾಲುಗಳು ತುಂಬಾ ಬಾಳಿದ್ದರೆ ಬಿಸಿ ನೀರಿನಲಿ ಕಲ್ಲುಪ್ಪನ್ನು ಹಾಕಿ ಕಾಲುಗಳನ್ನು ಅದರಲ್ಲಿ 1/2 ಗಂಟೆ ಇಟ್ಟುಕೊಂಡರೆ ಕಾಲುಗಳು ನೋವು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here