ಸೌಂದರ್ಯ ಎನ್ನುವುದು ಕೇವಲ ಮುಖಕ್ಕೆ ಮಾತ್ರ ಸೀಮಿತವಾಗಿಲ್ಲ. ತಲೆಯಿಂದ ಪಾದದವರೆಗೂ ಎಲ್ಲವೂ ಅಚ್ಚುಕಟ್ಟಾಗಿ ಇದ್ದರೆ ಮಾತ್ರ ಸೌಂದರ್ಯ ಇಮ್ಮಡಿಯಾಗುತ್ತದೆ. ಮುಖದ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡುವ ಎಲ್ಲರೂ ತಮ್ಮ ಪಾದಗಳ ಆರೈಕೆಯ ಬಗ್ಗೆ ಗಮನ ಕೊಡುವುದು ತುಂಬಾ ಕಡಿಮೆ ಒಡೆದ ಹಿಮ್ಮಡಿ ಗಳು ನಿಮ್ಮ ಅಂದವನ್ನು ಕೆಡಿಸುವುದಲ್ಲದೆ, ತುಂಬಾ ನೋವನ್ನು ಉಂಟು ಮಾಡುತ್ತವೆ. ಒಡೆದ ಹಿಮ್ಮಡಿ ಗಳಿಗೆ ಮತ್ತು ಸುಂದರವಾದ ಪಾದಗಳಿಗೆ ಕೆಲವೊಂದು ಮನೆ ಮದ್ದುಗಳು ಇಲ್ಲಿವೆ…

ಎತ್ತರವಾದ ಚಪ್ಪಲಿಗಳನ್ನು ಬಳಸುವುದರಿಂದ ಹಿಮ್ಮಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ ಹಿಮ್ಮಡಿಗಳು ಬಿರುಕು ಬಿಡುತ್ತವೆ ಮತ್ತು ಬೆನ್ನು, ಸೊಂಟದ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಎತ್ತರದ ಚಪ್ಪಲಿಗಳನ್ನು ಬಳಸದಿರುವುದು ಸೂಕ್ತ.

ಹಿಮ್ಮಡಿ ಗಳು ಮುಚ್ಚುವಂತಹ ಶೂ ಮತ್ತು ಚಪ್ಪಲಿಗಳನ್ನು ಧರಿಸುವುದು ಒಳ್ಳೆಯದು. ಬಿರುಕು ಬಿಟ್ಟರುವ ಹಿಮ್ಮಡಿಗಳಲ್ಲಿ  ಧೂಳು ಸೇರಿ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುವುದರಿಂದ ಒಡೆದ ಹಿಮ್ಮಡಿಗಳು ಮುಚ್ಚುವಂತಹ ಶೂ ಚಪ್ಪಲಿಗಳನ್ನು ಧರಿಸಿ.

ಒಡೆದ ಹಿಮ್ಮಡಿಗಳನ್ನು ರಾತ್ರಿ ಮಲಗುವ ಮುನ್ನ ಚೆನ್ನಾಗಿ ತೊಳೆದು ವರೆಸಿ ಯಾವುದಾದರೂ ಕೋಲ್ಡ್ ಕ್ರೀಮ್ ಅಥವಾ ಮಾಯಿಶ್ಚರೈಸಿಂಗ್ ಕ್ರೀಮನ್ನು ಹಚ್ಚಬೇಕು ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಒಡೆದ ಹಿಮ್ಮಡಿ ಗಳಿಂದ ಮುಕ್ತಿ ದೊರೆಯುತ್ತದೆ.

ವಾರದಲ್ಲಿ ಒಂದು ಬಾರಿ ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಪಾದಗಳನ್ನು 15 ನಿಮಿಷ ನೆನೆಸಿ ಚೆನ್ನಾಗಿ ಉಜ್ಜಿ ತೊಳೆಯುತ್ತಿರಬೇಕು ಹೀಗೆ ಮಾಡುವುದರಿಂದ ಡೆಡ್ ಸ್ಕಿನ್ ದೂರವಾಗಿ ಚರ್ಮವು ನಯವಾಗುತ್ತದೆ.

ಅರ್ಧ ಹೋಳು ನಿಂಬೆ ಹಣ್ಣಿಗೆ ಉಪ್ಪು ಮತ್ತು ಸಕ್ಕರೆ ಬೆರೆಸಿ ಪಾದಗಳನ್ನು ಉಜ್ಜಿ ಬಿಸಿ ನೀರಿನಿಂದ ತೊಳೆಯಬೇಕು ಹೀಗೆ ಮಾಡುವುದರಿಂದ ಕಪ್ಪಾದ ನಿಮ್ಮ ಪಾದಗಳ ಬಣ್ಣ ತಿಳಿಯಾಗುತ್ತದೆ.

ರಾತ್ರಿ ಮಲಗುವ ಮೊದಲು ತೆಂಗಿನ ಎಣ್ಣೆ ಆಲಿವ್ ಆಯಿಲ್ ಬಾದಾಮಿ ಎಣ್ಣೆ ಇವುಗಳಲ್ಲಿ ಯಾವುದಾದರೂ ಒಂದನ್ನು ಪಾದಗಳಿಗೆ ಹಚ್ಚಿ ಐದು ನಿಮಿಷ ಮಸಾಜ್ ಮಾಡಿ ಕಾಲುಚೀಲಗಳನ್ನು ಹಾಕಿಕೊಂಡು ಮಲಗಬೇಕು ಹೀಗೆ ಮಾಡುವುದರಿಂದ ಒಡೆದ ಹಿಮ್ಮಡಿ ಗಳು ಬೇಗನೆ ಗುಣವಾಗುತ್ತದೆ.

ಬಿರುಕು ಬಿಟ್ಟ ಹಿಮ್ಮಡಿಗಳನ್ನು ಪ್ರತಿದಿನ ಪ್ಯೂಮಿಕ್ ಸ್ಟೋನ್ ನಿಂದ ಉಜ್ಜ ಬೇಕು ಹೀಗೆ ಮಾಡುವುದರಿಂದ ಚರ್ಮದ ಡೆಡ್ ಸ್ಕಿನ್ ದೂರವಾಗಿ ಹಿಮ್ಮಡಿ ಗಳು ಸುಂದರವಾಗುತ್ತದೆ.

LEAVE A REPLY

Please enter your comment!
Please enter your name here