ದೇಹವು ಆರೋಗ್ಯವಾಗಿರಲು ಹಣ್ಣು ತರಕಾರಿಗಳ ಸೇವನೆ ತುಂಬಾ ಮುಖ್ಯ. ಹಸಿ ಸೊಪ್ಪುಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ದೊರೆಯುತ್ತವೆ. ಅಲ್ಲದೆ ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಹಣ್ಣುಗಳನ್ನು ಸೇವನೆ ಮಾಡೋದ್ರಿಂದ ದೇಹಕ್ಕೆ ಒಳ್ಳೆಯ ಶಕ್ತಿ, ರಕ್ತ ಹೆಚ್ಚು ಮಾಡುವಲ್ಲಿ ಇವು ಸಹಕಾರಿ. ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು, ಸಬ್ಬಸಿಗೆ ಸೊಪ್ಪು, ಇವೆನ್ನೆಲ್ಲ ಹಸಿ ಕೋಸಂಬರಿ ತರ ಮಾಡಿಕೊಂಡು ತಿನ್ನಬೇಕು ತುಂಬಾ ರುಚಿ ಇರುತ್ತದೆ. ಈ ಎಲ್ಲ ಸೊಪ್ಪಿನ ಬಳಕೆ ಜೊತೆ ಪಾಲಕ್ ಸೊಪ್ಪುನ್ನು ಹೆಚ್ಚಾಗಿ ಉಪಯೋಗಿಸಿ. ಇದನ್ನು ಮಕ್ಕಳಿಗೆ ಹೆಚ್ಚಾಗಿ ಕೊಡಿ ಇದರಿಂದ ಅವರಿಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ ”ಸ್ಪಿನ್ಚ್” ಎಂದು ಕರೆಯುತ್ತಾರೆ. ಇದರ ಉಪಯೋಗ ಇಷ್ಟೇ ಅಲ್ಲದೆ ಪಾಲಕ್ ಸೊಪ್ಪು ಹಲವು ಕಾಯಿಲೆಗಳಿಗೆ ರಾಮಬಾಣ ಹೇಗೆ ಅಂತೀರಾ? ಈ ಕೆಳಗಡೆ ಓದಿ…

** ಪಾಲಕ್ ಸೊಪ್ಪಿನಲ್ಲಿ ಪ್ರೋಲೇಟ್ ಅನ್ನು ಅಂಶವನ್ನು ಹೊಂದಿರುವ ಕಾರಣ ಇದನ್ನು ನಿತ್ಯ ಸೇವಿಸಿದರೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.

** ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಪಾಲಕ್ ಸೊಪ್ಪನ್ನು ಹೆಚ್ಚಾಗಿ ಸೇವಿಸಬೇಕು. ಇದರಲ್ಲಿರುವ ಕ್ಯಾರೋಟಿನೈಡ್ ಎಂಬ ಅಂಶವು ಕೊಬ್ಬು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಡಯಟ್ ಮಾಡುವುರು ಇದನ್ನು ಹೆಚ್ಚಾಗಿ ಉಪಯೋಗಿಸಬಹುದು.

** ಈಸ್ಟೆಲಾ ಕ್ರಿಮ್ ಬಳ್ಸಿದ್ರು, ಡಾಕ್ಟರ್ ಕಡೆ ಕಡೆ ತೋರಸಿದ್ರು ಮೊಡವೆಗಳು ಮಾತ್ರ ಹೋಗ್ತಾ ಇಲ್ಲ ಅಂತ ಬೇಜಾರ್ ಮಾಡ್ಕೋಬೇಡಿ, ನಿತ್ಯದಲ್ಲೂ ಉಪಯೋಗಿಸಿ ಪಾಲಕ್ ಸೊಪ್ಪನ್ನು ಮೊಡವೆಗಳನ್ನು ದೂರ ಇರಿಸಿ.

** ಚಿಕ್ಕ ವಯಸ್ಸಿಗೆ ಕನ್ನಡಕ ಬರಬಾರದು ಅಂದರೆ ಮಕ್ಕಳಿಗೆ ಹೆಚ್ಚಾಗಿ ಪಾಲಕ್ ಸೊಪ್ಪುನ್ನು ಕೊಡಿ. ಮಕ್ಕಳು ಹಸಿ ಸೊಪ್ಪನ್ನು ತಿನ್ನುವುದಿಲ್ಲ ಅದರಿಂದ ಅವರಿಗೆ ಪಾಲಕ್ ಸೂಪ್, ಪಾಲಕ್ ರೈಸ್, ಪಾಲಕ್ ಪನ್ನೀರ್, ಪಾಲಕ್ ತವ್ವೆ, ಪಾಲಕ್ ಪೂರಿ,ಪಾಲಕ್ ಜ್ಯೂಸ್, ಈ ತರಹದ ತಿನಿಸುಗಳನ್ನು ಮಾಡಿ ಕೊಡಬಹುದು.

ರಕ್ತ ಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ದಿನದಲ್ಲಿ ಪಾಲಕ್ ಸೊಪ್ಪಿನ ರಸವನ್ನು ಕುಡಿತಾ ಬಂದರೆ ಈ ಸಮಸ್ಯೆ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ.

ಮಕ್ಕಳಲ್ಲಿ ಅಥವಾ ದೊಡ್ಡವರಿಗೆ ನೆನಪಿನ ಶಕ್ತಿ ಹೆಚ್ಚಾಗಬೇಕು ಅಂದರೆ ಹೆಚ್ಚಾಗಿ ಪಾಲಕ್ ಸೊಪ್ಪು ಕೊಡಿ ಇದರಿಂದ ಅವರ ಮೆದುಳಿನ ನರಕೋಶಗಳು ವೃದ್ಧಿಯಾಗಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

ಸಂಧಿವಾತದ ಸಮಸ್ಯೆ ಇದ್ದರೆ, ಪಾಲಕ್ ಸೇವನೆ ಮಾಡಿ ನೋವಿನಿಂದ ಮುಕ್ತಿ ಪಡೆಯಿರಿ.

ಪಾಲಕ್ ಸೊಪ್ಪಿನಲ್ಲಿ ಹೆಚ್ಚು ನಾರಿನ ಅಂಶ ಇರುತ್ತದೆ. ಇದನ್ನು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಉಪಯೋಗಿಸಬೇಕು. ದೇಹಕ್ಕೆ ತಂಪು ನೀಡುವುದರ ಜೊತೆಗೆ ತಿಂದಿರುವ ಆಹಾರವನ್ನು ಜೀರ್ಣವಾಗುವಂತ್ತೆ ಸಹಕರಿಸುತ್ತದೆ.

ಕ್ಯಾನ್ಸರ್ ರೋಗಿಗಳು ಪಾಲಕ್ ಸೊಪ್ಪು ಅನ್ನು ಹೆಚ್ಚಾಗಿ ಸೇವಿಸಬೇಕು( ವೈಧ್ಯರ ಸಲಹೆಯ ಮೇರಿಗೆ ) ಇದರಲ್ಲಿ ಕ್ಯಾನ್ಸರ್ ಕಣಗಳನ್ನು ಕೊಲ್ಲಬಲ್ಲ ಹೆಚ್ಚಿನ ಸಾಮರ್ಥ್ಯ ಇರುತ್ತದೆ.

ಕೂದಲಿನ ಬೆಳವಣಿಗೆಗೆ ಪಾಲಕ್ ಸೊಪ್ಪು ತುಂಬಾನೇ ಸಹಕಾರಿ. ವಿಟಮಿನ್ ಎ, ಮತ್ತು ವಿಟಮಿನ್ ಸಿ, ಪ್ರೊಟೀನ್ ಅಂಶಗಳನ್ನು ಪಾಲಕ್ ಸೊಪ್ಪಿನಲಿದೆ. ಅದರಿಂದ ಈ ಸೊಪ್ಪನ್ನು ಹೆಚ್ಚಾಗಿ ಉಪಯೋಗಿಸಬೇಕು ಇದರಿಂದ ಕೂದಲು ಉದುರುವುದು ಕಡಿಮೆ ಆಗುವುದು.

ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುವುರು ಪಾಲಕ್ ಸೊಪ್ಪನ್ನು ಹೆಚ್ಚಾಗಿ ತಿನ್ನಬೇಕು. ಇದರಿಂದ ನರಗಳು ಶಕ್ತಿ ಹೊಂದುತ್ತವೆ.

ವಸುಡಿನಲ್ಲಿ ರಕ್ತ ಸ್ರಾವ ಆಗುತ್ತಿದರೆ, ಪಾಲಕ್ ಸೊಪ್ಪಿನ ಜ್ಯೂಸ್ ಮಾಡಿಕೊಂಡು ಕುಡಿಯಬೇಕು ಇದರಿಂದ ವಸಿಡಿನಲ್ಲಿ ರಕ್ತ ಬರುವುದು ಕಡಿಮೆಯಾಗುತ್ತದೆ.

ಗರ್ಭಿಣಿಯರು ಪಾಲಕ್ ಸೊಪ್ಪನ್ನು ಹೆಚ್ಚಾಗಿ ಸೇವಿಸಬೇಕು ಇದರಿಂದ ಮಗುವಿಗೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತವೆ .ಇದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ.

 ಹಾಲು ಕುಡಿಸುವ ತಾಯಿಯಂದ್ರು ಪಾಲಕ್ ಸೊಪ್ಪನ್ನು ಹೆಚ್ಚಾಗಿ ತಿನ್ನಬೇಕು. ಇದರಿಂದ್ ಹಾಲು ಚೆನ್ನಾಗಿ ವೃದ್ಧಿಯಾಗುತ್ತದೆ. ಮಗುವಿಗೆ ಯಾವದೇ ರೀತಿಯ ಮೇಲಿನ ಆಹಾರದ ಅವಶ್ಯಕೆತೆ ಬೇಕೆನಿಸುವುದಿಲ್ಲ. ಜ್ಯೂಸ್ ಮಾಡಿಕೊಂಡು ಕುಡಿದರೆ ಇನ್ನು ಉತ್ತಮ.

LEAVE A REPLY

Please enter your comment!
Please enter your name here