ನಮ್ಮ ದೇಹದ ಆರೋಗ್ಯ ಕಾಪಾಡಲು ವಿಟಮಿನ್ ಗಳು ತುಂಬಾ ಮುಖ್ಯ. ಅದರಲ್ಲೂ ಬೇಸಿಗೆಯಲ್ಲಿ ಸಾಮಾನ್ಯವಾಗಿ ವಿಟಮಿನ್ ಸಿ ಕೊರತೆ ಹೆಚ್ಚು ಕಂಡುಬರುತ್ತದೆ. ವಿಟಮಿನ್ ಸಿ ಕೊರತೆಯಿಂದ ಕಣ್ಣಿನ ತೊಂದರೆ ಪ್ರಸವಪೂರ್ವ ಆರೋಗ್ಯ ಸಮಸ್ಯೆ ಸ್ಕರ್ವಿ ಮಧುಮೇಹ ಮತ್ತು ಇನ್ನೂ ಅನೇಕ ಚರ್ಮ ಸಂಬಂಧಿ ಕಾಯಿಲೆಗಳು ಮತ್ತು ನಿಶಕ್ತಿ ಅಂತಹ ಸಮಸ್ಯೆಗಳು ಕಂಡುಬರುತ್ತವೆ.

ವಿಟಮಿನ್ ಸಿ ಯ ನಿರಂತರ ಸೇವನೆಯಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗಿ ಜೀವಕೋಶಗಳ ಹಾನಿಯನ್ನು ತಡೆಗಟ್ಟುತ್ತದೆ. ಹಲವಾರು ಹಣ್ಣು ಮತ್ತು ತರಕಾರಿ ಸೇವನೆಯಿಂದ ವಿಟಮಿನ್ ಸಿ ಯ ಕೊರತೆಯನ್ನು ನೀಗಿಸಬಹುದು.

ಸೀಬೆ ಹಣ್ಣು ಅಥವಾ ಪೇರಲೆ ಹಣ್ಣು ಈ ಹಣ್ಣಿನಲ್ಲಿ ಶೇಕಡ 628 ರಷ್ಟು ವಿಟಮಿನ್ ಸಿ ಇರುವುದರಿಂದ ಪ್ರತಿದಿನ ಈ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾಗಿರುವ ವಿಟಮಿನ್ ದೊರೆಯುತ್ತದೆ. ಹಳದಿ ಮತ್ತು ಕೆಂಪು ಕ್ಯಾಪ್ಸಿಕಂ ಇವುಗಳಲ್ಲಿ ಕೂಡ ಯಥೇಚ್ಛವಾಗಿ ವಿಟಮಿನ್ ಸಿ ಅಂಶ ಇರುವುದರಿಂದ ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಕೊತ್ತಂಬರಿ ಸೊಪ್ಪಿನಲ್ಲಿ ಶೇಕಡ 33ರಷ್ಟು ವಿಟಮಿನ್ ಸಿ ಇದೆ ಇದರ ಬಳಕೆಯಿಂದ ಆಹಾರದ ರುಚಿ ಮತ್ತು ಸುವಾಸನೆ ಹೆಚ್ಚುತ್ತದೆ. ಪೈನಾಪಲ್, ಪಪ್ಪಾಯಿ, ಕಿವಿ, ಕಿತ್ತಳೆ, ಸ್ಟ್ರಾಬೆರಿ, ಲಿಚಿ, ಈ ಹಣ್ಣು ಗಳಲ್ಲೂ ಅತಿ ಹೆಚ್ಚು ವಿಟಮಿನ್ ಸಿ ಇರುವುದರಿಂದ ಪ್ರತಿದಿನ ಯಾವುದಾದರೂ ಒಂದು ಹಣ್ಣನ್ನು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ.

ನಿಂಬೆಹಣ್ಣು ಹೂಕೋಸು ನೆಲ್ಲಿಕಾಯಿ ಈ ರೀತಿಯ ಹಲವಾರು ತರಕಾರಿಗಳನ್ನು ಅತ್ಯಧಿಕವಾಗಿ ವಿಟಮಿನ್ ಸಿ ಅಂಶ ಇರುವುದರಿಂದ ಇವುಗಳನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಬಳಸಿ ಸೇವಿಸುವುದರಿಂದ ಹಲವಾರು ಕಾಯಿಲೆಗಳಿಂದ ದೂರವಿರಬಹುದು.

LEAVE A REPLY

Please enter your comment!
Please enter your name here