ಪ್ರಕೃತಿಯು ನಮಗೆ ದೇವರು ನೀಡಿರುವ ಒಂದು ದೊಡ್ಡ ವರ. ಇದರಲ್ಲಿ ಹಲವಾರು ಹಣ್ಣುಗಳ ಮರ, ಹೂವುಗಳು, ಇಲ್ಲಿ ಸಿಗುವಂತಹ ಔಷಧಿಗಳ ಸಸ್ಯಗಳು, ಮರಗಳು, ಹೂವುಗಳು, ಗಿಡಗಳು, ಇದೆಲ್ಲ ದೇವರ ಕೃಪೆ. ಯಾವ ಹಣ್ಣುಗಳನ್ನು ತಿಂದರೆ ಎಷ್ಟು ಪೋಷಕಾಂಶಗಳು ಸಿಗುತ್ತವೆ. ಎಷ್ಟು ಅರೋಗ್ಯ ಲಾಭಗಳಿವೆ ಎಂದು ನಿಮಗೆ ತಿಳಿದರೆ ಒಳ್ಳೇದು ಅಲ್ಲವೇ. ಹೀಗೆ ಕಿತ್ತಳೆಯು ಪ್ರಕೃತಿ ನಮಗೆ ನೀಡಿದ ಒಂದು ಅದ್ಭುತ ಮರ. ಕಿತ್ತಳೆ ಹಣ್ಣುಗಳನ್ನು ತಿನುದ್ರಿಂದ ಎಷ್ಟೆಲ್ಲ ಲಾಭಗಳಿವೆ ಅಂತ ಗೊತ್ತಾದರೆ ನೀವು ಇದನ್ನು ಒಂದು ದಿವಸನು ಬಿಡದೆ ತಿನ್ನುವಿರಿ. ಏನು ಲಾಭಗಳಿವೆ ಅಂತ ಗೊತ್ತಾಗಬೇಕಾ ಹಾಗಾದ್ರೆ ನೀವು ಈ ಲೇಖನ ಓದಲೇ ಬೇಕು…

** ಕಿತ್ತಳೆ ಹಣ್ಣುಗಳನ್ನು ನಿತ್ಯವೂ ಸೇವಿಸದರೆ, ಕಣ್ಣುಗಳು ಹಾಳಾಗದಂತ್ತೆ ನೋಡಿಕೊಳ್ಳುತ್ತವೆ. ಇಷ್ಟೇ ಅಲ್ಲದೆ  ದೃಷ್ಟಿ ಹಾಳಾಗದಂತ್ತೆ ಇದು ನೋಡಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.ಕಣ್ಣಿಗೆ ಬೇಗ ಪೂರೇ ಬರದಂತೆ ತಡೆಹಿಡಿಯುತ್ತದೆ.ಇದರಲ್ಲಿ ವಿಟಮಿನ್ ಎ, ಅಧಿಕವಾಗಿರುವ ಕಾರಣ ಕಣ್ಣಿನ ದೃಷ್ಟಿ ಮಂದಗಾದಂತ್ತೆ ತಡೆಹಿಡಿಯುವುದು.

** ಕಿತ್ತಳೆಯು ನಾರಿನ ಅಂಶವನ್ನು ಹೊಂದಿರುವ ಹಣ್ಣು ಇದನ್ನು ನಿತ್ಯದಲ್ಲಿ ಉಪಯೋಗಿಸಿದರೆ ಮಲಬದ್ದತೆಯ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ನೀರನ್ನು ಹೆಚ್ಚಾಗಿ ಕುಡಿಯಬೇಕು ಈ ಸಮಸ್ಯೆ ಇದ್ದವರು. ಈ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿರುವ ಕಾರಣ ಈ ಹಣ್ಣನ್ನು ಹೆಚ್ಚಾಗಿ ಉಪಯೋಗ ಮಾಡಬಹುದು.

** ಅಧಿಕ ರಕ್ತದೊತ್ತಡವನ್ನು ಕಿತ್ತಳೆಯು ನಿಯಂತ್ರಿಸುತ್ತದೆ. ಇದರಲ್ಲಿರುವ ಪೊಟ್ಯಾಷಿಯುಮ್ ಹೊಂದಿರುವ ಕಾರಣ ನರಗಳನ್ನು ಸಡಿಲಗೊಳಿಸಿ, ರಕ್ತದೊತ್ತಡವನ್ನು ಹತೋಟಿಯಲ್ಲಿಯಿರುವಂತೆ ಇದು ಸಹಾಯ ಮಾಡುತ್ತದೆ.

** ಕಿತ್ತಳೆಯು ಕಿಡ್ನಿ ಕಾರ್ಯವನ್ನು ಚೆನ್ನಾಗಿ ಮಾಡುವದಕ್ಕೆ ಸಹಕಾರಿ. ಕಿಡ್ನಿಗಳಲ್ಲಿ ಕಲ್ಲು ಆಗದಂತೆ ಇದು ನೋಡಿಕೊಳ್ಳುತ್ತದೆ. ಪೋಟ್ಯಾಷಿಯುಮ್ ನೀರಿನ ಸಮತೋಲತೆಯನ್ನು ಕಾಯದುಕೊಳ್ಳುತ್ತದೆ. ಆದ್ದರಿಂದ ಕಿತ್ತಳೆಯ ಬಳಕೆ ಹೆಚ್ಚಾಗಿರಲಿ.

** ಅಸ್ತಮಾ ಇರುವವರು ಕಿತ್ತಳೆಯನ್ನು ತಿನ್ನಬಹುದು. ನಿಯಮಿತವಾಗಿ ತಿನ್ನುತಾ ಬಂದರೆ ಅಸ್ತಮಾ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ.( ವೈದ್ಯರ ಸಲಹೆಯ ಪಡೆದು ಹಣ್ಣುಗಳನ್ನು ಸೇವಿಸಿ ).

** ಆಹಾರ ಜೀರ್ಣವಾಗಬೇಕು ಅಂದರೆ ಕಿತ್ತಳೆ ಹಣ್ಣನ್ನು ತಿನ್ನಬೇಕು ಇದು ಸೇವನೆ ಮಾಡಿರುವ ಆಹಾರವನ್ನು ಬೇಗ ಜೀರ್ಣಮಾಡಲು ಸಹಾಯವಾಗುತ್ತದೆ. ಕಿತ್ತಳೆ ನಿತ್ಯದಲ್ಲೂ ಉಪಯೋಗಿಸಿದರೆ, ಜೀರ್ಣಕ್ರಿಯೆ ಸುಧಾರಿಸುವುದು. ಅಸಿಡಿಟಿ ಕಡಿಮೆ ಮಾಡಿ ಹೆಚ್ಚು ಹಸಿವು ಆಗಲು ನೆರವಾಗುತ್ತದೆ. ಹೊಟ್ಟೆಯಲ್ಲಿ ಆಗುವ ಸಣ್ಣ ಪುಟ್ಟ ನೋವುಗಳಿಗೆ ಇದು ದಿವ್ಯ ಔಷಧಿ.

** ದೇಹದಲ್ಲಿ ಬೇಡದಿರುವ ಕೊಬ್ಬು ಕರಾಗಬೇಕಾದರೆ ನಿತ್ಯದಲ್ಲೂ ಉಪಯೋಗಿಸಿ ಕಿತ್ತಳೆ ಹಣ್ಣನ್ನು. ದೇಹಕ್ಕೆ ಬೇಡದಿರುವ ಕೊಬ್ಬನ್ನು ಹೊರಗೆ ಹಾಕಿ ಹೃದಯವನ್ನು ಆರೋಗ್ಯವಾಗಿ ಇಡುತ್ತದೆ.

** ಕಿತ್ತಳೆ ಹಣ್ಣಿನಲ್ಲಿ ಪೋಷ್ಟಿಕಾಂಶಗಳು ಹೆಚ್ಚಾಗಿ ಇರುತ್ತವೆ. ಇದನ್ನು ಮಕ್ಕಳಿಗೆ ಕೊಡುವುದರಿಂದ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಯಾವದೇ ಆರೋಗ್ಯದ ಸಮಸ್ಯೆಯು ಬರದಂತ್ತೆ ನೋಡಿಕೊಳ್ಳುತ್ತದೆ. ಕಿತ್ತಳೆ ಹಣ್ಣನ್ನು ನಿತ್ಯವೂ ಉಪಯೋಗಿಸಿ ಆರೋಗ್ಯವನ್ನು ಅನಾರೋಗ್ಯವಾಗದಂತೆ ನೋಡಿಕೊಳ್ಳಿ.

**ಬೇಸಿಗೆಯ ಕಾಲದಲ್ಲಿ ಕಿತ್ತಳೆಯ ಜ್ಯೂಸ್ ಕುಡಿಯಬಹುದು, ಇದರಿಂದ ಬಿಸಿಲಿನ ಧಗೆಯಿಂದ ಬಾಯಿ ಅರುವುದು ಕಡಿಮೆಗೊಳ್ಳುತ್ತದೆ.ಇದನ್ನು ಅಡಿಗೆಯಲ್ಲೂ ಕೂಡ ಬಳಸಲಾಗುತ್ತದೆ. ಇದರ ಸಿಪ್ಪೆಯಿಂದ ಗೊಜ್ಜು ಮಾಡಿದರೆ ತುಂಬಾ ಚೆನ್ನಾಗಿ ಇರುತ್ತದೆ. ಕೇಕಗಳಲ್ಲೂ ಕೂಡ ಇದರ ಯೆಸನ್ಸ್ ಬಳಸಲಾಗುತ್ತದೆ.

 

LEAVE A REPLY

Please enter your comment!
Please enter your name here